ಪೊಗರು ಚಿತ್ರ ನೋಡಿ ಕಣ್ಣೀರಿಟ್ಟ ಮೇಘನಾ ಹಾಗೂ ಪ್ರಮೀಳಾ ಜೋಷಾಯಿ..! ಕಾರಣವೇನು ಗೊತ್ತೇ..?

Updated: Thursday, March 4, 2021, 13:15 [IST]

ಇತ್ತೀಚಿಗಷ್ಟೇ ಫೆಬ್ರವರಿ 19ರಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಲ್ಕನೇ ಚಿತ್ರ ಪೊಗರು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿ, ಇದೀಗ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ತೆರೆಮೇಲೆ ರಶ್ಮಿಕ ಮಂದಣ್ಣ ಹಾಗೂ ನಟ ಧ್ರುವ ಸರ್ಜಾ ಅವರ ಜೋಡಿ ಮೋಡಿ ಮಾಡಿದೆ. ಶಿವ ಪಾತ್ರದಲ್ಲಿ ನಟ ಧ್ರುವ ಸರ್ಜಾರವರು ಜನರಿಗೆ ಕಷ್ಟ ಕೊಡುವವರ ವಿರುದ್ಧ ಹೋರಾಟ ಮಾಡಿ, ಬಡ ಜನರಿಗೆ ಸಹಾಯ ಮಾಡುವ ನಟ ಧ್ರುವ ಸರ್ಜಾರ ಪಾತ್ರ ಎಲ್ಲರಿಗೂ ಹೆಚ್ಚು ಇಷ್ಟವಾಗಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.    

ಜೊತೆಗೆ ಈಗ ಬಂದಿರುವ ಮಾಹಿತಿ ಪ್ರಕಾರ, ನಟ ಧ್ರುವ ಸರ್ಜಾ ಅವರ ಪೊಗರು ಸಿನಿಮಾವನ್ನು ಥಿಯೇಟರ್ನಲ್ಲಿ ಮೇಘನಾ ರಾಜ್, ತಾಯಿ ಪ್ರಮೀಳಾ ಜೋಷಾಯಿ, ಹಾಗೂ ತಂದೆ ಸುಂದರ್ ರಾಜ್ ಅವರು ವೀಕ್ಷಿಸುತ್ತಿದ್ದ ವೇಳೆ, ನೋಡುತ್ತಿದ್ದಂತೆ ಕಣ್ಣೀರು ಹಾಕಿದ್ದಾರಂತೆ. ಹೌದು ಸ್ನೇಹಿತರೇ ಪೊಗರು ಸಿನಿಮಾದ ಇಂಟರ್ವಲ್ ವೇಳೆ,ತೆರೆ ಮೇಲೆ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ದೃಶ್ಯ ನೋಡಿ ಮೇಘನ ರಾಜ್,  ಹಾಗೂ ಪ್ರಮೀಳಾ ಜೋಷಾಯಿ, ಜೊತೆಗೆ ಸುಂದರ್ ರಾಜ್ ಸಹ ಕಣ್ಣೀರು ಹಾಕಿದ್ದರೆಂದು ಕೇಳಿಬಂದಿದೆ.   

ಹೌದು ಪೊಗರು ಚಿತ್ರದ ವೇಳೆ ನಟ ಚಿರುರವರ ಚಿತ್ರ ರಾಜಮಾರ್ತಾಂಡ ಟ್ರೈಲರ್ ಬಿಡುಗಡೆಯಾಗಿದ್ದನ್ನು ಕಂಡು, ಅಳಿಯನನ್ನು ಮತ್ತೆ ತೆರೆ ಮೇಲೆ ನೋಡಿ, ಅಳಿಯನ ನೆನಪಾಗಿ ಮಾವ ಸುಂದರ್ ರಾಜ್, ಹಾಗೂ ಅತ್ತೆ ಪ್ರಮೀಳಾ ಜೋಷಾಯಿ ಕಣ್ಣೀರು ಹಾಕಿದರು, ಎಂದು ಹೇಳಲಾಗುತ್ತಿದೆ...