ನಟಿ ತ್ರಿಷಾರನ್ನು ನಟಿ ಚಾರ್ಮಿ ಕೌರ್ ಈ ವರ್ಷವೇ ಮದ್ವೆ ಆಗ್ತಾರಾ?

By Infoflick Correspondent

Updated:Thursday, June 30, 2022, 13:22[IST]

ನಟಿ ತ್ರಿಷಾರನ್ನು ನಟಿ ಚಾರ್ಮಿ ಕೌರ್ ಈ ವರ್ಷವೇ ಮದ್ವೆ ಆಗ್ತಾರಾ?

ಗಂಡು-ಹೆಣ್ಣು ಮದುವೆ ಆಗೋದು ಭಾರತೀಯ ಸಂಪ್ರಾದಯ. ಈ ನಡುವೆ ಗಂಡು-ಗಂಡು ಹಾಗೂ ಹೆಣ್ಣು-ಹೆಣ್ಣು ನಡುವೆ ಕೂಡ ವಿವಾಹಗಳು ಜರುಗುತ್ತಿದೆ. ಇದು ಅಚ್ಚರಿಯಾದ್ರೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ನಮ್ಮ ಸಮಾಜದಲ್ಲೂ ಸಲಿಂಗ ವಿವಾಹವೂ ಈಗ ಕಾನೂನು ಬದ್ಧವಾಗಿದೆ. ಇದನ್ನೇ ಪ್ರಸ್ತಾಪಿಸಿ ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಕೌರ್,  ಕ್ಯೂಟ್ ಬ್ಯಾಟಿ ನಟಿ ತ್ರಿಷಾ ಕಣ್ಣನ್​ರನ್ನು ಪ್ರೊಪೊಸ್ ಮಾಡಿದ್ದಾರೆ. 2015ರಲ್ಲಿ ಚೆನ್ನೈ ಮೂಲದ ಉದ್ಯಮಿ ಜೊತೆ ತ್ರಿಶಾ ಮದುವೆ ಫಿಕ್ಸ್​ ಆಗಿತ್ತು.. ಅದ್ಧೂರಿ ಎಂಗೇಜ್ಮೆಂಟ್​ ಕೂಡ ನಡೆದಿತ್ತು. ಆದ್ರೆ, ನಾಲ್ಕೇ ತಿಂಗಳಿಗೆ ಎಂಗೇಜ್ಮೆಂಟ್​ ಮುರಿದು ಬಿದ್ದಿದನ್ನ ಸ್ವತ: ತ್ರಿಶಾ ಕನ್ಫರ್ಮ್​ ಮಾಡಿದ್ದರು. 

ಚಾರ್ಮಿ ಕೌರ್ ಬಹುಭಾಷಾ ನಟಿ ತ್ರಿಷಾ ಅವರನ್ನ ಮದುವೆಯಾಗಲು ಬಯಸುತ್ತಿದ್ದಾರೆ. ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ ಹಾಘೂ ಚಾರ್ಮಿ ಕೌರ್ ಮದುವೆಯಾಗುತ್ತಿದ್ದಾರೆ! ಅರೇ! ಇದೇನಿದು ಎಂದು ಅಚ್ಚರಿಪಡಬೇಡಿ. ತಾವು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  

ತ್ರಿಷಾಗೆ 36 ವರ್ಷ. ಚಾರ್ಮಿಗೆ 31 ವರ್ಷ. ಇಬ್ಬರಿಗು ಮದುವೆ ಆಗಿಲ್ಲ. ಇಬ್ಬರ ಬಗ್ಗೆಯೂ ಇಂಡಸ್ಟ್ರಿಯಲ್ಲಿ ಗಾಸಿಪ್ ಇದೆ. ನಟಿ ಚಾರ್ಮಿ ಕೌರ್‌ ಹಿಂದೊಮ್ಮೆ ನಟಿ ತ್ರಿಷಾ ಕೃಷ್ಣರನ್ನು, “ನನ್ನನ್ನು ಮದುವೆಯಾಗುತ್ತೀಯಾ?" ನಾವಿಬ್ಬರೂ ಮದುವೆಯಾಗೋಣವೇ? ನಿನ್ನ ಸಮ್ಮತಿಗಾಗಿ ನಿನ್ನ ಮೊಣಕಾಲ ಬಳಿ ಕುಳಿತು ಕಾಯುತ್ತೇನೆ’ ಎಂದು ಚಾರ್ಮಿ ಕೇಳಿಕೊಂಡಿದ್ದಾರೆ. 
ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ತ್ರಿಷಾ, "ಧನ್ಯವಾದಗಳು, ನಾನು ನೀನಗೆ ಎಂದೋ ಓಕೆ ಹೇಳಿದ್ದೇನೆ" ಎಂದು ಟ್ವೀಟ್ ಮಾಡಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. 

ಈಗ ಸ್ವತಃ ಚಾರ್ಮಿ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಮೇ 4 ರಂದು ತ್ರಿಷಾ ಅವರ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನಕ್ಕೆ ಶುಭ ಕೋರಿರುವ ಚಾರ್ಮಿ ''ಬೇಬಿ ಐ ಲವ್ ಯೂ...ನಾನು ಒಂಟಿ ಕಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. ನೀನು ಓಕೆ ಅಂದ್ರೆ ಮದ್ವೆ ಆಗೋಣ. ಸಲಿಂಗ ಮದುವೆ ಈಗ ಕಾನೂನಿನಲ್ಲಿ ಅವಕಾಶ ಇದೆ'' ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ತ್ರಿಶಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಚಾರ್ಮಿ, “ ಜನ್ಮ ದಿನದ ಸಂತೋಷದಲ್ಲಿರುವ ತರುಣಿಗೆ ಇದು ಬ್ಯಾಚಲರ್ ಲೈಫ್ನ ಕೊನೆಯ ಜನ್ಮ ದಿನ ಎಂಬ ಬಲವಾದ ಭಾವನೆ’ ನನಗಿದೆ ಅಂತ ಟ್ವೀಟ್​ ಮಾಡಿದ್ದಾರೆ. ಇದನ್ನ ನೋಡಿದವರು ಇನ್ನೊಂದು ವರ್ಷದಲ್ಲಿ ತ್ರಿಶಾ ಹೊಸಬಾಳಿಗೆ ಕಾಲಿಡೋದು ಪಕ್ಕಾ ಅಂತ ಡಿಸೈಡ್​ ಆಗ್ಬಿಟ್ಟಿದ್ದಾರೆ.