ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಕಿಡ್ನಾಪ್: ಕವಿತಾ ಗೌಡ ಬಳಿ ಸೆಲ್ಫೀ ಕೇಳಿ ಯಾಮಾರಿಸಿ ಕಿಡ್ನಾಪ್ ಮಾಡಿದ್ಯಾರು.?

By Priya

Updated:Saturday, November 27, 2021, 09:51[IST]

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಕಿಡ್ನಾಪ್: ಕವಿತಾ ಗೌಡ ಬಳಿ ಸೆಲ್ಫೀ ಕೇಳಿ ಯಾಮಾರಿಸಿ ಕಿಡ್ನಾಪ್ ಮಾಡಿದ್ಯಾರು.?

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಅಂದರೆ ಕವಿತಾ  ಗೌಡ ಎಂದರೆ ಎಲ್ಲರಿಗೂ ಇಷ್ಟ. ಧಾರಾವಾಹಿಯಲ್ಲಿ ಚಿನ್ನು ಅಭಿನಯವನ್ನು ಹಲವರು ಮೆಚ್ಚಿಕೊಂಡಿದ್ದರು. ಧಾರಾವಾಹಿಯಲ್ಲಿ ಚಿನ್ನು ಜೊತೆ ಪತಿಯ ಪಾತ್ರದಲ್ಲಿ ಕೆಲ ದಿನ ನಟಿಸಿದ್ದ ಚಂದನ್ ಕುಮಾರ್ ಕೂಡ ಫೇಮಸ್ ಆಗಿದ್ದರು. ತದ ನಂತರ ಇವರಿಬ್ಬರು ಪ್ರೀತಿಸಿ ಮದುವೆಯನ್ನೂ ಆಗಿದ್ದಾರೆ. ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಇಬ್ಬರು ಕೂಡ ಈಗ ಮತ್ತೆ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಆದರೆ ಇದೀಗ ಬಂದಿರುವ ಶಾಕಿಂಗ್ ಸುದ್ದಿ ಎೆದರೆ, ಯಾರೋ ನಾಲ್ವರು ಕವಿತಾರನ್ನು ಕಿಡ್ನಾಪ್ ಮಾಡಿದ್ದಾರೆಂದು ತಿಳಿದು  ಬಂದಿದೆ. ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿದೆ.

ಕವಿತಾ ಗೌಡ ಅವರು ಅಂಗಡಿಯೊಂದರಿಂದ ಕೆಳಗಿಳಿದು ಬಂದು ಫುಟ್ ಪಾತ್ ಬಳಿ ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆ ವ್ಯಾನ್ ಒಂದು ಅಲ್ಲಿಗೆ ಬರುತ್ತದೆ. ಅದರಿಂದ ಇಳಿದವರು ಕವಿತಾ ಗೌಡರನ್ನು ಸೆಲ್ಫಿಗೆ ಫೋಸ್ ಕೊಡುವಂತೆ ಮನವಿ ಮಾಡುತ್ತಾರೆ. ಇದಕ್ಕೆ ಒಪ್ಪಿದ ಕವಿತಾ ಗೊಡ ಸೆಲ್ಫೀಗೆ ಫೋಸ್ ಕೊಡುತ್ತಾರೆ. ಇದೇ ಸಮಯವನ್ನು ಬಳಸಿಕೊಂಡವರು ಕವಿತಾರನ್ನು ಕಿಡ್ನಾಪ್ ಮಾಡುತ್ತಾರೆ. ಈ ವಿಡಿಯೋ ನೋಡಿದವರೆಲ್ಲರೂ ಬೆಚ್ಚಿಬಿದ್ದಿದ್ದಾರೆ.   

ಆದರೆ ಈ ವಿಡಿಯೋದಲ್ಲಿ ಆದ ಕಿಡ್ನ್ಯಾಪ್ ನಿಜವಲ್ಲ. ರೀಲ್ ಕಿಡ್ನಾಪ್. ಗೋವಿಂದ ಗೋವಿಂದ ಸಿನಿಮಾದಲ್ಲಿ ಕವಿತಾ ಗೌಡ ನಟಿಸಿದ್ದಾರೆ. ಗೋವಿಂದ ಗೋವಿಂದ ಚಿತ್ರದ ತುಣುಕೊಂದನ್ನು ಹರಿ ಬಿಟ್ಟಿರುವ ಚಿತ್ರತಂಡ, ಕವಿತಾ ಗೌಡ ಅವರ ಕಿಡ್ನಾಪ್ ಗ್ಗೆ ತಿಳಿಯಲು ನವೆಂಬರ್  26ವರೆಗೆ ಕಾಯಿರಿ ಎಂದಿದೆ. ಈ ಚಿತ್ರದಲ್ಲಿ ಕವಿತಾ ಗೌಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.  ಇವರೊಂದಿಗೆ ಶೈಲೇಂದ್ರ ಬಾಬು, ಭಾವನಾ ಮೆನನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾಮಿಡಿ ಥ್ರಿಲ್ಲರ್ ಚಿತ್ರವಾಗಿರುವ ಗೋವಿಂದ ಗೋವಿಂದ ಚಿತ್ರ ಮೊದಲು ಕನ್ನಡದಲ್ಲಿ ರಿಲೀಸ್ ಆಗ್ತಿದೆ. ಬಳಿಕ ಮಳಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.