ತಾಯಿ ಮೇಲೆ ದೂರು ನೀಡಿದ ತಮಿಳು ನಟ ವಿಜಯ್.! ಅಸಲಿ ಕಾರಣ ಇಲ್ಲಿದೆ ನೋಡಿ, ಎಂಥಾ ತಾಯಿ ಇವರು!

Updated: Monday, September 20, 2021, 11:13 [IST]

ತಾಯಿ ಮೇಲೆ ದೂರು ನೀಡಿದ ತಮಿಳು ನಟ ವಿಜಯ್.! ಅಸಲಿ ಕಾರಣ ಇಲ್ಲಿದೆ ನೋಡಿ, ಎಂಥಾ ತಾಯಿ ಇವರು!

ಸ್ನೇಹಿತರೆ ಪ್ರಪಂಚದಲ್ಲಿ ಯಾರ ಪ್ರೀತಿ ಸುಳ್ಳಾದರೂ ಆಗಬಹುದು, ಆದರೆ ಹೆತ್ತ ತಾಯಿಯ ಪ್ರೀತಿ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಹೇಳಲಾಗಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇದೀಗ ತಮಿಳು ಸೂಪರ್ ಸ್ಟಾರ್ ಖ್ಯಾತ ನಟ ವಿಜಯ್ ಅವರ ಕುಟುಂಬದಲ್ಲಿ ನಡೆದಿದೆ. ಹೌದು ನಟ ವಿಜಯ್ ಅವರೇ ಸ್ವಂತ ತಂದೆ ತಾಯಿ ಹಾಗೂ ಒಟ್ಟು 11 ಜನರ ವಿರುದ್ಧವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಈಗ ಮಾಧ್ಯಮದ ಮೂಲಕ ತಿಳಿದುಬಂದಿದೆ. ಇದಕ್ಕೆ ಅಸಲಿ ಕಾರಣ ಸಹ ಇದೆಯಂತೆ.

ಹೌದು ತಮಿಳುನಾಡಿನ ಸೂಪರ್ ಸ್ಟಾರ್ ನಟ ವಿಜಯ್ ತಂದೆ-ತಾಯಿ ಮಾಡಿದ ಕೆಲಸಕ್ಕೆ ಇದೀಗ ಸರಿಯಾಗಿ ಆಗಿದೆ ಎಂದು ವಿಜಯ್ ಅವರ ಅಭಿಮಾನಿಗಳು ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ.? ಮುಂದೆ ಓದಿ. ಕಳೆದ ವರ್ಷ ವಿಜಯ್ ಅವರ ತಂದೆ ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿ ಅದಕ್ಕೆ "ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕಮ್" ಎಂಬ ಹೆಸರನ್ನು ಇಟ್ಟು ನಾಮಕರಣ ಮಾಡಿದ್ದರು. ಇದೇ ವಿಚಾರವಾಗಿ ವಿಜಯ್ ಅವರು ತುಂಬಾನೇ ತಲೆಕೆಡಿಸಿಕೊಂಡಿದ್ದರು.

ಇದರಲ್ಲಿ ನನ್ನ ಹೆಸರನ್ನು ತರಬೇಡಿ ರಾಜಕೀಯದಲ್ಲಿ ನನ್ನ ಅಭಿಮಾನಿಗಳ ಹೆಸರನ್ನು ತರಬೇಡಿ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಮಾತನಾಡಿದ್ದರು. ಆದರೆ ಮಗನ ಮಾತಿಗೆ ಕಿಂಚಿತ್ತೂ ಕಿವಿಕೊಡದ ವಿಜಯ ತಂದೆ-ತಾಯಿ ತಮ್ಮ ಪಕ್ಷಕ್ಕೆ ಇದೆ ಹೆಸರು ಇರುತ್ತದೆ ಎಂದು ಹೇಳಿದ್ದರು. ಹೌದು ಪಕ್ಷಕ್ಕೆ ವಿಜಯ್ ತಂದೆ ಚಂದ್ರಶೇಖರ್ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಹಾಗು ತಾಯಿ ಶೋಭಾ ಚಂದ್ರಶೇಖರ್ ಅವರು ಖಜಾಂಚಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ವಿಜಯ್ ಎಷ್ಟು ಬಾರಿ ತಂದೆ ತಾಯಿ ಬಳಿ ಮನವಿ ಮಾಡಿದರೂ ಸಹ  ಅವರು ನಿರ್ಲಕ್ಷ ಮಾಡಿದ್ದಾರಂತೆ. ಹಾಗಾಗಿಯೇ ತಂದೆ ತಾಯಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ.

ವಿಜಯ್ ಅವರು ಸಿನಿಮಾ ವಿಚಾರದಲ್ಲಿಯೂ ಆಗಾಗ ಸುದ್ದಿಯಾಗುತ್ತಾರೆ. ಹಾಗೆ ವೈಯಕ್ತಿಕ ವಿಚಾರದಲ್ಲಿಯೂ ಸಹ ಸುದ್ದಿಯಾಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ತಿಳಿಸಿ, ಹಾಗೆ ಮಗನ ಇಷ್ಟವಿಲ್ಲದ ಕೆಲಸದ ವಿರುದ್ಧ ಹೋಗುವ ತಂದೆ-ತಾಯಿಗಳ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...