ಕಣ್ಣೀರಿಡುತ್ತಲೇ ಚಿಕ್ಕಪ್ಪ ವಿಜಯ್ ಸಮಾಧಿಗೆ ಹಾಲು ತುಪ್ಪ ಬಿಟ್ಟ ಅಣ್ಣನ ಮಗಳು...! ಕಣ್ಣೀರು ತರಿಸುತ್ತೆ ವಿಡಿಯೋ

Updated: Friday, June 18, 2021, 19:22 [IST]

    

ಹೌದು ಸ್ನೇಹಿತರೆ ಕಳೆದ ಶನಿವಾರ ಕನ್ನಡ ಸಿನಿಮಾ ರಂಗದ ಖ್ಯಾತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಯಾವಾಗಲೂ ಸಮಾಜಮುಖಿ ಕೆಲಸ ಮಾಡುತ್ತಾ ಜನರ ಒಳಿತಿಗಾಗಿ ಒಳ್ಳೆಯದನ್ನೇ ಬಯಸುತ್ತಾ, ಒಬ್ಬ ಒಳ್ಳೆಯ ಮನುಷ್ಯ, ಮತ್ತು ಒಳ್ಳೆಯ ಹೃದಯವಂತ ಸದಾಕಾಲ ಎಲ್ಲರಿಗೂ ಒಳ್ಳೆಯದನ್ನೇ ಮಾಡು ದೇವರೇ ಎಂದು ಪರಿತಪಿಸುವ ನಟ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದರು. ಇವರ ಸಾವಿನ ಸುದ್ದಿ ಕೇಳುತ್ತಲೇ ಇಡೀ ಕನ್ನಡ ಚಿತ್ರರಂಗದ ಗಣ್ಯರು ಕಣ್ಣೀರು ಹಾಕಿದ್ದು, ಅಭಿಮಾನಿಗಳು ಇಂತಹ ಒಳ್ಳೆಯ ನಟನನ್ನು ಮತ್ತು ಇಂತಹ ಒಳ್ಳೆಯ ಪ್ರತಿಭೆ ಇರುವ ಕಲೆಗಾರನನ್ನು ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡೆವೆಲ್ಲ ಎಂದು ಅಕ್ಷರಸಹ ಕಣ್ಣೀರಿನಲ್ಲಿ ಮುಳುಗಿದ್ದು ನಿಜ.

ಹೌದು ಮೊನ್ನೆ ನಟ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ತನ್ನ ಸ್ನೇಹಿತರಾದ ರಘು ಜಮೀನಿನಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಹೌದು ಇತ್ತೀಚಿಗಷ್ಟೇ ವಿಜಯ್ ಸಾವನ್ನಪ್ಪಿದ ಬಳಿಕ ,ಅವರ ಕೊನೆ ಸಿನಿಮಾ ತಲೆದಂಡ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,  ಅಕ್ಷರಸಹ ಇಂತಹ ಪ್ರತಿಭಾವಂತ ಕಲಾವಿದ, ನಮ್ಮ ಜೊತೆಗೆ ಇಲ್ಲ ಎಂದು ಕಣ್ಣೀರು ತರಿಸುವಂತೆ ನಟನೆ ಮಾಡಿದ್ದಾರೆ ವಿಜಯ್ ಅವರು.

ಇಂದು ಸಂಚಾರಿ ವಿಜಯ್ ಅವರಿಗೆ ಮೂರು ದಿನದ ಹಾಲುತುಪ್ಪ ಬಿಡುವ ಕಾರ್ಯ ನಡೆದಿದ್ದು, ರಘು ಹಾಗೂ ಅವರ ಸ್ನೇಹಿತರು ಮತ್ತು ವಿಜಯ್ ಅವರ ಪೂರ್ತಿ ಕುಟುಂಬ ಉಪಸ್ಥಿತಿಯಲ್ಲಿತ್ತು. ಜೊತೆಗೆ ಪ್ರೀತಿ ಪಾತ್ರದ ಚಿಕ್ಕಪ್ಪನಾದ ವಿಜಯ್ ಅವರ ಅಣ್ಣನ ಮಗಳು ಹಾಲುತುಪ್ಪ ಬಿಡುತ್ತಾ ಕಣ್ಣೀರು ಹಾಕುತ್ತ ನಡೆಯುತ್ತಿದ್ದ ದೃಶ್ಯ ನೋಡಿದರೆ ನಿಜಕ್ಕೂ ಕಣ್ಣುಗಳು ಒದ್ದೆಯಾಗುತ್ತವೆ. ಇಂದಿನ ಈ ಹಾಲು ತುಪ್ಪ ಬಿಡುವ ಕಾರ್ಯದಲ್ಲಿ ಊರಿನ ಸ್ನೇಹಿತರು ಭಾಗಿಯಾಗಿದ್ದರು, ಹಾಲುತುಪ್ಪ ಕಾರ್ಯದ ಈ ವಿಡಿಯೋ ನಿಜಕ್ಕೂ ಕಣ್ಣೀರು ತರಿಸುತ್ತದೆ, ಅಣ್ಣನ ಮಗಳು ಕಣ್ಣೀರಿಡುವ ಈ ದೃಶ್ಯ ನೋಡಿದರೆ ನಿಜಕ್ಕೂ ದೇವರಿಲ್ಲ ಎನ್ನುವಂತೆ ಭಾಸವಾಗುತ್ತದೆ...