Pavithra Lokesh : ಮಾಧ್ಯಮಗಳ ವಿರುದ್ಧ ಗರಂ ಆಗಿ ಸೈಬರ್ ಮೆಟ್ಟಿಲು ಹತ್ತಿದ ಪವಿತ್ರಾ ಲೋಕೇಶ್..! ಎಲ್ಲಾ ಸೆರೆ ಹಿಡಿದಿದ್ದರಂತೆ..!

By Infoflick Correspondent

Updated:Monday, July 4, 2022, 15:35[IST]

Pavithra Lokesh : ಮಾಧ್ಯಮಗಳ  ವಿರುದ್ಧ ಗರಂ ಆಗಿ ಸೈಬರ್ ಮೆಟ್ಟಿಲು ಹತ್ತಿದ ಪವಿತ್ರಾ ಲೋಕೇಶ್..! ಎಲ್ಲಾ ಸೆರೆ ಹಿಡಿದಿದ್ದರಂತೆ..!

ಕಳೆದು ಒಂದು 10 ದಿನಗಳಿಂದ ಕನ್ನಡ ಸಿನಿಮಾರಂಗದ ಬಹುಭಾಷಾ ನಟಿಯಾಗಿ ಮಿಂಚಿರುವ ಪವಿತ್ರ ಲೋಕೇಶ್ ಅವರು ತುಂಬಾನೇ ಸದ್ದು ಮಾಡುತ್ತಿದ್ದಾರೆ. ದಿನಕ್ಕೊಂದು ಸುದ್ದಿ ಎಂಬಂತೆ ಪವಿತ್ರ ಲೋಕೇಶ್ ಅವರ ವಿಚಾರಗಳು ಹೆಚ್ಚು ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಹೌದು ತೆಲುಗು ಚಿತ್ರರಂಗದ ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನಲಾಗಿ ಮೊದಲು ಸುದ್ದಿ ಆರಂಭವಾಯಿತು. ನಂತರ ಆಗಿದ್ಯಲ್ಲವನ್ನು ನೀವು ಕೂಡ ಗಮನಿಸಿದ್ದೀರಿ, ಇದೆಲ್ಲಾ ವಿವಾದಗಳ ನಡುವೆ ಭಾನುವಾರ ನರೇಶ್ ಮತ್ತು ಪವಿತ್ರ ಲೋಕೇಶ್ ಮೈಸೂರಿನ ಒಂದೇ ಹೋಟೆಲ್ನಲ್ಲಿ ತಂಗಿದ್ದು ಮಾಧ್ಯಮಗಳೆಲ್ಲವೂ ಈ ಇಬ್ಬರು ಒಟ್ಟಿಗೆ ಇರುವುದಾಗಿ ತಿಳಿದು ಹೊರ ಬಂದಾಗ ದೃಶ್ಯವನ್ನು ಸೆರೆಹಿಡಿದಿದ್ದಾರೆ. 

ಹಾಗೆ ನೇರ ಪ್ರಸಾರ ಮಾಡಿ ರಾಜ್ಯದ ಜನತೆಗೆ ಇವರಿಬ್ಬರ ವಿಷಯವನ್ನು ಮುಟ್ಟಿಸಿದ್ದಾರೆ. ಇದೇ ವಿಚಾರಕ್ಕೆ ನಟಿ ಪವಿತ್ರ ಲೋಕೇಶ್ ಅವರು ಕೆಲವು ನ್ಯೂಸ್ ಮಾಧ್ಯಮಗಳು ನನ್ನ ಮನ ಶಾಂತಿ ಹಾಳು ಮಾಡಿವೆ. ಕೆಲ ನ್ಯೂಸ್ ಮಾಧ್ಯಮದ ಪ್ರತಿನಿಧಿಗಳು ನನ್ನ ಬೆನ್ನ ಬಿಡದೆ ಹೆಚ್ಚು ಕಾಟ ಕೊಟ್ಟಿದ್ದಾರೆ. ಹಾಗೆ ಮಾನವನ್ನ ಹರಾಜು ಮಾಡುವ ಕೆಲಸ ಮಾಡಿದ್ದಾರೆ. ಜೊತೆಗೆ ಇನ್ನೂ ಕೆಲವರು ನನ್ನ ಹೆಸರಿನಲ್ಲಿ ನಕಲಿಯ ಖಾತೆ ತೆರೆದು, ನನ್ನ ಬಗ್ಗೆ ಇಲ್ಲ ಸಲ್ಲದನ್ನು ಕೆಟ್ಟ ರೀತಿಯಲ್ಲಿ ಹೇಳಿ ಮಾನ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ಇವರೆಲ್ಲರನ್ನು ಆದಷ್ಟು ಬೇಗ ಸೆರೆ ಹಿಡಿಯಿರಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರಂತೆ ಪವಿತ್ರಾ ಲೋಕೇಶ್. ನಟಿ ಪವಿತ್ರ ಲೋಕೇಶ್ ಜೊತೆಗೆ ನರೇಶ್ ಮೈಸೂರಿನ ಹೋಟೆಲ್ ನಲ್ಲಿ ತಂಗಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ, ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯವರು ಒಂದು ತಾಸು ಹೋಟೆಲ್ ರೂಮಿನ ಮುಂಭಾಗದಲ್ಲೇ ನಿಂತಿದ್ದಾರೆ.

ಅವರಿಬ್ಬರಿಗೂ ಚಪ್ಪಲಿಯಲ್ಲಿ ಹೊಡೆಯಬೇಕೆಂದು ರಮ್ಯಾ ಆಲೋಚನೆ ನಡೆಸಿದ್ದರಂತೆ. ಆದ್ರೆ ಪೊಲೀಸರು ರಮ್ಯಾ ಅವರನ್ನ ತಡೆದ ಕಾರಣ ಯಾವುದೇ ಹಾನಿಯಾಗಿಲ್ಲ. ಹಾಗೆ ಪವಿತ್ರ ಲೋಕೇಶ್ ಅವರು ಅವರವರ ವೈಯಕ್ತಿಕ ಸಮಸ್ಯೆ ಅವರೇ ಬಗೆಹರಿಸಿಕೊಳ್ಳಬೇಕು ಎಂದು ರಮ್ಯಾ ಹಾಗೂ ನರೇಶ್ ಕೌಟುಂಬಿಕ ಕಲಹದ ಬಗ್ಗೆ ಹೇಳಿದ್ದಾರೆ. ಹಾಗೆ ನರೇಶ್ ಸಹ ನನ್ನ ಆತ್ಮೀಯ ಗೆಳತಿ ಪವಿತ್ರಾ ಲೋಕೇಶ್ ಎಂದಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.