ಎರಡನೇ ಮದುವೆ ಸದ್ಯದಲ್ಲೇ ಆಗ್ತೀನಿ ಎನ್ನಲಾದ ಮೇಘನಾ ವಿಡಿಯೋ..! ವಿಡಿಯೋ ನೋಡಿ ಉಗಿದ ನೆಟ್ಟಿಗರು

Updated: Wednesday, September 15, 2021, 21:37 [IST]

ಹೌದು ಸ್ನೇಹಿತರೆ ಎಲ್ಲರಿಗೂ ಗೊತ್ತಿರುವ ಪ್ರಕಾರ  ಈ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಸೇತುವೆ ಎನ್ನುವುದು ಈಗ ಹೆಚ್ಚು ಮಟ್ಟದಲ್ಲಿ ಬಿಸಿನೆಸ್ ರೀತಿಯೇ ಆಗಿಹೋಗಿದೆ. ಕೆಲ ಸೆಲೆಬ್ರೇಟಿಗಳ, ಗಣ್ಯವ್ಯಕ್ತಿಗಳ ಜೀವನಕ್ಕೆ ಸಂಬಂಧಿತ ಮಾಹಿತಿಯನ್ನು ಇರುವ ನಿಜಾಂಶ ಸತ್ಯವನ್ನು ಮಾತ್ರ ತಲುಪಿಸಬೇಕು ಎಂಬ ಮನೋಭಾವ ಹೊಂದಿರುವ ಚಾನೆಲ್ ಗಳು ತುಂಬಾ ಕಡಿಮೆಯಾಗಿವೆ. ಕೇವಲ ಸ್ವಾರ್ಥಕ್ಕಾಗಿ, ಮತ್ತು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವದಕ್ಕೆ, ತಮಗೆ ಟಿಆರ್ಪಿ ಅಥವಾ ಇನ್ಕಮ್ ಬಂದರೆ ಸಾಕು ಎಂದು ಬೇಕಾಬಿಟ್ಟಿ ತಮಗೆ ಹೇಗೆ ಬೇಕೋ ಹಾಗೆ ಕೆಲವು ನ್ಯೂಸ್ ಚಾನಲ್ ಗಳು ಬೇರೆಯವರ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದಾರೆ.

ಇದರೊಟ್ಟಿಗೆ ಯೂಟ್ಯೂಬ್ನಲ್ಲಿ ಕೆಲವರ ಚಾನಲ್ಗಳು ತುಂಬಾನೇ ಮಿತಿಮೀರಿ ನಡೆದುಕೊಳ್ಳುತ್ತಿವೆ. ಹೌದು ಈ ಸೆಲೆಬ್ರಿಟಿಗಳ ಹಾಗೂ ಕಾಮನ್ ಜನರ ಜೀವನಕ್ಕೆ ಸಂಬಂಧಿತ ವಿಷಯಗಳನ್ನು ತಮಗೆ ಹೇಗೆ ಬೇಕೋ ಹಾಗೆ ಅವರೇ ಹೇಳಿದ್ದಾರೆ ಎನ್ನುವ ಹಾಗೆ ತೋರಿಸಿ, ಬೇಕಾಬಿಟ್ಟಿ ವಿಡಿಯೋಗಳನ್ನು ಶೇರ್ ಮಾಡಿಕೊಂಡು ವಿಡಿಯೋದಲ್ಲಿ ತಪ್ಪು ಮಾಹಿತಿನ ರವಾನಿಸುತ್ತಿದ್ದಾರೆ. ಹೌದು ಇತ್ತೀಚೆಗಷ್ಟೇ ನಟಿ ಮೇಘನರಾಜ್ ಅವರು ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ತಮ್ಮ ಹಾಗೂ ಚಿರು ಹಾಗೂ ತಮ್ಮ ಪುತ್ರನ ಬಗ್ಗೆ ಮಾತನಾಡಿದ್ದರು.

ಇದನ್ನೇ ಕೆಲ ಕಿಡಿಗೇಡಿಗಳು ಬಂಡವಾಳದ ರೀತಿ ಈ ಯೂಟ್ಯೂಬ್ನಲ್ಲಿ ಮೇಘನ ರಾಜ್ 2ನೇ ಮದುವೆ ಆಗುತ್ತಾರೆ ಎಂದು ಹೇಳಿ ತಮಗೆ ಹೇಗೆ ಬೇಕೋ ಹಾಗೆ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಇದೀಗ ಮೇಘನ ರಾಜ್ ಅವರು ಕಡಿವಾಣ ಹಾಕಲು ಮುಂದಾಗಿದ್ದಾರೆ, ಇಂತಹ ಸುಳ್ಳು ಮಾಹಿತಿ ನೀಡುವ ಕೆಲ ಚಾನೆಲ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಎರಡನೇ ಮದುವೆ ಆಗುತ್ತೇನೆ ಎಂದು ಮೇಘನ ರಾಜ್ ಅವರು ಹೇಳಿಯೇ ಇಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ಯಾಕೆ ಅವರಿಗೆ ನೋವನ್ನು ಕೊಡುತ್ತೀರಾ,ಈ ರೀತಿ ಸುಳ್ಳುಸುದ್ದಿ ನೀಡುವ ಯುಟ್ಯೂಬ್ ಚಾನೆಲ್ ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ...