Ravichandran : ರಣಧೀರನ ಜೊತೆ ಖುಷ್ಬೂ ಮತ್ತೆ ಡ್ಯೂಯೆಟ್..! ವಿಡೀಯೋ ನೋಡಿ ವಾವ್ ಎಂದ ನೆಟ್ಟಿಗರು..!
Updated:Saturday, May 28, 2022, 14:17[IST]

ಕನ್ನಡ ಕಿರುತೆರೆಯ ಸಾಲು-ಸಾಲು ಕಾರ್ಯಕ್ರಮಗಳು ಈಗಾಗಲೇ ಪ್ರಸಾರವಾಗುತ್ತಿದ್ದು ಜಿ ಕನ್ನಡ ಕೂಡ ಒಂದು ಹಂತದಲ್ಲಿ ಮಕ್ಕಳ ಕಾರ್ಯಕ್ರಮದ ಮೂಲಕ ತುಂಬಾನೇ ಟಿಆರ್ಪಿ ಪಡೆಯುತ್ತಿದೆ ಎಂದು ಕೇಳಿಬರುತ್ತಿದೆ. ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಡ್ರಾಮಾ ಜೂನಿಯರ್ಸ್ ಸೀಸನ್ ನಾಲ್ಕು ಮಕ್ಕಳ ಅಭಿನಯಕ್ಕೆ ಫಿದಾ ಆಗದೆ ಇರುವವರು ಯಾರು ಇಲ್ಲ ಎಂದು ಹೇಳಬಹುದು. ಕರ್ನಾಟಕದ ನಾನಾ ಜಿಲ್ಲೆಗಳಿಂದ ಆಯ್ದು ತಂದಿರುವ ಪುಟ್ಟ ಪುಟ್ಟ ಮಕ್ಕಳ ಅಭಿನಯ ನೋಡುವುದಕ್ಕೆ ತುಂಬಾ ಚೆಂದ. ಹಾಗೆ ಅವರು ಮಾತನಾಡುವ ಶೈಲಿಯೇ ಎಲ್ಲರಿಗೂ ನಗೆ ತರಿಸುವುದು. ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಜಡ್ಜ್ ನಟಿ ಲಕ್ಷ್ಮಿ ಅಮ್ಮನವರು, ನಟ ರವಿಚಂದ್ರನ್ ಜೊತೆಗೆ ಗುಳಿಕೆನ್ನೆ ಚೆಲುವೆ ನಟಿ ರಚಿತಾ ರಾಮ್ ಅವರು ಕೂಡ ಪ್ರಸ್ತುತರಿದ್ದಾರೆ.
ಹಾಗೆ ಯತಾರೀತಿ ನಿರೂಪಕ ಮಾಸ್ಟರ್ ಆನಂದ್ ಅವರು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ನಿರೂಪಣೆಯ ಮಾಡುತ್ತಾ ಎಲ್ಲರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಡ್ರಾಮಾ ಜೂನಿಯರ್ ಸೆಟ್ಟಿನಲ್ಲಿ ಈ ವಾರ ಒಂದು ಕಲರ್ಫುಲ್ ಕಾರ್ಯಕ್ರಮ ಏರ್ಪಾಡಾಗಿದೆ. ನಟ ರವಿಚಂದ್ರನ್ ಅವರ 61ನೇ ಹುಟ್ಟು ಹಬ್ಬದ ಕುರಿತು ಮಕ್ಕಳ ಕೈಯಲ್ಲಿ ಮನರಂಜನೆ ನಟನೆ ಮಾಡಿಸುತ್ತಾ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡದ ಖ್ಯಾತ ನಟಿ ಖುಷ್ಬೂ ಕೂಡ ಆಗಮಿಸಿದ್ದಾರೆ. ನಟ ರವಿಚಂದ್ರನ್ ಹಾಗೂ ನಟಿ ಖುಷ್ಬೂ ಅಂಜದಗಂಡು ರಣಧೀರ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿ ಅಂದಿಗೆ ಸೈ ಎನಿಸಿಕೊಂಡಿವರು.
ಇಂದು ಕೂಡ ಮತ್ತೆ ಈ ಜೋಡಿ ಡ್ರಾಮಾ ವೇದಿಕೆಯ ಮೇಲೆ ಕಾಣಿಸಿಕೊಂಡಿರುವುದು ನಿಜಕ್ಕೂ ಪ್ರೇಕ್ಷಕರು ಸಖತ್ ತ್ರಿಲ್ ಆಗಿ ಖುಷಿಯಾಗಿದ್ದಾರೆ. ಮತ್ತೆ ವೇದಿಕೆ ಮೇಲೆ ರವಿಚಂದ್ರನ್ ಅವರ ಜೊತೆ ಖುಷ್ಬು ಡುಯೆಟ್ ಹಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ನಟ ರವಿಚಂದ್ರನ್ ಅವರು ಮಾಡಿದ ಸಹಾಯ ನೆನೆದ ನಟಿ ಖುಷ್ಬೂ ರವಿಚಂದ್ರನ್ ಅವರಿಗೆ ಹೂಗುಚ್ಛ ನೀಡಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು. ತದನಂತರ ವೇದಿಕೆ ಮೇಲೆ ರವಿಚಂದ್ರನ್ ಅವರ ಜೊತೆ ಭರ್ಜರಿ ಡಾನ್ಸ್ ಮಾಡಿದ ಖುಷ್ಬೂ ಯಾವ ರೀತಿ ರವಿಚಂದ್ರನ್ ಜೊತೆ ಹೇಗೆ ಕಾಣಿಸಿಕೊಂಡರು ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ಬಳಿಕ ಡ್ಯಾನ್ಸ್ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದಲ್ಲಿ ಶೇರ್ ಕೂಡ ಮಾಡಿ ಧನ್ಯವಾದಗಳು..