Ram Charan : ರಾಮಚರಣ್ ದಂಪತಿಗೆ ಮದುವೆಯಾಗಿ 10 ವರ್ಷ ಆದ್ರೂ ಇನ್ನೂ ಏಕೆ ಮಕ್ಕಳಿಲ್ಲ..! ಈಗ ಬಯಲು

By Infoflick Correspondent

Updated:Monday, June 13, 2022, 08:54[IST]

Ram Charan :  ರಾಮಚರಣ್ ದಂಪತಿಗೆ ಮದುವೆಯಾಗಿ 10 ವರ್ಷ ಆದ್ರೂ ಇನ್ನೂ ಏಕೆ ಮಕ್ಕಳಿಲ್ಲ..! ಈಗ ಬಯಲು

ತೆಲುಗು ಸಿನಿಮಾರಂಗದ ಖ್ಯಾತ ನಟ ಚಿರಂಜೀವಿ ಅವರು ಈಗಾಗಲೇ ಅವರದ್ದೇ ಆದ ಅಭಿನಯದಿಂದ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಇವರ ಮಗ ನಟ ರಾಮ್ ಚರಣ್ ತೇಜಾ ಅವರು ಕೂಡ ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ ಎನ್ನಬಹುದು. ಹೌದು ನಟ ರಾಮ್ ಚರಣ್ ಅವರ ಕೌಟುಂಬಿಕ ಜೀವನದ ವಿಚಾರ ಒಂದರ ಕುರಿತು ಈಗ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಬಂದಿದೆ. ನಟ ರಾಮ್ ಚರಣ್ ಮದುವೆಯಾಗಿ ಹತ್ತು ವರ್ಷ ಆಗಿದೆ. ಆದ್ರೂ ಇನ್ನು ಯಾಕೆ ಇವರಿಗೆ ಮಕ್ಕಳಾಗಿಲ್ಲ ಎನ್ನುವ ವಿಷಯ ಚರ್ಚೆ ಆಗುತ್ತಿದೆ. ಹೌದು ನಟ ರಾಮ್ ಚರಣ್ ಅವರು 2012 ರಲ್ಲಿ ಖ್ಯಾತ ಸಂಸ್ಥೆ ಅಪೋಲೋ ಸಂಸ್ಥೆಯ ಮಾಲೀಕರ ಮೊಮ್ಮಗಳಾದ ಉಪಾಸನಾಕಾಮಿನೇನಿ ಅವರನ್ನು ಮದುವೆಯಾಗಿದ್ದರು.

ನಟ ರಾಮಚರಣ್ ಅವರ ಪತ್ನಿ ಕೂಡ ದೊಡ್ಡ ಶ್ರೀಮಂತರ ಮಗಳು. ರಾಮ್ ಚರಣ್ ಕೂಡ ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರ ಪುತ್ರ. ರಾಮ್ಚರಣ್ ಮತ್ತು ಉಪಾಸನಾಕಾಮಿನೇನಿ ಚಿಕ್ಕವರಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರಲ್ಲಿ ಮೊದಲು ಸ್ನೇಹ ಇದ್ದು ನಂತರ ಪ್ರೀತಿಮಾಡಿ ಮನೆಯವರ ಒಪ್ಪಿಗೆ ಪಡೆದು ಕುಟುಂಬದ ಸಮ್ಮುಖದಲ್ಲಿ ಮದುವೆಯಾದವರು. ಇದೀಗ ಈ ಜೋಡಿ ಮದುವೆಯಾಗಿ ಹತ್ತು ವರ್ಷ ಕಳೆದಿದೆ. ಆದರೂ ಮಕ್ಕಳು ಏಕೆ ಆಗಿಲ್ಲ ಎಂಬುದಾಗಿ ಪ್ರಶ್ನೆ ಎದ್ದಿದೆ. ಈ ಬಗ್ಗೆ ಚುಚ್ಚುಮಾತು ಆಡಿದ ಕೆಲವರಿಗೆ ರಾಮಚರಣ್ ಅವರ ಪತ್ನಿ ಉಪಸಕಾಮಿನೇನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳುವ ಹಾಗೆ 'ನಾವು ಇನ್ನು ನಮ್ಮ ಜೀವನದಲ್ಲಿ ಸಾಧಿಸುವುದು ತುಂಬಾ ಇದೆ. ನಾನು ನನ್ನ ಕೆಲಸದಲ್ಲಿ ತುಂಬಾ ಬ್ಯುಸಿ ಇರುತ್ತೇನೆ. ನಮಗೆ ಸರಿಯಾದ ಸಮಯ ಎಂದಾಗ ನಾವು ಮಕ್ಕಳನ್ನು ಮಾಡಿಕೊಳ್ಳುತ್ತೇವೆ, ನೀವು ಈ ರೀತಿ ಪದೇಪದೇ ಮಗು ಯಾವಾಗ ಎಂದು ಚುಚ್ಚು ಮಾತನಾಡಬೇಡಿ' ಎಂದಿದ್ದಾರೆ ಎಂದು ಹೇಳಲಾಗುತ್ತಿದೆ.  

ಹಾಗೆ ರಾಮಚರಣ್ ಅವರು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದ್ದು 'ಮಗುವನ್ನು ಮಾಡಿಕೊಳ್ಳುವುದು ದೊಡ್ಡ ಕೆಲಸ ಏನಲ್ಲ, ಆದರೆ ಮಕ್ಕಳು ಭೂಮಿಗೆ ಬಂದ ಮೇಲೆ ಅವರ ಬಾಲ್ಯ ಜೀವನವನ್ನು ತುಂಬಾ ಸೊಗಸಾಗಿ ಕಳೆಯಬೇಕು. ಅದನ್ನ ಬಿಟ್ಟು ಹೇಗೆ ಬೇಕೋ ಹಾಗೆ ಮಾಡಲು ಆಗುವುದಿಲ್ಲ, ಹಾಗಾಗಿ ಈಗ ನಾವು ನಮ್ಮ ಕನಸಿನ ಕಡೆ ಹೆಚ್ಚು ಬಿಜಿಯಾಗಿದ್ದೇವೆ, ನನ್ನ ಪತ್ನಿ ಕೂಡ ಅವಳ ಕೆಲಸದಲ್ಲಿ ತುಂಬಾ ಬಿಜಿ ಇರುತ್ತಾಳೆ, ಒಂದು ವೇಳೆ ಮಗುವಾದರೆ ಅವಳ ಕನಸಿಗೆ ಹೊಡೆತ ಬೀಳುವುದು. ಹಾಗಾಗಿ ನಾವು ಇನ್ನು ಮಕ್ಕಳನ್ನು ಮಾಡಿಕೊಂಡಿಲ್ಲ' ಎಂದು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿದುಬಂದಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಕಾರಣ ಇಲ್ಲ ಎಂದಿದ್ದಾರೆ. ಜೊತೆಗೆ ನಟ ರಾಮಚರಣ್ ಅವರ ಪತ್ನಿ ಹೇಳುವ ಹಾಗೆ ನಾನು ನೋಡಲು ತುಂಬಾ ದಪ್ಪ ಇದ್ದೇನೆ ಮಗು ಮಾಡಿಕೊಳ್ಳಬೇಕು ಎಂದಾದರೆ ದೇಹವನ್ನು ಕಡಿಮೆ ಮಾಡಿಕೊಳ್ಳಬೇಕು, ನಾವು ಎಲ್ಲಾ ಸರಿ ಹೋದಾಗ ಮಕ್ಕಳನ್ನು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..