ಸಂಚಾರಿ ವಿಜಯ್ ಮಾಡಿದ ಈ ಡಬ್ಬಿಂಗ್ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ..!

Updated: Thursday, June 17, 2021, 20:33 [IST]

    

ಹೌದು ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಖ್ಯಾತ ನಟ ನಾನು ಅವನಲ್ಲ ಅವಳು ಸಿನಿಮಾದಲ್ಲಿ ಅಭಿನಯಿಸಿ ಕಲಾವಿದನಿಗೆ ಯಾವುದೇ ಪಾತ್ರ ಕೊಟ್ಟರೂ ಅದನ್ನು ಹೇಗೆ ನಿಭಾಯಿಸಬೇಕು, ಅದರಲ್ಲಿ ಯಾವ ರೀತಿ ಪಾತ್ರ ಮಾಡಬೇಕು ಎಂಬುದಾಗಿ ತೋರಿಸಿಕೊಟ್ಟ ಸಂಚಾರಿ ವಿಜಯ್ ಇತ್ತೀಚಿಗೆ ಬೈಕ್ ಅಪಘಾತಕ್ಕೆ ಒಳಗಾಗಿ, ಅಪೋಲೋ ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ್ದು, ವಿಜಯ್ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಸರಕಾರಿ ಗೌರವಗಳಿಂದ ಅಂತ್ಯಕ್ರಿಯೆ ಮುಗಿಯಿತು.

ಹೌದು ಸ್ನೇಹಿತರೆ ಸಂಚಾರಿ ವಿಜಯ್ ಅವರು ಇದ್ದಾಗ ಅವರ ಪ್ರತಿಭೆಯನ್ನು ಯಾರೂ ಗುರುತಿಸಲಿಲ್ಲ,  ಸರಿಯಾದ ಸಮಯಕ್ಕೆ ಅವಕಾಶಗಳು ಯಾರು ಕೊಡಲಿಲ್ಲ, ಆದರೂ ತಮ್ಮ ಸೋಲನ್ನು ತಾವೇ ಎದುರಿಸಿ ಒಂದಲ್ಲ ಒಂದು ದಿನ ಸಿನಿಮಾರಂಗದಲ್ಲಿ ಗೆಲುವಿನ ದಡ ಸೇರಿ ಸೇರುತ್ತೇನೆ ಯಶಸ್ವಿಯಾಗುತ್ತೆನೆ ಎಂಬುದಾಗಿ ತುಂಬಾ ಕನಸನ್ನು ಇಟ್ಟುಕೊಂಡಿದ್ದರು, ಮತ್ತು ಒಬ್ಬ ಒಳ್ಳೆಯ ಪ್ರತಿಭಾವಂತ ಹೆಚ್ಚು ಟ್ಯಾಲೆಂಟೆಡ್ ನಟ ಇವರು ಆಗಿದ್ದರು ಎಂದರೆ ತಪ್ಪಾಗಲಾರದು.   

ಹೌದು ಸಂಚಾರಿ ವಿಜಯ್ ಅವರು ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಅವರದೇ ಆದ ಹೆಚ್ಚು ಜೀವತುಂಬಿ ನಟನೆಯಲ್ಲೇ ಮುಳುಗುತ್ತಿದ್ದರು. ಆದರೆ ಸಂಚಾರಿ ವಿಜಯ್ ಅವರಿಗೆ ಸರಿಯಾಗಿ ಕೆಲ ನಿರ್ದೇಶಕರು, ಕೆಲ ನಿರ್ಮಾಪಕರು ಅವಕಾಶ ನೀಡಲಿಲ್ಲ. ರಾಷ್ಟ್ರ ಪ್ರಶಸ್ತಿ ವಿಜೇತ ಆದ್ರೂ ಸಹ ಕೆಲವರು ಇವರನ್ನ ತುಳಿದರು ಎನ್ನಬಹುದು. ಇದೀಗ ವಿಜಯ್ ಅವರು ಸಾವನ್ನಪ್ಪಿದ ಬಳಿಕ ಅವರ ತಲೆದಂಡ ಸಿನಿಮಾದ ಒಂದೊಂದೇ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹರಿದಾಡುತ್ತಿವೆ. ವಿಜಯ್ ನಟನೆ ನೋಡುತ್ತಿದ್ದಂತೆಯೇ ಕಣ್ಣೀರು ಸಹ ಹಾಗೆ ಇಳಿದುಬಿಡುತ್ತದೆ ಈ ಸಿನಿಮಾದ ಟ್ರೈಲರ್ ನಲ್ಲಿ, ಆ ರೀತಿ ನಟ ಸಂಚಾರಿ ವಿಜಯ್ ಅವರ ಅಭಿನಯ ಮೂಡಿ ಬಂದಿದೆ. ಹಾಗೆ ಇನ್ನೊಂದು ರಾಷ್ಟ್ರ ಪ್ರಶಸ್ತಿ ದೊರೆಯುವ ಸಿನಿಮಾವಾಗಿತ್ತು.

ಹೌದು ಸಂಚಾರಿ ವಿಜಯ್ ಅವರ ಡಬ್ಬಿಂಗ್ ವಿಡಿಯೋ ಒಂದು ತುಂಬಾನೇ ವೈರಲ್ ಆಗುತ್ತಿದ್ದು, ಇವರ ಈ ನಟನೆ ನೋಡಿದರೆ ಯಾವ ನಟನೂ ಇವರಿಗೆ ಸಮವಲ್ಲ ಎಂದು ಎನಿಸುತ್ತದೆ. ಈ ವಿಡಿಯೋ ನೋಡಿ ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಯ ತಿಳಿಸಿ ದನ್ಯವಾದಗಳು...