ಸಿಹಿಗೆಣಸು ತಿನ್ನುವುದರಿಂದ ಉಪಯೋಗವೇನು ಗೊತ್ತೇ!! ಆಗುವ ಪ್ರಯೋಜನಗಳೇನು ತಿಳಿಯಬೇಕೇ?

By Infoflick Correspondent

Updated:Tuesday, December 28, 2021, 10:30[IST]

ಸಿಹಿಗೆಣಸು ತಿನ್ನುವುದರಿಂದ  ಉಪಯೋಗವೇನು ಗೊತ್ತೇ!! ಆಗುವ ಪ್ರಯೋಜನಗಳೇನು ತಿಳಿಯಬೇಕೇ?

ಗೆಣಸು ಅಥವಾ ಸಿಹಿ ಆಲೂಗಡ್ಡೆ ಆರೋಗ್ಯಕರ ಎಂಬುದರಲ್ಲಿ ಸಂದೇಹವಿಲ್ಲ. ಇದು ಪಿಷ್ಟ ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೊರಿಗಳನ್ನು ಹೊಂದಿದ್ದರೂ ಸಹ, ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣಗಳಂತಹ ಉತ್ತಮ ಪೋಷಕಾಂಶಗಳಿಂದ ತುಂಬಿದೆ. ಈ ಒಂದು ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಈ ಎಲ್ಲಾ ಮ್ಯಾಕ್ರೋ ಮತ್ತು ಮೈಕ್ರೋನ್ಯೂಟ್ರಿಯಂಟ್‌ಗಳನ್ನು ನಿಮಗೆ ಲಭಿಸುತ್ತದೆ. ಗೆಣಸು ಎಲ್ಲರಿಗೂ ಸುರಕ್ಷಿತವಾಗಿದ್ದರೂ, ವಿಟಮಿನ್ ಎ ಇರುವ ಕಾರಣ ಕೆಲವು ಜನರು ಅದನ್ನು ಸೇವಿಸುವಾಗ ಸ್ವಲ್ಪ ಹೆಚ್ಚಿನ ಗಮನವನ್ನು ನೀಡಬೇಕಾಗಬಹುದು. ಅದು ಯಾರು ಎಂಬುದನ್ನು ಇಲ್ಲಿ ನೋಡೋಣ.

ಹೊಟ್ಟೆಯ ಸಮಸ್ಯೆ: ಈ ತರಕಾರಿಯು ಮನ್ನಿಟಾಲ್, ಸಕ್ಕರೆ ಆಲ್ಕೋಹಾಲ್ ಅಥವಾ ಪಾಲಿಯೋಲ್ ಎಂದು ಕರೆಯಲ್ಪಡುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಅನ್ನು ಸಹ ಒಳಗೊಂಡಿದೆ. ಈ ಕಾರ್ಬೋಹೈಡ್ರೇಟ್ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲದಿದ್ದರೂ, ಹೊಟ್ಟೆಯ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಸೇವನೆಯು ತೊಂದರೆಯಾಗಬಹುದು. ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಸಿಹಿ ಆಲೂಗಡ್ಡೆ ಅಥವಾ ಗೆಣಸು ಸೇವಿಸುವುದರಿಂದ ಅತಿಸಾರ, ಹೊಟ್ಟೆ ನೋವು ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಆದ್ದರಿಂದ, ಹೊಟ್ಟೆಯ ಸಮಸ್ಯೆಯಿರುವವರು ಇವುಗಳನ್ನು ತಪ್ಪಿಸುವುದು ಉತ್ತಮ.

ಮೂತ್ರಪಿಂಡದ ಕಲ್ಲು:ಅನೇಕ ಪೋಷಕಾಂಶಗಳನ್ನು ಹೊಂದಿರುವ ಗೆಣಸಿನಲ್ಲಿ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಒಂದು ರೀತಿಯ ಸಾವಯವ ಆಮ್ಲವಾಗಿದ್ದು, ಮೂತ್ರಪಿಂಡದ ಸ್ಟೋನ್ ಇರುವವರಿಗೆ ಇದು ಮತ್ತಷ್ಟು ಸಮಸ್ಯೆ ಉಂಟುಮಾಡಬಹುದು. ಆಕ್ಸಲೇಟ್ ಈಗಾಗಲೇ ಅಸ್ತಿತ್ವದಲ್ಲಿರುವ ಕಲ್ಲಿನ ಮೇಲೆ ಶೇಖರಣೆಯನ್ನು ಪ್ರಾರಂಭಿಸಿ, ರೋಗಲಕ್ಷಣಗಳು ಮತ್ತು ನೋವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಗೆಣಸು ಸೇವಿಸುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೃದಯ ಸಮಸ್ಯೆ: ಗೆಣಸು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿರುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಅತಿಯಾಗಿ ಸೇವಿಸಿವುದು ಒಳ್ಳೆಯದಲ್ಲ. ಹೆಚ್ಚುವರಿ ಪೊಟ್ಯಾಸಿಯಮ್ ಸೇವನೆಯು ಹೈಪರ್‌ಕೆಲೆಮಿಯಾ ಅಥವಾ ಪೊಟ್ಯಾಸಿಯಮ್ ವಿಷತ್ವಕ್ಕೆ ಕಾರಣವಾಗಬಹುದು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು.

ಮಧುಮೇಹ: ಆಲೂಗಡ್ಡೆಗೆ ಹೋಲಿಸಿದರೆ, ಗೆಣಸು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಗೆಣಸು ಸೇವಿಸುವುದರಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಆಹಾರದ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಅಂಶವನ್ನು ಹೊಂದಿರುವ ಗೆಣಸು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ನೀವು ಅದನ್ನು ಅತಿಯಾಗಿ ತೆಗೆದುಕೊಳ್ಳಬಾರದು, ಇಲ್ಲದಿದ್ದರೆ ಅದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು.

ಇತರ ಅಡ್ಡ ಪರಿಣಾಮಗಳು: ಗೆಣಸಿನಲ್ಲಿ ವಿಟಮಿನ್ ಎ ಇದ್ದು, ಇದನ್ನು ಹೆಚ್ಚು ಸೇವಿಸುವುದರಿಂದ ವಿಟಮಿನ್ ಎ ವಿಷತ್ವಕ್ಕೆ ಕಾರಣವಾಗಬಹುದು. ಇದರಿಂದ ತಲೆನೋವು ಮತ್ತು ದದ್ದುಗಳು ಉಂಟಾಗಬಹುದು. ಜೊತೆಗೆ ಒರಟಾದ ಕೂದಲು, ಕೂದಲು ಉದುರುವಿಕೆ (ಹುಬ್ಬುಗಳು ಸೇರಿದಂತೆ), ತುಟಿಗಳು ಬಿರುಕುಗಳು ಮತ್ತು ಒಣ ಚರ್ಮಕ್ಕೆ ಕಾರಣವಾಗಬಹುದು. ದೀರ್ಘಕಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಸೇವಿಸುವುದರಿಮದ ಯಕೃತ್ತಿನ ಹಾನಿಗೆ ಕಾರಣವಾಗಬಹುದು. ಆದ್ದರಿಂದ ಮೂತ್ರಪಿಂಡದ ಸಮಸ್ಯೆಗಳು, ಮಧುಮೇಹ ಮತ್ತು ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸಿಹಿ ಆಲೂಗಡ್ಡೆ ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.