ಮದುವೆ ನಂತರ ಮೊದಲ ವಿಡಿಯೋ ಹಂಚಿಕೊಂಡ ಚಂದನ್ ಕವಿತಾ ಗೌಡ..! ವಿಡಿಯೋ ವೈರಲ್

Updated: Monday, June 14, 2021, 11:50 [IST]

    

ಕನ್ನಡ ಕಿರುತೆರೆಯ ಖ್ಯಾತ ಜೋಡಿಯಾಗಿ ಮಿಂಚಿದ್ದ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದನ್ ಹಾಗೂ ಚಿನ್ನು ಅಲಿಯಾಸ್ ಕವಿತಾ ಗೌಡ ಏಪ್ರಿಲ್ ಒಂದಕ್ಕೆ ಇದ್ದಕಿದ್ದಂತೆ ಎಂಗೇಜ್ಮೆಂಟ್ ಮಾಡಿಕೊಂಡು, ಅತ್ತ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡಿದ್ದರು. ಬಳಿಕ ಕಳೆದ ತಿಂಗಳು ವಿವಾಹಕ್ಕೆ ಕಾಲಿಟ್ಟು ದಾಂಪತ್ಯ ಜೀವನ ಆರಂಭಿಸಿದ ಈ ಜೋಡಿ, ಹೆಚ್ಚು ಸುದ್ಧಿಯಲ್ಲಿತ್ತು. ಹೌದು ಕಳೆದ ತಿಂಗಳು ಸಿಂಪಲ್ಲಾಗಿ ಕೇವಲ ಕುಟುಂಬಸ್ಥರ ಹಾಗೂ ಕೆಲ ಸ್ನೇಹಿತರ ಸಮ್ಮುಖದಲ್ಲಿ ಕೊರನ ನಡುವೆ ವಿವಾಹವಾಗಿದ್ದ ನಟ ಚಂದನ್ ಹಾಗೂ ಕವಿತ ಗೌಡ ಅವರ ಮದುವೆಗೆ ಇವರ ನೆಚ್ಚಿನ ಅಭಿಮಾನಿಗಳು ಶುಭಕೋರಿದ್ದರು.  

ಈ ಜೋಡಿಯನ್ನ ಮದುವೆಯ ಡ್ರೆಸ್ ಅಲ್ಲಿ ನೋಡಿ ಸಾಕಷ್ಟು ಅಭಿಮಾನಿಗಳು ಫಿದಾ ಸಹ ಆಗಿದ್ದರು. ಹೌದು ಈ ಜೋಡಿ ಮದುವೆ ವಿಚಾರವಾಗಿ ಮೊದಲಿನಿಂದಲೂ  ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡುತ್ತಾ ಹೆಚ್ಚು ಚರ್ಚೆಗೆ ಒಳಗಾಗಿತ್ತು. ಸಾಕಷ್ಟು ಅಭಿಮಾನಿಗಳ ಆಸೆಯಂತೆ ಇವರಿಬ್ಬರು ಮದುವೆ ಸಹ ಕಳೆದ ತಿಂಗಳು ಮಾಡಿಕೊಂಡರು. ಹೌದು ಇದೀಗ ಮೊಟ್ಟಮೊದಲ ಬಾರಿಗೆ ಮದುವೆಯಾದ ಬಳಿಕ ನಟ ಚಂದನ್ ಹಾಗೂ ಕವಿತಾ ಒಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಈ ಕ್ಯೂಟ್ ಕಪಲ್ ನೋಡುತ್ತಿದ್ದರೆ ಖುಷಿಯಾಗುತ್ತದೆ.

ಅಷ್ಟಕ್ಕೂ ಮದುವೆ ನಂತರ ಹಂಚಿಕೊಂಡ ಮೊದಲ ವಿಡಿಯೋ ಇದಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ, ಮತ್ತು ಈ ಜೋಡಿಯು ನೂರಾರು ವರ್ಷ ಹೀಗೆ ಸುಖವಾಗಿರಲಿ ಎಂದು ಹಾರೈಸಿ...