ವೈರಲ್ ಆಗುತ್ತಿರುವ ಯಶ್ ಮದುವೆ ಲಗ್ನ ಪತ್ರಿಕೆ..! ಪುನೀತ್ ಗೆ ಮೊದಲು ಯಾಕೆ ಲಗ್ನ ಪತ್ರಿಕೆ ಕೊಟ್ಟಿದ್ದರು ಗೊತ್ತಾ..?

By Priya

Updated:Saturday, November 27, 2021, 13:32[IST]

ವೈರಲ್ ಆಗುತ್ತಿರುವ ಯಶ್ ಮದುವೆ ಲಗ್ನ ಪತ್ರಿಕೆ..! ಪುನೀತ್ ಗೆ ಮೊದಲು ಯಾಕೆ ಲಗ್ನ ಪತ್ರಿಕೆ ಕೊಟ್ಟಿದ್ದರು ಗೊತ್ತಾ..?

ಹೌದು ಸ್ನೇಹಿತರೆ ಕನ್ನಡ ಸಿನಿಮಾರಂಗದ ಖ್ಯಾತ ನಟ ಕೆಜಿಎಫ್ ಮೂಲಕ ಇಡೀ ಭಾರತ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರಾಕಿಂಗ್ ಸ್ಟಾರ್ ಯಶ್ ಇದೀಗ ತುಂಬಾನೇ ಪ್ರಖ್ಯಾತಿ ಹೊಂದಿದ್ದಾರೆ. ಹಾಗೆ ಅವರದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿರುವ ಯಶ್ ಅವರ ಒಂದು ವಿಚಾರ ಇದೀಗ ಹೊರಬಿದ್ದಿದೆ. ಹೌದು ರಾಧಿಕಾ ಪಂಡಿತ್ ಹಾಗೂ ಯಶ್ ಅವರು ಮೊದಲು ಕಿರುತೆರೆಯ ಒಂದು ಧಾರವಾಹಿಯಲ್ಲಿ ಕಾಣಿಸಿಕೊಂಡರು.

ಅದೇ ನಂದಗೋಕುಲ ಸೀರಿಯಲ್. ಈ ಸೀರಿಯಲ್ ಮೂಲಕ ಅಭಿನಯ ಆರಂಭಿಸಿದರು. ನಂತರ ಜೋಡಿ ಒಟ್ಟಾಗಿ ಮೊಗ್ಗಿನ ಮನಸು ಚಿತ್ರದ ಮೂಲಕ ದೊಡ್ಡ ತೆರೆಯ ಮೇಲೆ ಕಾಣಿಸಿಕೊಂಡರು. ಹೌದು 2016ರಲ್ಲಿ ಯಶ್ ಅವರು ಅವರ ಆಸೆ ಹಾಗೂ ಅಭಿಮಾನಿಗಳ ಆಸೆಯಂತೆ ರಾಧಿಕಾ ಪಂಡಿತ್ ಅವರನ್ನು ಕೈ ಹಿಡಿದರು. ಇದೀಗ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಇವರ ಮದುವೆ ವಿಚಾರ ಇದೀಗ ಪ್ರಸ್ತಾಪ ಆಗಿದ್ದು ಇವರ ಲಗ್ನ ಪತ್ರಿಕೆ ವೈರಲ್ ಆಗುತ್ತಿದೆ. ಹಾಗೂ ಇವರ ಮದುವೆ ಲಗ್ನ ಪತ್ರಿಕೆಯ ವಿಷಯ ಈಗ ಹೆಚ್ಚು ಚರ್ಚೆ ಆಗುತ್ತಿದೆ.  

ಹೌದು ಯಶ್ ಹಾಗೂ ರಾಧಿಕಾ ಪಂಡಿತ್ ಅವರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮೊದಲು ತಮ್ಮ ಮದುವೆಯ ಲಗ್ನ ಪತ್ರಿಕೆ ನೀಡಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಕಾರಣವ ಹುಡುಕಿ ಹೊರಟರೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸಿನಿಮಾರಂಗಕ್ಕೆ ಬರುವ ಮುನ್ನವೇ ನಟ ಪುನೀತ್ ಅವರ ಅತಿ ದೊಡ್ಡ ಅಭಿಮಾನಿಗಳು ಆಗಿದ್ದರಂತೆ. ಅಪ್ಪು ಅಂದರೆ ಅತೀವ ಪ್ರೀತಿ ಹಾಗೂ ಅಭಿಮಾನ ಹೆಚ್ಚಿತ್ತಂತೆ. ಆ ಕಾರಣಕ್ಕಾಗಿಯೇ ನಮ್ಮ ವಿವಾಹದ ಲಗ್ನಪತ್ರಿಕೆಯನ್ನು ಮೊದಲಿಗೆ ಪುನೀತ್ ಅವರಿಗೆ ನೀಡಿದ್ದೆವು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜೊತೆಗೆ ಪುನೀತ್ ಅವರ ಅತಿ ದೊಡ್ಡ ಅಭಿಮಾನಿಗಳು ಎಂದು ಇವರೇ ಕೆಲ ಸಂದರ್ಶನಗಳಲ್ಲಿ ಮಾತಾಡಿ ಹೇಳಿಕೆ ಕೊಟ್ಟಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಈ ಮಾಹಿತಿನ ಶೇರ್ ಮಾಡಿ. ಹೌದು ನಮ್ಮ ಪುನೀತ್ ಅವರು ಯಾರಿಗೆ ಇಷ್ಟವಿರಲಿಲ್ಲ ಅಷ್ಟು ಪ್ರೀತಿಯ ಎಲ್ಲರಿಗೂ ನೀಡುತ್ತಿದ್ದರು. ಆದ್ರೆ ಆ ದೇವರಿಗೆ ಇದು ಇಷ್ಟವಾಯಿತೋ ಇಲ್ವೋ ಗೊತ್ತಿಲ್ಲ ಬೇಗ ತನ್ನತ್ತಾ ಅಪ್ಪು ಅವರನ್ನ ಕರೆದುಕೊಂಡು ಎಲ್ಲರಿಗೂ ನೋವು ನೀಡಿದ.