ಯಾವೆಲ್ಲಾ ನಟ ನಟಿಯರು ಹೇಗೆ ಸಂಬಂಧಿಗಳು ಆಗಿದ್ದಾರೆ ಗೊತ್ತಾ..? ಅಸಲಿ ಮಾಹಿತಿಯ ನೀವೂ ತಿಳಿಯಿರಿ..!
Updated:Sunday, May 15, 2022, 20:03[IST]

ಸಿನಿಮಾರಂಗದಲ್ಲಿ ನಮಗೆ ನಿಮಗೆ ಗೊತ್ತಿಲ್ಲದ ಸಾಕಷ್ಟು ನಟ-ನಟಿಯರು ತೀರ ಹತ್ತಿರದ ಸಂಬಂಧಿಕರು ಇದ್ದಾರೆ. ಸಿನಿಮಾರಂಗದಲ್ಲಿ ಕುಟುಂಬದವರ ಜೊತೆಗೆ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಸಾಕಷ್ಟು ನಟ-ನಟಿಯರು ಇದ್ದಾರೆ ಎನ್ನಲಾಗಿದೆ. ಯಾವ ನಟ ಯಾರಿಗೆ ಹತ್ತಿರ, ಹೇಗೆ ಸಂಬಂಧಿಕರು ಆಗಿದ್ದಾರೆ, ಯಾವ ನಟಿಯರು ಯಾರಿಗೆ ಅಕ್ಕ-ತಂಗಿ ಎನ್ನುವುದ ಕೆಲವು ನಟ-ನಟಿಯರ ಪಟ್ಟಿಯನ್ನು ಈಗ ಈ ಮೂಲಕ ತಿಳಿಸಲಾಗುತ್ತದೆ. ನೀವು ಕೂಡ ಈ ಮಾಹಿತಿಯನ್ನು ಪೂರ್ತಿ ಓದಿ. ಹೌದು ಕನ್ನಡ ಚಿತ್ರರಂಗ ಹಾಗೂ ತೆಲುಗು, ಬಾಲಿವುಡ್, ಚಿತ್ರರಂಗದಲ್ಲಿಯೂ ಹೆಚ್ಚು ಗುರುತಿಸಿಕೊಂಡಿರುವ ಕೆಲ ನಟ-ನಟಿಯರು ಹೇಗೆ ಬೇರೆ ನಟರ ಜೊತೆ ತೀರ ಹತ್ತಿರ ಸಂಬಂಧ ಹೊಂದಿದ್ದಾರೆ ಗೊತ್ತಾ.?
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಶಿವಣ್ಣ ಅವರಿಂದಲೇ ಆರಂಭ ಮಾಡೋಣ. ಹೌದು ಶಿವರಾಜ್ ಕುಮಾರ್ ಅವರ ಹೆಂಡತಿ ಗೀತಾ ಅವರು ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರ ತಂಗಿ, ಹಾಗಾಗಿ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ ಶಿವಣ್ಣ ಅವರಿಗೆ ಮಾವಂದಿರು ಆಗುತ್ತಾರೆ. ನಂತರದಲ್ಲಿ ಅಕುಲ್ ಬಾಲಾಜಿ. ಹೌದು ಆಂಕರ್ ಅಕುಲ್ ಬಾಲಾಜಿ, ಮಹೇಶ್ ಬಾಬು ಅವರು ಕೂಡ ಸಂಬಂಧಿಕರಂತೆ. ಮಹೇಶ್ ಬಾಬು ಅವರ ತಂದೆ ಎರಡು ಮದುವೆಯಾಗಿದ್ದು, ಎರಡನೇ ಹೆಂಡತಿಯ ಮಗಳೇ ಅಕುಲ್ ಬಾಲಾಜಿ ಅವರ ಹೆಂಡತಿ ಎನ್ನಲಾಗುತ್ತಿದೆ. ಕುರುಬನರಾಣಿ ಖ್ಯಾತಿಯ ನಗ್ಮ ಹಾಗೂ ಸೂರ್ಯ ಅವರ ಪತ್ನಿ ಜ್ಯೋತಿಕಾ ಅಕ್ಕ ತಂಗಿಯರಂತೆ. ನಗ್ಮ ಅವರಪ್ಪ ಇಬ್ಬರನ್ನು ಮದುವೆಯಾಗಿದ್ದು, ಮೊದಲ ಹೆಂಡತಿಯ ಮಗಳು ನಗ್ಮಾ, ಎರಡನೆಯ ಹೆಂಡತಿ ಮಗಳು ಜ್ಯೋತಿಕಾ ಎನ್ನಲಾಗಿದೆ.
ಪ್ರಿಯಾಮಣಿ ಹಾಗೂ ಬಾಲಿವುಡ್ ನಟಿ ವಿದ್ಯಾಬಾಲನ್ ಕೂಡ ಸಂಬಂಧಿಕರು ಇವರಿಬ್ಬರು ಕಸಿನ್ ಆಗುತ್ತಾರಂತೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಿಡಿಯೋನ ನೋಡಿ. ನಟ ರಾಜ್ ಕುಮಾರ್ ಹಾಗೂ ರಾಮ್ಕುಮಾರ್ ಇಬ್ಬರು ಕೂಡ ಸಂಬಂಧಿಕರು ಆಗಿದ್ದು, ನಟ ರಾಮ್ ಕುಮಾರ್ ರಾಜಕುಮಾರ್ ಅವರಿಗೆ ಅಳಿಯ ಆಗಬೇಕಂತೆ. ಹೌದು ರಾಜ್ಕುಮಾರ್ ಅವರ ಮಗಳನ್ನು ರಾಮ್ ಕುಮಾರ್ ಅವರೇ ವರಿಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಇನ್ನೂ ಯಾವೆಲ್ಲ ನಟ ನಟಿಯರು ಸಂಬಂಧಿಕರು ಆಗಿದ್ದಾರೆ ಎಂಬುದಾಗಿ ತಿಳಿದುಕೊಳ್ಳಿ. ಯಶ್ ಹಾಗೂ ದೀಪಿಕಾ, ದುನಿಯಾ ವಿಜಯ್ ಹಾಗೂ ಲೂಸ್ ಮಾದ, ಪ್ರಶಾಂತ್ ನೀಲ್ ಹಾಗೂ ಶ್ರೀಮುರುಳಿ, ಇವರೆಲ್ಲ ಹೇಗೆ ಸಂಬಂಧಿಕರು ಅಗುತ್ತಾರೆ ನೀವೇ ನೋಡಿ. ಈ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು..