ಮನುಷ್ಯ ಅಂದಮೇಲೆ ವೀಕ್'ನೆಸ್ ಇರ್ತಾವೆ ಎಂದು ರಮೇಶ್ ಬಗ್ಗೆ ಇನ್ನೊಂದು ಅಚ್ಚರಿಯ ಸುದ್ದಿ ಕೊಟ್ಟ ರಾಜು..!

Updated: Thursday, March 4, 2021, 13:47 [IST]

'ಮನುಷ್ಯ ಅಂದ ಮೇಲೆ ಕೆಲವೊಂದು ವೀಕ್ ನೆಸ್ ಗಳು ಇರುತ್ತವೆ. ಆದ್ರೆ ಅದನ್ನೇ ಬಂಡವಾಳವನ್ನಾಗಿ  ಮಾಡಿಕೊಳ್ಳೋದು ಸರಿಯಲ್ಲ' ಎಂದು ಜಲಸಂಪನ್ಮೂಲ ಸಚಿವ ರಮೇಶ್ ಪರ ಶಾಸಕ ರಾಜೂ ಗೌಡ ಅವರು ಇದೀಗ ಬ್ಯಾಟ್ ಬೀಸಿದ್ದಾರೆ ಎಂದು ತಿಳಿದುಬಂದಿದೆ..

ಮಾದ್ಯಮದ ಜೊತೆ ಮಾತನಾಡಿದ ರಾಜೂ ಗೌಡ 'ನಾನು ಹಾಗೂ ರಮೇಶಣ್ಣ ಸಂಬಂಧಿಕರು. 2000 ರಿಂದಲೂ ಉತ್ತಮ ಒಡನಾಟ ಇದೆ. ಇದೊಂದು ನೋವಿನ ಸಂಗತಿ. ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಮೋಸ ಅಂತ ಮಾಧ್ಯಮಗಳಲ್ಲಿ ಬರುತ್ತಿದೆ. ವೀಡಿಯೋ ನೋಡಿದ್ರೆ ಮೋಸ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಾ' ಎಂದು ಪ್ರಶ್ನೆ ಮಾಡಿದರು.. 

ತಮ್ಮ ಮಾತನ್ನು ಮುಂದುವರೆಸಿದ ರಾಜೂ ಗೌಡ 'ವ್ಯವಸ್ಥಿತವಾಗಿ ಇದನ್ನ ಮಾಡಿದ್ದಾರೆ. ಹನಿಟ್ರ್ಯಾಪ್ ರೀತಿ ಇದನ್ನ ಮಾಡಿದ್ದಾರೆ. ಸಿಬಿಐನಿಂದ ತನಿಖೆ ಆಗಬೇಕು ಅಂತ ಆಗ್ರಹ ಮಾಡುತ್ತೇನೆ. ರಮೇಶಣ್ಣ ತಪ್ಪು ಮಾಡಿದ್ರೆ ಅವರನ್ನ ಗಲ್ಲಿಗೇರಿಸಲಿ. ರಾಜಕಿಯ ದೊಡ್ಡ ಹುನ್ನಾರ ನಡೆದಿದೆ ಅನ್ನೋ ಅನುಮಾನ ನಮಗೆ ಕಾಡ್ತಿದೆ' ಎಂದೆಲ್ಲ ಮಾತಾಡಿದರು..

'ರಷ್ಯಾದ ಮೂಲಕ ಇದು ಅಪ್ ಲೋಡ್ ಆಗಿದೆ ಅನ್ನೋ ಮಾಹಿತಿಯೂ ಇದೆ. ರಾಜಕೀಯವಾಗಿ ಬೆಳೆಯುತ್ತಾರೆ ಅನ್ನೋದನ್ನ ಸಹಿಸೋಕೆ ಆಗದೆ ಇಂಥದನ್ನ ಮಾಡಿದ್ದಾರೆ. ರಾಜಕೀಯ ಷಡ್ಯಂತ್ರಕ್ಕೆ ರಮೇಶಣ್ಣನ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ರಮೇಶ್ ಜಾರಕಿಹೊಳಿ ಅವರನ್ನ ತುಂಬಾ ದಿನದಿಂದ ಬಲ್ಲವರೇ ಇಂಥದನ್ನ ಮಾಡಿದ್ದಾರೆ. ದಿನೇಶ್ ಕಲ್ಲಹಳ್ಳಿ ಅವರು ಕೇವಲ ದಾಳವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ನಾಲ್ಕು ಐದು ಸರ್ವರ್ ನಲ್ಲಿ ಇದನ್ನ ಅಪ್ಲೋಡ್ ಮಾಡಿದ್ದಾರೆ' ಎಂದು  ಮಾಧ್ಯಮ ಒಂದರ ಬಳಿ ರಾಜೂ ಗೌಡ ಮಾತಾಡಿದರು... 

'ಒಂದೊಂದು ಸರ್ವರ್ ಅನ್ನು ಬುಕ್ ಮಾಡಬೇಕು ಅಂದ್ರೂ ಕೋಟಿ ಕೋಟಿ ಹಣ ನೀಡಬೇಕು. ಹೀಗೆ ಹಣವನ್ನ ದಿನೇಶ್ ಕಲ್ಲಹಳ್ಳಿ ನೀಡಲು ಸಾಧ್ಯವಿಲ್ಲ. ಅಷ್ಟಕ್ಕೂ ಈ ಕೋಟಿ ಕೋಟಿ ಹಣ ಯಾರು ಕೊಟ್ಟಿದ್ದಾರೆ ಅನ್ನೋದು ತನಿಖೆ ಆಗ್ಬೇಕು. ಆರೋಪ ಮುಕ್ತರಾಗಿ ಆಚೆ ಬರ್ತಾರೆ ಅನ್ನೋ ವಿಶ್ವಾಸವಿದೆ, ಜೊತೆಗೆ ತಮ್ಮ ಪಕ್ಷಕ್ಕೆ ಮುಜುಗರವಾಗಬಾರದು ಎಂದು ತಿಳಿದು ರಾಜೀನಾಮೆ ನೀಡಿದ್ದಾರೆ.

 

ಯಾವುದೇ ಕಂಡೀಷನ್ ಇಲ್ಲದೆನೇ ಅವರು ರಾಜೀನಾಮೆ ಕೊಟ್ಟಿದ್ದಾರೆ. ನಾನು ರಮೇಶ್ ಜಾರಕಿಹೊಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ, ರಮೇಶ್ ಅವರ ಮಗನಿಗೂ ಕೂಡ ಧೈರ್ಯ ತುಂಬಿದ್ದೀನಿ' ಎಂದು ಮಾಧ್ಯಮಕ್ಕೆ ಹೇಳಿದರು...