ಕೊರೊನಾ ಇರುವವರು ಲಸಿಕೆ ಪಡೆದರೆ ವೇಸ್ಟ್ ಅಂತೆ: ತಜ್ಞರು ಏನ್ ಹೇಳಿದ್ದಾರೆ ನೋಡಿ..

Updated: Sunday, May 16, 2021, 18:21 [IST]

ಈಗಾಗಲೇ ಸೋಂಕು ತಗಲಿ ಗುಣಮುಖರಾದವರಿಗೆ ಸೋಂಕು ನಿರೋಧಕ ಶಕ್ತಿ ಇರುತ್ತದೆ. ದೇಹದಲ್ಲಿ ನಿರೋಧಕ ಶಕ್ತಿ ಇರುವ ಕಾರಣ ಸೋಂಕಿನ ಅಪಾಯ ಕಡಿಮೆ ಇದ್ದು, ಇಂತವರಿಗೆ ಮುಂದಿನ 6 ತಿಂಗಳ ಕಾಲ ಲಸಿಕೆಯ ಅಗತ್ಯವಿಲ್ಲ.  ಈ ಸಮಯದಲ್ಲಿ ಲಸಿಕೆ ಪಡೆದರೂ ಪ್ರಯೋಜನವಿಲ್ಲ ಎಂದು ತಜ್ಞರು ಹೇಳಿದ್ದಾರೆ. 

ಕೊರೊನಾ ಪಾಸಿಟಿವ್ ಬಂದವರಲ್ಲಿ ರೋಗ-ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಈ ಸಮಯದಲ್ಲಿ ಅವರು ಲಸಿಕೆ ಪಡೆದರೆ ಯಾವುದೇ ಪ್ರಯೋಜನ ಇರುವುದಿಲ್ಲ. ಅದೇ 6 ತಿಂಗಳ ಬಳಿಕ ಹಾಕಿಸಿಕೊಂಡರೆ ಉತ್ತಮ. ಅಲ್ಲಿಯವರೆಗೂ ಇವರಿಎ ಸೋಂಕು ತಗುಲುವ ಆತಂಕವಿರುವುದಿಲ್ಲ ಎಂದು ಅಧ್ಯಾಯನವೊಂದು ಹೇಳಿದೆ.  
ಇನ್ನು ಮೊದಲ ಡೋಸ್ ಪಡೆದ ಬಳಿಕ ಕೊರೊನಾ ಸೋಂಕು ತಗುಲಿದ್ದರೆ ನೆಗೆಟಿವ್ ರಿಪೋರ್ಟ್ ಬಂದ 8 ವಾರಗಳ ಬಳಿಕ ೆರಡನೇ ಡೋಸ್ ಪಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ.    

ಇದರೊಂದಿಗೆ ಸೋಂಕು ನಿರೋಧಕ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ಪರಿಷ್ಕರಣೆ ಮಾಡಲಾಗಿದೆ. ಮೊದಲ ಡೋಸ್ ಪಡೆದ 12 ರಿಂದ 16 ವಾರಗಳ ಅಂತರದಲ್ಲಿ ಎರಡನೇ ಡೋಸ್ ಪಡೆಯಬಹುದು ಎಂದು ಸಲಹೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ಈ ಹಿಂದೆ 6ರಿಂದ 8 ವಾರಗಳಿಗೆ ನಿಗದಿ ಮಾಡಲಾಗಿತ್ತು. ಇದೀಗ 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ   

ಎರಡು ಡೋಸ್ ಲಸಿಕೆ ಪಡೆದು 15 ದಿನಗಳು ಕಳೆದವರಿಗೆ ಲಸಿಕೆ ಉತ್ತಮ ರಕ್ಷಾ ಕವಚ ನೀಡುತ್ತಿದ್ದು, ಸೋಂಕು ತಗಲಿದರೂ ತೀವ್ರತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಆಕ್ಸಿಜನ್, ವೆಂಟಿಲೇಟರ್ ಅಗತ್ಯ ಬೀಳುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.