Meghana Raj : ಮೇಘನಾ ರಾಜ್ ಅವರಿಂದ ಬಂತು 2 ವರ್ಷದ ಬಳಿಕ ದೊಡ್ಡ ಸಿಹಿ ಸುದ್ದಿ..! ಈ ನಟನ ಜೊತೆ..?

By Infoflick Correspondent

Updated:Thursday, August 18, 2022, 10:40[IST]

Meghana Raj : ಮೇಘನಾ ರಾಜ್ ಅವರಿಂದ ಬಂತು 2 ವರ್ಷದ ಬಳಿಕ ದೊಡ್ಡ ಸಿಹಿ ಸುದ್ದಿ..! ಈ ನಟನ ಜೊತೆ..?

ಸ್ಯಾಂಡಲ್ ವುಡ್ ನ ಖ್ಯಾತ ಜೋಡಿಯಾಗಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕಾಣಿಸಿಕೊಂಡವರು. ಇವರಿಬ್ಬರನ್ನು ನೋಡಿ ಚಂದನವನದ ಮಂದಿ ಸಕತ್ ಶುಭ ಕೋರಿ ಖುಷಿಯಾಗಿದ್ದರು. ಜೊತೆಗೆ ಈ ಜೋಡಿಗೆ ಮದುವೆ ಮುಂಚಿತವಾಗಿಯೇ ಶುಭಕೋರಿದ್ದು ಉಂಟು. ಇಷ್ಟೆಲ್ಲಾ ಚೆಂದದ ದಾಂಪತ್ಯ ಜೀವನ ನಡೆಯುವಾಗಲೇ, ತುಂಬಾ ಅನ್ನೂನತೆಯ ಜೀವನ ನಡೆಸುವಾಗ, ಇದ್ದಕ್ಕಿದ್ದಂತೆ ಅದ್ಯಾರ ಕಣ್ಣು ಬಿಟ್ಟೋ ಗೊತ್ತಿಲ್ಲ, ಆ ದೇವರು ನಟಿ ಮೇಘನಾಗೆ ಹಾಗೂ ಇಡಿ ಸರ್ಜಾ ಕುಟುಂಬಕ್ಕೆ ಅತಿ ದೊಡ್ಡ ಆಘಾತವನ್ನೆ ನೀಡಿದನು. ನಟ ಚಿರಂಜೀವಿ ಸರ್ಜಾ ಅವರನ್ನು ಎಲ್ಲರಿಂದ ದೂರ ಮಾಡಿದನು. ಚಿರು ಅಗಲಿಕೆ ಬೆನ್ನಲ್ಲಿ ನಟಿ ಮೇಘನಾ ರಾಜ್ ತುಂಬಾನೆ ಕುಗ್ಗಿ ಹೋಗಿದ್ದರು.

ಆನಂತರದಲ್ಲಿ ಮಗುವಿನ ಮೂಲಕ ಮತ್ತೆ ಜೂನಿಯರ್ ಚಿರು ಆಗಮಿಸಿದ್ದು ಸ್ವಲ್ಪ ನೋವನ್ನು ಕಡಿಮೆ ಮಾಡಿತು. ಇಷ್ಟು ದಿನ ರಾಯನ್ ರಾಜ್ ಸರ್ಜಾ ಹಾರೈಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ಮೇಘನಾ ರಾಜ್ ಅವರು ಇತ್ತೀಚಿಗೆ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿದ್ದನ್ನ ನೀವು ನೋಡಿದ್ದೀರಿ. ಹೌದು ಸ್ವಲ್ಪ ಸ್ವಲ್ಪ ಚಿರು ಅಗಲಿಕೆಯಿಂದ ಹೊರ ಬರುತ್ತಿರುವ ಮೇಘನಾ ರಾಜ್ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹೊಚ್ಚ ಹೊಸ ಸಿನಿಮಾ ಒಂದಕ್ಕೆ ನಟಿಯಾಗುತ್ತಿರುವ ವಿಷಯವನ್ನು ಎಲ್ಲಾ ಅಭಿಮಾನಿಗಳ ಎದುರು ಹೇಳಿಕೊಂಡಿದ್ದರು. ಅದರ ಕುರಿತು ಇದೀಗ ಇನ್ನಷ್ಟು ಸುದ್ಡಿ ಹೊರ ಬಿದ್ದಿದೆ. ಹೌದು ಅವರ ಚಿತ್ರತಂಡ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ಮಾಡುವುದರ ಬಗ್ಗೆ ಹೇಳಿಕೊಂಡಿತ್ತು. ಆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.    

ಆ ಸಿನಿಮಾದ ಕಥೆಯನ್ನು ಇದೀಗ ಮರು ನಿರ್ಮಾಣ ಮಾಡಲಾಗಿದ್ದು, ಸ್ಕ್ರಿಪ್ಟ್ ಅನ್ನು ಬೇರೆಯದ್ದೆ ರೀತಿಯಾಗಿ ಬರೆದಿದ್ದಾರಂತೆ. ಇನ್ನಷ್ಟೇ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಬೇಕಿದೆ ಎಂದಿದ್ದಾರೆ. ಈ ಸಿನಿಮಾಗೆ ಖ್ಯಾತ ಕನ್ನಡದ ನಟ ಸಹ ಆಗಮಿಸಲಿದ್ದಾರೆ ಎಂದು ಸಿಹಿ ಸುದ್ದಿ ಕೊಟ್ಟಿದ್ದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಿನಿಮಾನ ನಾನು ಹೆಚ್ಚು ಇಷ್ಟಪಡುತ್ತೇನೆ, ಕ್ಯಾಮೆರಾ ರೋಲಿಂಗ್ ಆಕ್ಷನ್ ಎಂದು ಬರೆದುಕೊಂಡು ಮೇಘನಾ ರಾಜ್ ಅವರು ಸಿನಿಮಾ ಮೇಲೆ ಇರುವ ಆಸಕ್ತಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಿನಿಮಾಗೆ ಕನ್ನಡದ ಖ್ಯಾತ ನಟ ಆಗಮಿಸಲಿರುವ ವಿಷಯ ಇನ್ನೂ ಸ್ವಲ್ಪ ದಿನಗಳಲ್ಲೇ ಆ ವಿವರ ಹೊರಬೀಳಲಿದೆ ಎಂದು ಬರೆದುಕೊಂಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು