Meghana Raj : ಮಗುವಿನ ಜೊತೆಗೆ ಮೇಘನಾ ರಾಜ್ ಯಾವ ರೀತಿ ಸ್ಟೆಪ್ ಹಾಕಿದ್ದಾರೆ ನೋಡಿ…

By Infoflick Correspondent

Updated:Friday, May 27, 2022, 12:36[IST]

Meghana Raj :  ಮಗುವಿನ ಜೊತೆಗೆ ಮೇಘನಾ ರಾಜ್ ಯಾವ ರೀತಿ   ಸ್ಟೆಪ್ ಹಾಕಿದ್ದಾರೆ ನೋಡಿ…

ಮೇಘನಾ ರಾಜ್ ಈಗ ಸ್ಯಾಂಡಲ್ ವುಡ್ ನಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿರುವ ಮೇಘನಾ ರಾಜ್ ಇದರ ಜೊತೆಗೆ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲೂ ಜಡ್ಜ್ ಆಗಿ ಬರುತ್ತಿದ್ದಾರೆ. ಈ ಮೂಲಕ ಮೇಘನಾ ರಾಜ್ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಒಂದೂವರೆ ವರ್ಷಗದಿಂದ ಪತಿ ಚಿರಂಜೀವಿ ಸರ್ಜಾ ಇಲ್ಲದೇ ಸಂಕಷ್ಟದಲ್ಲಿದ್ದ ಮೇಘನಾ ರಾಜ್ ಈಗ ಮಗನಿಗೋಸ್ಕರ ಉತ್ತಮವಾದ ಬದುಕನ್ನು ಖುಷಿಯಾಗಿ ಮುನ್ನೆಡೆಸಲು ಮುಂದಾಗಿದ್ದಾರೆ. 

ಈಗ ಮೇಘನಾ ರಾಜ್ ಒಟ್ಟೊಟ್ಟಿಗೆ ಎರಡೆರಡು ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಪಿ.ಬಿ.ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿರುವ ಪನ್ನಗಾಭರಣ, ಹೊಸ ಪ್ರತಿಭೆ ನಿರ್ದೇಶಕ ವಿಶಾಲ್ ಅವರ ಚಿತ್ರದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ನೀಡುತಿದ್ದು, ಹಲವರು ನಟಿಸಲಿದ್ದಾರೆ. ಇನ್ನು ಇರುವುದೆಲ್ಲವ ಬಿಟ್ಟು ಚಿತ್ರತಂಡದ ಜೊತೆಗೆ ಮತ್ತೆ ಕೈ ಜೋಡಿಸಿರುವ ಮೇಘನಾ ರಾಜ್, ಮತ್ತೊಂದು ಚಿತ್ರಕ್ಕೂ ಕೂಡ ಸಹಿ ಹಾಕಿದ್ದಾರೆ. ಜೀ ಕನ್ನಡ ವಾಹಿನಿಯ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿರುವ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಕೆಲ ಜಾಹೀರಾತುಗಳಲ್ಲೂ ಮೇಘನಾ ರಾಜ್ ನಟಿಸುತ್ತಿದ್ದಾರೆ.  

ಮೇಘನಾ ರಾಜ್ ಇಷ್ಟೆಲ್ಲಾ ಮಾಡುತ್ತಿರುವುದು ಕೇವಲ ಅವರ ಮಗ ರಾಯನ್ ರಾಜ್ ಸರ್ಜಾಗಾಗಿ. ಆತನ ಭವಿಷ್ಯಕ್ಕಾಗಿ ಈಗ ಮೇಘನಾ ರಾಜ್ ತಮ್ಮ ಜೀವನದಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಇನ್ನು ಡ್ಯಾನ್ಸಿಂಗ್ ಚಾಮಪಿಯನ್ ಶೋನಲ್ಲಿ ಮಗುವಿನ ಜೊತೆಗೆ ಮೇಗನಾ ರಾಜ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಮಗು ಹೆಜ್ಜೆ ಹಾಕಿ ಕುಣಿದಂತೆಯೇ ಮೇಘನಾ ರಾಜ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಇದರ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಶುರುವಾಗಿದೆ.