Pavithra Lokesh : ಪವಿತ್ರಾ ಲೋಕೇಶ್‌ ಅವರ ಒಂದು ನಿರ್ಧಾರದಿಂದ ಮತ್ತೊಂದು ಹೆಣ್ಣಿನ ಬದುಕು ಇಂದು ಏನಾಗಿದೆ ನೋಡಿ.. ‌

By Infoflick Correspondent

Updated:Monday, June 27, 2022, 12:59[IST]

Pavithra Lokesh :  ಪವಿತ್ರಾ ಲೋಕೇಶ್‌ ಅವರ ಒಂದು ನಿರ್ಧಾರದಿಂದ ಮತ್ತೊಂದು ಹೆಣ್ಣಿನ ಬದುಕು ಇಂದು ಏನಾಗಿದೆ ನೋಡಿ.. ‌

ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಮೂರನೇ ಮದುವೆಯಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ಗುಟ್ಟಾಗಿ ಮದುವೆಯಾಗಿದ್ದಾರೆ. ಬಹಳ ದಿನಗಳಿಂದ ಇಬ್ಬರೂ ಲಿವ್‌ ಇನ್ ರಿಲೇಶನ್‌ ಶಿಪ್‌ನಲ್ಲಿದ್ದರು ಎಂದು ಹೇಳಲಾಗುತ್ತದೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಮಹಾಬಲೇಶ್ವರಕ್ಕೆ ಹೋಗಿ ಸ್ವಾಮೀಜಿಯಿಂದ ಆಶೀರ್ವಾದ ಪಡೆದಿದ್ದರು. ಈ ವೀಡಿಯೋ ಮೂಲಕ ಇಬ್ಬರೂ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗಿದೆ. 

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ. ಪತಿ ಸುಚೇಂದ್ರ ರಿಂದ ದೂರಾಗಿದ್ದಾರೆ  ಇದು ನರೇಶ್ ಹಾಗೂ ಪವಿತ್ರಾ ಇಬ್ಬರಿಗೂ ಕೂಡ ಮೂರನೇ ಮದುವೆ. ಈ ಮೊದಲು ಸಾಫ್ಟ್‌ ವೇರ್‌ ಎಂಜಿನಿಯರ್‌ ನನ್ನು ಮದುವೆಯಾಗಿದ್ದ ಪವಿತ್ರಾ ಅವರು  2007ರಲ್ಲಿ ಸುಚೇಂದ್ರ ಅವರೊಂದಿಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ಇಬ್ಬರೂ ಬೇರೆಯಾಗಿದ್ದು, ಪವಿತ್ರಾ ನರೇಶ್‌ ರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.    

ಇನ್ನು ಇತ್ತ  ನರೇಶ್ ಕೂಡ ಮೊದಲು​​ ರೇಖಾ ಎಂಬುವವರನ್ನು ಮದುವೆಯಾಗಿದ್ದರು. ಕೆಲ ವರ್ಷಗಳ ನಂತರ ರಮ್ಯ ರಘುಪತಿ ಎಂಬುವವರನ್ನು ಎರಡನೇ ಮದುವೆಯಾದರು. ಈ ದಂಪತಿಗೂ ಇಬ್ಬರು ಮಕ್ಕಳಿದ್ದಾರೆ. ಆದರೆ, ಪವಿತ್ರಾ ನರೇಶ್‌ ಬದುಕಲ್ಲಿ ಬಂದಾಗಿನೀಮದ ರಮ್ಯಾ ಅವರ ಸ್ಥಿತಿ ಹೇಳತೀರದಾಗಿದೆ. ಚೆನ್ನಾಗಿದ್ದ ದಂಪತಿಗಳ ಬಾಳಲ್ಲಿ ಪವಿತ್ರಾ ಅವರೇ ಹುಳಿ ಹಿಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಮ್ಯಾ ಹಾಗೂ ನರೇಶ್‌ ವಿಚ್ಛೇಧನ ಪಡೆದಿಲ್ಲ. ಇತ್ತ ಸುಚೇಂದ್ರ ಪ್ರಸಾದ್‌ ಹಾಗೂ ಪವಿತ್ರಾ ಲೋಕೇಶ್‌ ಕೂಡ ಡಿವೋರ್ಸ್‌ ಪಡೆದಿಲ್ಲ. 

ಹೀಗಿದ್ದರೂ ಇಬ್ಬರೂ ಮದುವೆಯಾಗಿರುವುದು ಟಾಲಿವುಡ್‌ ನಲ್ಲಿ ಗುಸುಗುಸು ಪಿಸುಪಿಸು ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ. ಇತ್ತ ಸುಚೇಂದ್ರ ಪ್ರಸಾದ್‌ ಅವರು ತೊಮದರೆಗೆ ಒಳಗಾಗಿದ್ದು, ಅತ್ತ ರಮ್ಯಾ ರಾಘವೇಂದ್ರ ಕೂಡ ನೋವನುಭವಿಸುವಂತಾಗಿದೆ. ಇದಕ್ಕೆಲ್ಲಾ ಪವಿತ್ರಾ ಲೋಕೇಶ್‌ ಅವರೇ ಕಾರಣ ಎಂದು ರೇಖಾರಾಣಿ ಕಶ್ಯಪ್‌ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇವರಿಬ್ಬ ಮದುವೆಯ ವಿಚಾರವನ್ನು ಇವರಿಬ್ಬರೇ ಸ್ಪಷ್ಟಪಡಿಸಬೇಕು.