Naresh : ಅಷ್ಟಕ್ಕೂ ಈ ನರೇಶ್‌ ಯಾರು..? ಅವರ ಬಳಿ ಕೋಟಿ ಕೋಟಿ ಆಸ್ತಿ ಹೇಗೆ ಬಂತು..?

By Infoflick Correspondent

Updated:Monday, July 4, 2022, 16:26[IST]

Naresh : ಅಷ್ಟಕ್ಕೂ ಈ ನರೇಶ್‌ ಯಾರು..? ಅವರ ಬಳಿ ಕೋಟಿ ಕೋಟಿ ಆಸ್ತಿ ಹೇಗೆ ಬಂತು..?

ಪವಿತ್ರಾ ಲೋಕೇಶ್‌ ಅವರು ತೆಲುಗು ನಟ ನರೇಶ್‌ ಎಂಬುವರನ್ನು ಮೂರನೇ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ನರೇಶ್‌ ಬಳಿ ಕೋಟಿ ಕೋಟಿ ಆಸ್ತಿ ಇದೆ. ಹೀಗಾಗಿ ಪವಿತ್ರಾ ಲೋಕೇಶ್‌ ಅವರು ನರೇಶ್‌ ಜೊತೆಗೆ ಸಂಬಂಧ ಬೆಳೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ನರೇಶ್‌ ಪತ್ನಿ ಹಾಗೂ ಪವಿತ್ರಾ ಲೋಕೇಶ್‌ ಪತಿ ಕೂಡ ಮಾತನಾಡಿ, ನಿಜ ಎಂದು ಹೇಳಿದ್ದಾರೆ. ಆದರೆ, ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಅವರು ಈ ಮಾತುಗಳನ್ನು ಅಲ್ಲಗಳೆದಿದ್ದಾರೆ.

ಇನ್ನು ನಟ ನರೇಶ್‌ ಯಾರು.? ಅವರ ಹಿನ್ನೆಲೆ ಏನು.? ಎಂದು ನೋಡೋಣ ಬನ್ನಿ.. ನರೇಶ್ ಅವರ ಬಳಿ ಬರೋಬ್ಬರಿ ಆರು ಸಾವಿರ ಕೋಟಿ ಆಸ್ತಿ ಇದೆ. ನರೇಶ್ ಅವರು ತೆಲುಗಿನ ನಟ. ಟಾಲಿವುಡ್ ನ ಸೂಪರ್ ಸ್ಟಾರ್ ಆಗಿದ್ದ ಕೃಷ್ಣ ಅವರ ಪುತ್ರ. ಅಂದರೆ, ಕೃಷ್ಣ ಅವರು ನಿರ್ಮಲ ಎಂಬುವರನ್ನು ಎರಡನೇ ಮದುವೆಯಾಗಿದ್ದರು. ನಿರ್ಮಲ ಅವರ ಮೊದಲ ಪತಿಯ ಮಗ ಈ ನರೇಶ್.‌ ಅರ್ಥವಾಗುತ್ತಿಲ್ಲ ಅಲ್ಲವೇ..? ಮುಂದೆ ಓದಿ ಇನ್ನು ಸ್ಪಷ್ಟವಾಗಿ ಅರ್ಥವಾಗುತ್ತದೆ.    

ಸೂಪರ್‌ ಸ್ಟಾರ್‌ ಎನಿಸಿಕೊಂಡಿದ್ದ ಕೃಷ್ಣ ಅವರು ಇಂದಿರಾ ದೇವಿ ಎಂಬುವರನ್ನು ಮದುವೆಯಾಗಿದ್ದರು. ಎರಡನೇಯ ಪತ್ನಿಯಾಗಿ ನಿರ್ಮಲ ಅವರ ಜೊತೆಗೆ ವಿವಾಹವಾಗಿದ್ದರು. ನಿರ್ಮಲ ಅವರಿಗೂ ಇದು ಎರಡನೇಯ ಮದುವೆಯಾಗಿತ್ತು. ನಿರ್ಮಲ ಅವರ ಮೊದಲ ಪತಿಯ ಹೆಸರು ಮೂರ್ತಿ. ಮೂರ್ತಿ ಹಾಗೂ ನಿರ್ಮಲ ಅವರ ಮಗುವೇ ನರೇಶ್.‌ ನಿರ್ಮಲ ಅವರು ಕೂಡ ಆ ಕಾಲದಲ್ಲಿ ನಟಿಯಾಗಿದ್ದರು. ಕೃಷ್ಣ ಅವರು ಸಿನಿಮಾ ಮಾಡಿ ತುಂಬಾ ಆಸ್ತಿ ಗಳಿಸಿದ್ದರು. ಇನ್ನು ನರೇಶ್‌ ಅವರು ಕೂಡ ಬಾಲನಟನಾಗಿ, ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನರೇಶ್‌ ಅವರಿಗೆ ತಲತಲಾಂತರದಿಂದ ಆಸ್ತಿಯೇ ಅವರನ್ನು ಕೋಟ್ಯಾಧೀಶ್ವರನನ್ನಾಗಿ ಮಾಡಿದೆ.