Sonu Srinivasa Gowda : ಸೋನು ಗೌಡ ಮೂರು ದಿನಕ್ಕೊಮ್ಮೆ ಅದು ಮೂಡ್ ಬಂದ್ರೆ ಮಾಡ್ತಾರಂತೆ..! ಸೋನು ಮಾತಿಗೆ ಕಿಚ್ಚ ಶಾಕ್

By Infoflick Correspondent

Updated:Wednesday, August 17, 2022, 08:26[IST]

Sonu Srinivasa Gowda : ಸೋನು ಗೌಡ ಮೂರು ದಿನಕ್ಕೊಮ್ಮೆ ಅದು ಮೂಡ್ ಬಂದ್ರೆ ಮಾಡ್ತಾರಂತೆ..! ಸೋನು ಮಾತಿಗೆ ಕಿಚ್ಚ ಶಾಕ್

ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡನ್ನು ಬಿಗ್ಬಾಸ್ ಮನೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳ ಜೊತೆ ಮೊನ್ನೆ ಕಳೆದ ವಾರಾಂತ್ಯದ ಮಾತುಕತೆ ನಡೆಸಿದರು. ಸ್ಪರ್ಧಿಗಳ ಜೊತೆ ಹೆಚ್ಚು ಮಾತುಕತೆ ನಡೆಸುವಾಗ ಮನೆಯಲ್ಲಿ ಗಲೀಜು ಯಾರು ಇರುತ್ತಾರೆಂದು ಸುದೀಪ್ ಪ್ರಶ್ನೆ ಮಾಡಿದರು. ಆಗ ಎಲ್ಲರೂ ಸ್ಪೂರ್ತಿ ಗೌಡ ಹಾಗೂ ಸಾನ್ಯ ಅಯ್ಯರ್ ಎನ್ನುವ ಹೆಸರು ಹೇಳಿದ್ದು  ಬಹುತೇಕ ಹೆಚ್ಚು ಸ್ಪರ್ಧಿಗಳು ಇವರಿಬ್ಬರ ಹೆಸರನ್ನೇ ಕಿಚ್ಚನ ಮುಂದೆ ತೆಗೆದುಕೊಂಡರು ಎನ್ನಲಾಗಿದೆ. ಹೌದು ಇವರಿಬ್ಬರು ಅವರವರ ಬಟ್ಟೆ ಮಡಚಿಡುವ ವಿಚಾರದಲ್ಲಿ ಹೆಚ್ಚು ಗಲೀಜು ಕಾಣಿಸುತ್ತಾರೆ, ಗಲೀಜಾಗಿ ಬಟ್ಟೆಗಳನ್ನ ಎಲ್ಲಿ ಬೇಕು ಅಲ್ಲಿ ಬಿಸಾಡುತ್ತಾರೆ ಎನ್ನುವ ಉತ್ತರಗಳನ್ನು ಬಿಗ್ಬಾಸ್ ಮನೆಯ ಸ್ಪರ್ಧಿಗಳು ಹೇಳಿಕೊಂಡರು.

ನಂತರದಲ್ಲಿ ಸ್ವಲ್ಪ ಮುಂದೆ ಹೋದ ಕಿಚ್ಚ ಸುದೀಪ್ ಯಾರು ಪ್ರತಿದಿನವೂ ಸ್ನಾನ ಮಾಡುವುದಿಲ್ಲ ಎನ್ನುವ ಪ್ರಶ್ನೆಯನ್ನು  ಕೇಳಿದರು. ಆಗ ಎಲ್ಲರೂ ಸೋನು ಶ್ರೀನಿವಾಸ ಗೌಡ ಮತ್ತೆ ಸಾನ್ಯಾ ಅಯ್ಯರ್ ಎಂದು ಹೇಳಿದರು. ಸೋನು ಇಂದು ನಿಮ್ಮ ಜೊತೆ ಮಾತನಾಡಲು ಬರಬೇಕಾದರೂ ಕೂಡ ಸ್ನಾನ ಮಾಡಿಲ್ಲ ಎಂದು ಸಾನ್ಯಾ ಹೇಳಿದರು. ಅದಕ್ಕೆ ಎಸ್ ಎಂದು ಸೋನು ಉತ್ತರ ನೀಡಿದ್ದು ಎಲ್ಲರನ್ನೂ ಅಚ್ಚರಿ ಪಡಿಸಿತು.  ಹೌದು ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅವರು ಸೋನು ಶ್ರೀನಿವಾಸ ಗೌಡ ಅವರಿಗೆ ಸ್ನಾನದ ವಿಚಾರವಾಗಿ ಪ್ರಶ್ನೆ ಮಾಡಿದ್ದು, ಮನೆಯಲ್ಲೂ ಹೀಗೆನಾ ಅಥವಾ ಹೇಗೆ ಎಂದು ಪ್ರಶ್ನೆ ಮಾಡಿದರು. ಆಗ ಇಲ್ಲ ಸರ್ ನನಗೆ ಮೂಡ್ ಬಂದಾಗ ಮೂರು ದಿನಕ್ಕೊಮ್ಮೆ ಮಾಡುತ್ತೇನೆ ಎಂದರು. ನಂತರ ಈ ಮಾತನ್ನು ಕೇಳಿ ಒಂದು ಕ್ಷಣ ಶಾಕ್ ಆದ ಸುದೀಪ್ ಅವರು ಏನನ್ನ ಮೂಡ್ ಬಂದಾಗ ಮಾಡುತ್ತೀರಾ ಸೋನು ಎಂದು ಸ್ವಲ್ಪ ಕಾಲೆಳಿದರು.. 

ಆಗ ಸ್ಪರ್ಧಿಗಳೆಲ್ಲ ನಕ್ಕುಬಿಟ್ಟರು. ನಂತರದಲ್ಲಿ ಈ ಸೋನು ಸ್ನಾನದ ವಿಚಾರವಾಗಿ ಹೇಳಿದ್ದು ಸರ್ ಎಂದಳು. ಸ್ವಲ್ಪ ಹೇಳುವಾಗ ಕರೆಕ್ಟಾಗಿ ವಿಷಯವನ್ನು ಅರ್ಥ ಮಾಡಿಕೊಂಡು ಹೇಳಿ, ಇಲ್ಲವಾದಲ್ಲಿ ವಿಷಯ ಬೇರೆ ಬೇರೆ ರೂಪವನ್ನು ಪಡೆದುಕೊಳ್ಳುತ್ತದೆ ಎಂದರು ಸುದೀಪ್. ಹಾಗೆ ಆ ವಿಷಯ ಅಲ್ಲೀಗೆ ಸಹ ಬಿಟ್ಟರು ಸುದೀಪ್ ಎನ್ನಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ಒಟಿಟಿ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ ಗೌಡ ಅವರ ಆಟ ಹೇಗೆ ಇದೆ ಎಂದು ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನು ಹೇಳಿ, ಜೊತೆಗೆ ಈ ಬಾರಿ ಯಾರು ಬಿಗ್ಬಾಸ್ ಮನೆಯಿಂದ ಹೊರ ಬರಬೇಕು ಎಂಬುದಾಗಿಯೂ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...