ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಪಡೆಯಬೇಕಾದ ಆಹಾರಗಳು ಯಾವುವು?

By Infoflick Correspondent

Updated:Tuesday, December 14, 2021, 20:30[IST]

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಪಡೆಯಬೇಕಾದ ಆಹಾರಗಳು ಯಾವುವು?

ಚಳಿಗಾಲ ಶುರುವಾಗಿದೆ, ಈ ಸಮಯದಲ್ಲಿ ಶೀತ, ಕೆಮ್ಮು ಈ ರೀತಿಯ ಸಮಸ್ಯೆ ಬೇಗನೆ ಕಾಡುವುದು. ಈ ಕಾಲದಲ್ಲಿ ಬೆಚ್ಚಗಿನ ಉಡುಪುಗಳನ್ನು ಧರಿಸಿದರೆ ಸಾಕಾಗುವುದಿಲ್ಲ, ಆಹಾರಕ್ರಮದ ಕಡೆಗೂ ಗಮನ ಕೊಡಬೇಕು, ಆಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದು, ಇದರಿಂದ ಕಾಯಿಲೆ ಬೀಳುವುದು ಕಡಿಮೆಯಾಗುವುದು.

ರೋಗ ನಿರೋಧಕ ಚೆನ್ನಾಗಿದ್ದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು ಮಾತ್ರವಲ್ಲ ತ್ವಚೆ, ಕೂದಲು ಹಾಗೂ ಸಂಧುಗಳ ಆರೋಗ್ಯ ಚೆನ್ನಾಗಿರುತ್ತೆ. ಏಕೆಂದರೆ ಚಳಿ ಜಾಸ್ತಿಯಿದ್ದಾಗ ಸಂಧುಗಳಲ್ಲಿ ನೋವು ಶುರುವಾಗುವುದು, ಅಲ್ಲದೆ ಒಣ ತ್ವಚೆ, ತುರಿಕೆ, ಸೋರೋಸಿಸ್ ಈ ರೀತಿಯ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವುದು.

ಆಹಾರಗಳಾದ ಆಮ್ಲ, ತುಪ್ಪ, ಖರ್ಜೂರ, ನವಣೆ, ನಟ್ಸ್, ಸಾಸಿವೆ ಎಣ್ಣೆ, ಹೂಕೋಸು, ಎಲೆಕೋಸು, ಬ್ರೊಕೋಲಿ ಇಂಥ ಆಹಾರಗಳನ್ನು ಸೇವಿಸುವುದರಿಂದ ಕಾಯಿಲೆಗಳನ್ನು ಕಾಯಿಲೆ ಬೀಳುವುದು ಕಡಿಮೆಯಾಗುವುದು.

ಚಳಿಗಾಲದಲ್ಲಿ ಪೌಷ್ಠಿಕಾಂಶದ ಸಮತೋಲನ ಆಹಾರ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಪ್ರಸಿದ್ಧ ಲೈಫ್‌ಸ್ಟೈಲ್‌ ತಜ್ಞರಾದ ಲುಕೆ ಕೌಂಟಿನೋ ಮತ್ತು ಬಾರ್ಗವ್‌ ಅವರು ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಯಾವೆಲ್ಲಾ ಆಹಾರಗಳನ್ನು ತಿಂದರೆ ಒಳ್ಳೆಯದು ಎಂದು ತಿಳಿಸಿದ್ದಾರೆ ನೋಡಿ:

ಸಿಹಿ ಗೆಣಸು

ಚಳಿಗಾಲದಲ್ಲಿ ತಿನ್ನಬೇಕಾದ ಮತ್ತೊಂದು ಆಹಾರವೆಂದರೆ ಸಿಹಿ ಗೆಣಸು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ, ಇದು ಒಂದು ತುಂಡು ತಿಂದರೆ ಆ ದಿನಕ್ಕೆ ಬೇಕಾಗುವಷ್ಟು ಬೀಟಾ ಕೆರೊಟಿನ್ ಸಿಗುತ್ತದೆ, ದೇಹಕ್ಕೆ ಅಗ್ಯತವಿರುವ ವಿಟಮಿನ್ ಸಿ ದೊರೆಯುವುದು, ರೋಗ ನಿರೋಧಕ ಶಕ್ತಿ ವೃದ್ದಿಸುವುದು. 

ನೆಲ್ಲಿಕಾಯಿ

ಚಳಿಗಾಲದಲ್ಲಿ ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನಿ. ಇದರ ಜ್ಯೂಸ್‌ ಕುಡಿಯಬಹುದು, ಚಟ್ನಿ ಮಾಡಿ ತಿನ್ನಬಹುದು, ಉಪ್ಪಿನಲ್ಲಿ ಹಾಕಿ ತಿನ್ನಬಹುದು. ದಿನಾ ಒಂದರಿಂದ ಎರಡು ನೆಲ್ಲಿಕಾಯಿ ತಿಂದರೆ ಆರೋಗ್ಯಕ್ಕೆ ಹಾಗೂ ಕೂದಲಿಗೆ ತುಂಬಾನೇ ಒಳ್ಳೆಯದು.

ತುಪ್ಪ

ಚಳಿಗಾಲದಲ್ಲಿ ಆಹಾರದಲ್ಲಿ ತುಪ್ಪವನ್ನು ಸೇರಿಸಿ. ಇದನ್ನು ತಿಂದರೆ ದೇಹ ಬೆಚ್ಚಗಿರುತ್ತದೆ. ತುಪ್ಪವನ್ನು ಮಿತಿಯಲ್ಲಿ ತಿನ್ನುವುದರಿಂದ ತ್ವಚೆ ಕೂಡ ಚೆನ್ನಾಗಿರುತ್ತದೆ. ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇರಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದು ಎನ್ನುತ್ತಾರೆ ಕೌಂಟಿನೋ.

ಖರ್ಜೂರ

ಖರ್ಜೂರಕ್ಕೆ ಗಾಯಗಳನ್ನು ಬೇಗನೆ ಗುಣಪಡಿಸುವ ಶಕ್ತಿಯಿದೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ಸ್, ಖನಿಜಾಂಶಗಳು ಹಾಗೂ ನಾರಿನಂಶವಿದೆ, ಅಲ್ಲದೆ ಕ್ಯಾಲ್ಸಿಯಂ ಅಧಿಕವಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಖರ್ಜೂರ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದು, ಅಲ್ಲದೆ ಚಳಿಗಾಲದಲ್ಲಿ ದೇಹವನ್ನು ರಕ್ಷಣೆ ಮಾಡುತ್ತದೆ.

ಬೆಲ್ಲ

ಬೆಲ್ಲ ಕೂಡ ದೇಹವನ್ನು ಬೆಚ್ಚಗಿಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು. ಇದು ದೇಹಕ್ಕೆ ಆಮ್ಲಜನಕದ ಪೂರೈಕೆ ಹೆಚ್ಚಿಸುವಂತೆ ಮಾಡುವುದು. ದೇಹದಲ್ಲಿ ಆಮ್ಲಜನಕದ ಕೊರತೆ ಹಾಗೂ ಕಬ್ಬಿಣದಂಶದ ಕೊರತೆಯಾದರೆ ತುಂಬಾನೇ ಚಳಿ ಅನಿಸುವುದು, ಬೆಲ್ಲವನ್ನು ತಿನ್ನುವುದರಿಂದ ಮೈ ಬೆಚ್ಚಗಿರುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. 

ಗೆಣಸುಗಳು

ಚಳಿಗಾಲದಲ್ಲಿ ಗೆಣಸಿನ ಆಹಾರ ಒಳ್ಳೆಯದು, ಅದರಲ್ಲೂ ಸಿಹಿ ಗೆಣಸು ತುಂಬಾನೇ ಒಳ್ಳೆಯದು. ಇದರಲ್ಲಿ ಕೆರೋಟಿನ್, ನಾರಿನಂಶ, ಪೊಟಾಷ್ಯಿಯಂ ಮತ್ತು ಮ್ಯಾಂಗನೀಸ್, ಬೀಟಾ ಕೆರೋಟಿನ್ ಅದಿಕವಿದೆ. ಬೀಟ್‌ರೂಟ್, ಗೆಣಸು, ಸುವರ್ಣಗೆಡ್ಡೆ, ಕ್ಯಾರೆಟ್‌ ಈ ಬಗೆಯ ಆಹಾರಗಳ ಸೇವನೆ ಒಳ್ಳೆಯದು.

ನಟ್ಸ್

ನಟ್ಸ್ ಎಲ್ಲಾ ಸಮಯದಲ್ಲಿ ಒಳ್ಳೆಯದು, ಅದರಲ್ಲೂ ಚಳಿಗಾಲದಲ್ಲಿ ಮತ್ತಷ್ಟು ಒಳ್ಳೆಯದು, ಇದು ದೇಹ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತೆ. ಇವುಗಳಲ್ಲಿರುವ ಆರೋಗ್ಯಕರ ಕೊಬ್ಬಿನಂಶ ತ್ವಚೆ ರಕ್ಷಣೆ ಮಾಡುತ್ತದೆ.

ಸಾಸಿವೆ ಎಲೆ

ಚಳಿಗಾಲದಲ್ಲಿ ಸಾಸಿವೆ ಎಲೆಯಿಂದ ಪದಾರ್ಥಗಳನ್ನು ಮಾಡಿ ತಿನ್ನುವುದು ಒಳ್ಳೆಯದು. ಸಾಸಿವೆ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಕೆ, ಎ ಮತ್ತು ಸಿ ಅಂಶವಿದ್ದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಮೈಯನ್ನು ಬೆಚ್ಚಗಿಡುತ್ತದೆ. ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆ, ಮೆನೋಪಾಸ್‌ ಸಮಸ್ಯೆ ಇರುವವರಿಗೆ ಈ ಎಲೆ ತುಂಬಾನೇ ಒಳ್ಳೆಯದು.