Pavitra Lokesh : ನರೇಶ್- ರಮ್ಯಾ, ಪವಿತ್ರಾ- ಸುಚೇಂದ್ರ ಅವರ ಮಕ್ಕಳ ಗತಿಯೇನು ? ಮನೆಸ್ಥಿತಿಯಿಂದ ಮಕ್ಕಳ ಮನಸ್ಥಿತಿ ಹೇಗಾಗಿರಬಹುದು !

By Infoflick Correspondent

Updated:Sunday, July 3, 2022, 17:07[IST]

Pavitra Lokesh :  ನರೇಶ್- ರಮ್ಯಾ, ಪವಿತ್ರಾ- ಸುಚೇಂದ್ರ ಅವರ ಮಕ್ಕಳ ಗತಿಯೇನು ? ಮನೆಸ್ಥಿತಿಯಿಂದ ಮಕ್ಕಳ ಮನಸ್ಥಿತಿ ಹೇಗಾಗಿರಬಹುದು !

ಗಂಡ ಹೆಂಡರ ಜಗಳದಿಂದ ಕೂಸು ಬಡವಾಯಿತು ಎಂಬ ಮಾತಿದೆ. ಇದು ನರೇಶ್- ರಮ್ಯಾ, ಪವಿತ್ರಾ- ಸುಚೇಂದ್ರ ಅವರ ಘಟನೆಯಿಂದ ಅಕ್ಷರಶಃ ನಿಜವೆನಿಸುತ್ತದೆ. ಮನೆಯ ಜಗಳ ಬೀದಿಗೆ ಬಂದಿದೆ. ತಂದೆ ತಾಯಿಯರ ಕೆಟ್ಟ ವರ್ತನೆಯಿಂದ‌ ಇದು ಮಕ್ಕಳ ಮೇಲೆ ಹೇಗೆಲ್ಲ ಪ್ರಭಾವ ಬೀರಿರಬಹುದು!   ಪವಿತ್ರಾ ಲೋಕೇಶ್​, 'ನಾವು ಮದುವೆ ಆಗಿಲ್ಲ 11 ವರ್ಷ ಒಟ್ಟಿಗೆ ಇದ್ದೆವು ಅಷ್ಟೇ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು ಆದರೆ  ಪವಿತ್ರ ಅವರೊಂದಿಗೆ ನನ್ನದು ಪಾಣಿ ಗ್ರಹಣ. ಕೈ ಹಿಡಿದು ನಡೆಯುತ್ತೇನೆ. ನಡೆಸಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡಿದ್ದು. ಹಾಗಾಗಿ ಕೈ ಹಿಡಿದಿದ್ದನ್ನು ಪಾಲಿಸುವುದು ನನ್ನ ಧರ್ಮ ಎಂದು ಪಾಲಿಸಿದ್ದೇನೆ.  ನಮ್ಮದು ಪಾಣಿಗ್ರಹಣ ಮದುವೆ ನಮಗೆ ಮಕ್ಕಳಿದ್ದಾರೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. 

ಆರಂಭದ ದಿನಗಳಲ್ಲಿ ಪವಿತ್ರಾ ಲೋಕೇಶ್ ಮತ್ತು ನನ್ನ ನಡುವಿನ ಸಂಬಂಧ ಚೆನ್ನಾಗಿತ್ತು. ಆದ್ರೆ, ನಮಗೆ ಇಬ್ಬರು ಮಕ್ಕಳಾದ ನಂತ್ರ ಆಕೆ ಅವರನ್ನ ಒಂಟಿಯಾಗಿ ಬಿಟ್ಟಬಿಟ್ಟರು ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. ಈ ವಿಚಾರದಲ್ಲಿ ಆಕೆಯನ್ನ ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಕೇಳಲಿಲ್ಲ ಎಂದು ಸುಚೇಂದ್ರ ಪ್ರಸಾದ್ ತಿಳಿಸಿದ್ದಾರೆ.    

'ಮೆರವಣಿಗೆಯನ್ನು ಬೆಳವಣಿಗೆ ಎಂದು ಹೇಳಬಾರದು. ಬಿರುಗಾಳಿ ಸುಂಟರಗಾಳಿ ಬರುತ್ತಿರುತ್ತದೆ. ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚನೆ ಮಾಡಿದಾಗ ನಿಜಕ್ಕೂ ಮನಸ್ಸು ವಿಚಲಿತವಾಗುತ್ತದೆ' ಎಂದಿದ್ದಾರೆ ಅವರು. ತಂದೆ ತಾಯಿ ಜೊತೆಗಿಲ್ಲ. ತಾಯಿಯೀಗ ಬೇರೆಯವರೊಟ್ಟಿಗೆ ಇದ್ದಾಗ. ಮದುವೆಯೇ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದಾಗ ಅದು ಮಕ್ಕಳಿಗೆ ಹೇಗೆ ಅನ್ನಿಸಿರಬಹುದು ಅವರ ಮಕ್ಕಳ ಮೇಲೆ‌ ಹೇಗೆಲ್ಲ ಪ್ರಭಾವ ಆಗಿರಬಹುದು ! 

ನರೇಶ್ ಹೆಂಡತಿ ರಮ್ಯಾ ರಘುಪತಿ ಕೂಡ ಸಂದರ್ಶನದಲ್ಲಿ ನಮಗೆ ಮಗನಿದ್ದಾನೆ‌. ಆತ ಇನ್ನು ಚಿಕ್ಕವನು ಅವನಿಗೆ ತಂದೆಯ ಅವಶ್ಯಕತೆ ಇದೆ. ಅವನಿಗಾಗಿ ನಾನು ವಿಚ್ಚೇದನ ನೀಡುವುದಿಲ್ಲ. ಈ ಎಲ್ಲಾ ಘಟನೆಗಳು ತಂದೆಯ ವರ್ತನೆಯಿಂದ ಅವನಿಗೆ ಹೇಗಾಗಿರಬಹುದು ಎಂದು ಹೇಳಿದ್ದರು !

ಪವಿತ್ರ  ಲೋಕೇಶ್  ತಮ್ಮ  ಮಕ್ಕಳ  ಭವಿಷ್ಯದ  ಬಗ್ಗೆ  ಸ್ವಲ್ಪ  ಆದರೂ  ಯೋಚನೆ  ಮಾಡಿದ್ದರೆ  ಅವರು  ಈ  ರೀತಿ  ನಡೆದು  ಕೊಳ್ಳುತ್ತಿರಲಿಲ್ಲ  ಅಲ್ಲವಾ , ಅದೇ  ರೀತಿ  ನರೇಶ್  ಅವರು  ತನ್ನ  ಮಗನ  ಬಗ್ಗೆ  ಯೋಚನೆ  ಮಾಡ್ಬೇಕಿತ್ತು   ಒಂದು  ಸಾರಿ ಯೋಚನೆ  ಮಾಡಿದರೆ  ಇಂತವರಿಗೆ  ಮಕ್ಕಳ  ಆದರೂ  ಏಕೆ  ಬೇಕು ಅಲ್ಲವಾ , ಇದಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಮತ್ತು ಈ ಲೇಖನವನ್ನು ಮರೆಯದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು