Sai Pallavi : ಖ್ಯಾತನಟಿ ಸಾಯಿಪಲ್ಲವಿ ತುಂಡುಬಟ್ಟೆ ಧರಿಸಲ್ಲ ಏಕೆ ? ಈ ಘಟನೆಯೇ ಕಾರಣ

By Infoflick Correspondent

Updated:Wednesday, June 15, 2022, 10:19[IST]

Sai Pallavi :  ಖ್ಯಾತನಟಿ ಸಾಯಿಪಲ್ಲವಿ ತುಂಡುಬಟ್ಟೆ ಧರಿಸಲ್ಲ ಏಕೆ ? ಈ ಘಟನೆಯೇ ಕಾರಣ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ. ಸಿನಿಮಾಗಳು ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತದೆ.ಯಾವುದೇ ಸಿನಿಮಾದಲ್ಲಿ ಸಾಯಿಪಲ್ಲವಿ ಮೈ ಕಾಣುವಂತೆ ಬಟ್ಟೆ ಧರಿಸುವುದಿಲ್ಲ. ಆನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ.  ಸಾಯಿಪಲ್ಲವಿ ಏಕೆ ತುಂಡುಬಟ್ಟೆ ಧರಿಸುವುದಿಲ್ಲ ? ಕಾರಣವೇನು ? ಎಂಬುದು ಇಲ್ಲಿದೆ ನೋಡಿ 

ಇತ್ತೀಚಿನ ಒಂದು ಸಂದರ್ಶನದಲ್ಲಿ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ನಾನು ಜಾರ್ಜಿಯಾಗೆ ತೆರಳಿದ್ದೆ. ಅಲ್ಲಿ ಟ್ಯಾಂಗೋ ಡ್ಯಾನ್ಸ್​ ಕಲಿತೆ. ಆ ಡ್ಯಾನ್ಸ್​ ಕಲಿಯಲು ನಾವು ವಿಶೇಷವಾದ ಬಟ್ಟೆ ಧರಿಸಬೇಕು. ಪೋಷಕರ ಅನುಮತಿ ಪಡೆದುಕೊಂಡು, ಆ ಬಟ್ಟೆ ಧರಿಸಿ ನಾನು ಟ್ಯಾಂಗೋ ಡ್ಯಾನ್ಸ್​ ಕಲಿತೆ' ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಆದರೆ ಆ ಬಳಿಕ ನಡೆದ ಒಂದು ಸಂಗತಿ ಅವರಿಗೆ ಬೇಸರ ಮೂಡಿಸಿತು. ಚಿತ್ರರಂಗಕ್ಕೆ ಬಂದ ನಂತರ ಒಂದು ಘಟನೆ ನಾನು ಸಿನಿಮಾಗಳಲ್ಲಿ ತುಂಡುಡುಗೆ ಧರಿಸಲ್ಲ ಎಂದು ನಿರ್ಧರಿಸಿದೆ.   

ಕೆಲವು ದಿನಗಳ ನಂತರ ನನಗೆ 'ಪ್ರೇಮಂ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಸಿನಿಮಾ ರಿಲೀಸ್​ ಆದ ಬಳಿಕ ನಾನು ಈ ಹಿಂದೆ ಮಾಡಿದ್ದ ಟ್ಯಾಂಗೋ ಡ್ಯಾನ್ಸ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯಿತು. ಅದಕ್ಕೆ ಜನರು ಮಾಡಿದ್ದ ಕಮೆಂಟ್​ಗಳು ನನ್ನನ್ನು ಕಸಿವಿಸಿಗೊಳಿಸಿದವು. ಇನ್ಮುಂದೆ ನಾನು ಚಿಕ್ಕ ಬಟ್ಟೆ ಧರಿಸಬಾರದು ಅಂತ ಆ ದಿನವೇ ನಿರ್ಧಾರ ಮಾಡಿದೆ' ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.   

ಸಾಯಿ ಪಲ್ಲವಿ ಅವರದ್ದು ಸಂಪ್ರದಾಯಸ್ಥ ಕುಟುಂಬ. ತಂದೆ ಕೇಂದ್ರ ಸರ್ಕಾರಿ ಉದ್ಯೋಗಿ. ಒಬ್ಬಲು ತಂಗಿ ಇದ್ದಾಳೆ. ತಂಗಿಯ ಜೊತೆ ಸೇರಿ ಬ್ಯಾಡ್ಮಿಂಟನ್​ ಆಡುವಾಗ ಅವರು ಕಂಫರ್ಟ್​ ಆಗುವಂತಹ ಬಟ್ಟೆಗಳನ್ನೇ ಧರಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಆ ರೀತಿ ಇರಲು ಅವರು ಬಯಸುವುದಿಲ್ಲ ಎಂದು ಹೇಳಿದ್ದಾರೆ.