Sanya Iyer : ನಟಿ ಸಾನ್ಯಾಳ ಖಾಸಗಿ ವಿಡಿಯೋ ವೈರಲ್ ಮಾಡಿದ್ದು ಯಾರು ? ಇಲ್ಲಿದೆ ತಾಯಿ ಹೇಳಿದ ಕಹಿ ಸತ್ಯ

By Infoflick Correspondent

Updated:Wednesday, August 17, 2022, 08:01[IST]

Sanya Iyer : ನಟಿ ಸಾನ್ಯಾಳ ಖಾಸಗಿ ವಿಡಿಯೋ ವೈರಲ್ ಮಾಡಿದ್ದು ಯಾರು ? ಇಲ್ಲಿದೆ ತಾಯಿ ಹೇಳಿದ ಕಹಿ ಸತ್ಯ

ಪುಟ್ಟಗೌರಿ ಮದುವೆ' ಸೀರಿಯಲ್​ ಮೂಲಕ ಫೇಮಸ್​ ಆದ ನಟಿ ಸಾನ್ಯಾ ಅಯ್ಯರ್​ ಈಗ 'ಬಿಗ್​ ಬಾಸ್​ ಕನ್ನಡ ಒಟಿಟಿ'ಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೀವನದಲ್ಲಿ ತಮಗಾದ ಕಿರುಕುಳಗಳ ಬಗ್ಗೆ ಬಿಗ್ ಬಾಸ್​​ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಳಿಕ ಅವರ ತಾಯಿ ದೀಪಾ ಅವರು ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಸಾನ್ಯಾ ಅಯ್ಯರ್​ ಮತ್ತು ಅವರ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಮಲತಂದೆ ವಿಡಿಯೋ ರೆಕಾರ್ಡ್​​ ಮಾಡಿದ್ದ. ಆ ಘಟನೆ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ ಮಾತನಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಾನ್ಯಾ ಅವರ ಒಂದು ವಿಡಿಯೋವನ್ನು ಆತ ರೆಕಾರ್ಡ್​ ಮಾಡಿದ್ದ. ಪರಿಚಿತರ ವಲಯದವರಿಗೆಲ್ಲ ಅದನ್ನು ತೋರಿಸಿದ್ದ. ಆ ಶಾಕಿಂಗ್​ ಸಂಗತಿಯ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ ಮಾತನಾಡಿದ್ದಾರೆ.

ಸಾನ್ಯಾ ಬಿಗ್​ ಬಾಸ್​ ಮನೆಯಲ್ಲಿ ಅತ್ತಿದ್ದಾಳೆ. ಅದನ್ನು ನೋಡಿ ನಾವು ಕೂಡ ಅತ್ತಿದ್ದೇವೆ. ಅವಳು ಎರಡು ವರ್ಷದವಳಾಗಿದ್ದಾಗ ನನಗೆ ಡಿವೋರ್ಸ್​ ಆಯ್ತು. ಹಾಗಾಗಿ ಅಪ್ಪನ ಪ್ರೀತಿ ಆಕೆಗೆ ಸಿಕ್ಕಿರಲಿಲ್ಲ. ನಂತರ ನನ್ನ ಓರ್ವ ಸ್ನೇಹಿತನನ್ನು ನಾನು ಮದುವೆ ಆದೆ. ಅದು ನನ್ನ ತಪ್ಪು ನಿರ್ಧಾರ ಆಗಿತ್ತು. ಸ್ನೇಹಿತರಾಗಿದ್ದಾಗ ಇದ್ದಂತಹ ಸಂಬಂಧ ಮದುವೆ ಆದ ಬಳಿಕ ಹಾಳಾಯಿತು. ಅಪ್ಪ ಬೇಕು ಅಂತ ಬಯಸಿದ್ದ ಸಾನ್ಯಾಗೆ ಸಾಕಾಗಿ ಹೋಯ್ತು' ಎಂದು ದೀಪಾ ಅಯ್ಯರ್​ ಹೇಳಿದ್ದಾರೆ.

ತಾನು ಒಳ್ಳೆಯವನು ಎಂದು ಬಿಂಬಿಸಲು ಆತ ಇದನ್ನೆಲ್ಲ ಮಾಡಿದ. ಆತ ನೋಡುವ ನೋಟ ಸರಿ ಇಲ್ಲ ಎಂದು ಸಾನ್ಯಾ ಹೇಳಿದಾಗ ನಾವು ಅದನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದ್ರೆ ಸಾನ್ಯಾ ಬಗ್ಗೆ ಆತ ಎಲ್ಲ ಕಡೆ ಗಾಸಿಪ್​ ಹರಡಿಸಿದ್ದ' ಎಂದು ದೀಪಾ ಅಯ್ಯರ್​ ಕಹಿ ಘಟನೆಗಳನ್ನು ಬಯಲು ಮಾಡಿದ್ದಾರೆ.

'ಎರಡನೇ ಗಂಡನಿಗೆ ಡಿವೋರ್ಸ್​ ಮಾಡಬೇಕು ಅಂತ ನಾನು ನಿರ್ಧರಿಸಿದಾಗ ಬಿಟ್ಟುಕೊಡಲು ಆತ ರೆಡಿ ಇರಲಿಲ್ಲ. ಅವನ ಜೊತೆ ಸಾನ್ಯಾಗೆ ಕೆಲವೊಮ್ಮೆ ಅನ್​ಕಂಫರ್ಟ್​ ಆಗುತ್ತಿತ್ತು. ಆತ ನಮ್ಮ ಜೊತೆಯೇ ಇರುತ್ತಿದ್ದ. ಒಮ್ಮೆ ಸಾನ್ಯಾ ಮತ್ತು ಆಕೆಯ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಬಂದು ಮೊಬೈಲ್​ನಲ್ಲಿ ರೆಕಾರ್ಡ್​​ ಮಾಡಿದ. ಅದನ್ನು ಎಲ್ಲರಿಗೂ ತೋರಿಸಿಕೊಂಡು ಬಂದಿದ್ದಾನೆ' ಎಂದು ದೀಪಾ ಅಯ್ಯರ್​ ಹೇಳಿದ್ದಾರೆ.