Shivraj Kumar : ಫ್ಯಾಟ್ ಸರ್ಜರಿಯಿಂದ ಶಿವರಾಜ್ ಕುಮಾರ್ ಮಗಳು ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ ಗೊತ್ತಾ..?

By Infoflick Correspondent

Updated:Monday, May 23, 2022, 00:32[IST]

Shivraj Kumar :  ಫ್ಯಾಟ್ ಸರ್ಜರಿಯಿಂದ ಶಿವರಾಜ್ ಕುಮಾರ್ ಮಗಳು ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ ಗೊತ್ತಾ..?

ಇತ್ತೀಚಿಗೆ ಒಂದು ಘಟನೆ ನಡೆಯಿತು ಹೌದು ದೊರೆಸಾನಿ ಎಂಬ ಸೀರಿಯಲ್ ನಟಿ ಚೇತನ ರಾಜ್ ಅವರು ಫ್ಯಾಟ್ ಸರ್ಜರಿ ಮೂಲಕ ಸಾವಿಗೀಡಾದರು. ಈ ಘಟನೆಯನ್ನು ನೋಡಿದ ಮೇಲೆ ಕೆಲವು ಬೆಳವಣಿಗಳು ಈಗ ಹೊರಗಡೆ ಬರುತ್ತಿವೆ. ದುಡ್ಡು ಇದ್ದವರು ಆಗಲಿ, ಸ್ಟಾರ್ ನಟ ನಟಿಯರು ಆಗಲಿ, ಅಥವಾ ಸಾಮಾನ್ಯ ವ್ಯಕ್ತಿಗಳು ಆಗಲಿ ಇಂತಹ ದೊಡ್ಡ ದೊಡ್ಡ ಸಾಹಸಕ್ಕೆ ಕೈ ಹಾಕಬಾರದು ಎಂಬುದಾಗಿ ಮತ್ತೊಮ್ಮೆ ಸಾಬೀತಾಗಿದೆ. ಹೌದು ಬಂಧುಗಳೇ ದುಡ್ಡು ಇರದವರು ಕೂಡ ನಾನು ತುಂಬಾ ದಪ್ಪ ಇದ್ದೇನೆ ಎಂದು ಅದಕ್ಕೆ ಬೇಕಾದಷ್ಟು ದುಡ್ಡು ಹೊಂದಿಸಿಕೊಂಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಫ್ಯಾಟ್ ಸರ್ಜರಿ ಮಾಡಿಸಲು ಮುಂದಾಗಿ ಇದರಿಂದ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆಗೆ ಅವರೇ ಮುಂದೆ ಹೋಗುತ್ತಾರೆ ಎನ್ನಲಾಗಿ ತಿಳಿದುಬಂದಿದೆ.   

ದೊರೆಸಾನಿ ನಟಿ ಚೇತನಾ ರಾಜ್ ಅವರು ಈಗಾಗಲೇ ಪ್ಯಾಟ್ ಸರ್ಜರಿ ಮಾಡಿಸಿದ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಡಾಕ್ಟರ್ ಶಿವರಾಜ್ ಕುಮಾರ್ ಅವರ ಹಿರಿಯ ಪುತ್ರಿ ನಿರುಪಮಾ ಎಲ್ಲರಿಗೂ ಗೊತ್ತಿದ್ದಾರೆ. ಅವರು ಕೂಡ ವೈದ್ಯರು. ಆರಂಭದದಿನಗಳಲ್ಲಿ ಸ್ವಲ್ಪ ದಪ್ಪವಾಗಿದ್ದರು. ಆದರೆ ತೀರಾ ದಪ್ಪವಾಗಿ ಏನು ಇರಲಿಲ್ಲ, ಅವಶ್ಯಕತೆ ಇರದಿದ್ದರೂ ಕೂಡ ಮದುವೆಗೂ ಮುನ್ನ ನಿರುಪಮಾ ಅವರು ಫ್ಯಾಟ್ ಸರ್ಜರಿ ಮಾಡಿಸಿದ್ದರು. ಅದು ಹೊರದೇಶದ ಪ್ರತಿಷ್ಠಿತವಾದ ಒಂದು ಆಸ್ಪತ್ರೆಯಲ್ಲಿ ಎಂದು ಹೇಳಲಾಗುತ್ತಿದೆ. ಬಳಿಕ ಸಾಕಷ್ಟು ಅನಾರೋಗ್ಯ ಸಮಸ್ಯೆ ಎದುರಿಸಿದ್ದು, ಕೆಲವು ದಿನಗಳ ಕಾಲ ನಿರುಪಮಾ ಬೆಡ್ರೆಸ್ಟ್ ಅಲ್ಲಿಯೇ ಇದ್ದರಂತೆ. ಇದಾದ ಬಳಿಕ ಮದುವೆಯಲ್ಲಿ ತುಂಬಾನೇ ತೆಳ್ಳಗಾಗಿ ಕಾಣಿಸಿದ್ದ ನಿರೂಪಮ ಆಗಾಗ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಲೇ ಬಂದರಂತೆ.   

ಹೌದು ನಟ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ವೇಳೆ ನೀವು ಗಮನಿಸಿರಬಹುದು. ನಿರುಪಮಾ ಅವರು ತುಂಬಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಂತೆ ಕಾಣುತ್ತಿದ್ದರು. ಹಾಗೆ ಕುಂಟುತ್ತಾ ನಡೆದಾಡುವ ದೃಶ್ಯ ಎಲ್ಲೆಡೆ ಗಮನಸೆಳೆದಿತ್ತು. ಹೀಗಾಗಿ ಈ ಫ್ಯಾಟ್ ಸರ್ಜರಿಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ ಕಾಡುವುದು ಖಚಿತ ಎನ್ನುವಂತಾಗಿದೆ. ಈಗಲೂ ಕೂಡ ನಿರೂಪಮಾ ಅವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ತುಂಬಾ ದಪ್ಪ ಇರುವವರು ಬೇರೆಯದೇ ರೀತಿ ಪ್ರಯತ್ನ ಪಡಬಹುದು, ನ್ಯಾಚುರಲ್ ಆಗಿ ಏನಾದರೂ ಸಾಧ್ಯಮಾಡಿ ತಮ್ಮ ದೇಹ ತೂಕವನ್ನು ಇಳಿಸಿಕೊಳ್ಳಬಹುದು, ಆದರೆ ಇಂತಹ ಸಾಹಸಕ್ಕೆ ಕೈ ಹಾಕಿದರೆ ಅನಾಹುತ ತಪ್ಪಿದ್ದಲ್ಲ ಎಂದು ಈ ಮೂಲಕ ತಿಳಿದುಬರುತ್ತದೆ. 

ನಟ ದೊಡ್ಡಣ್ಣ ಹಾಗೂ ಬುಲೆಟ್ ಪ್ರಕಾಶ್ ನಯನತಾರಾ ಅನುಷ್ಕಾ ಶೆಟ್ಟಿ ಇನ್ನು ಕೂಡ ಸಾಕಷ್ಟು ಜನರು ಫ್ಯಾಟ್ ಸರ್ಜರಿ ಮಾಡಿಸಿದ್ದಾರಂತೆ. ಹೀಗಾಗಿ ಇದರಿಂದ ಸಮಸ್ಯೆಗೆ ಒಳಗಾಗದೆ ಇರುವವರು ಕಡಿಮೆ ಎಂದು ಹೇಳಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ. ಇಂಥಾ ಕೆಲಸಕ್ಕೆ ಕೈ ಹಾಕಬೇಡಿ. ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...