ಲೈವ್ ನಲ್ಲಿ ಕಣ್ಣೀರಿಟ್ಟು ನೋವನ್ನ ಬಿಚ್ಚಿಟ್ಟ ಬಿಗ್ಬಾಸ್ ಚೈತ್ರಾ ಕೋಟೂರ್..! ವಿಡಿಯೋ ವೈರಲ್

Updated: Friday, April 9, 2021, 15:37 [IST]

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿ ಸ್ಪರ್ಧಿಯಾಗಿದ್ದ, ಬಳಿಕ ಮೂರು ಸಿನಿಮಾದಲ್ಲಿ ಅಭಿನಯ ಮಾಡಿದ್ದ ಚೈತ್ರಾ ಕೋಟೂರ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಸ್ವಲ್ಪ ದಿನದಲ್ಲಿ ಹಿಂತಿರುಗಿ ಬಂದಿದ್ದರು. ಮತ್ತೆ ಅದೇ ಸೀಸನ್ ಅಲ್ಲಿ, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ನಂತರ ತಮ್ಮ ನೈಜ ಆಟದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಇತ್ತೀಚಿಗಷ್ಟೇ ಚೈತ್ರಾ ಕೋಟೂರ್ ಅವರು ನಾಗಾರ್ಜುನ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದು, ಬಳಿಕ ಈ ಮದುವೆ ಬಲವಂತದ ಮದುವೆ ಎನ್ನಲಾಗಿ ಕೇಳಿ, ಈ  ನಾಗಾರ್ಜುನ ಅವರು ವಿರೋಧ ವ್ಯಕ್ತಪಡಿಸಿದರು.

ಆಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿ ಈ ಸುದ್ದಿ ಸಾಕಷ್ಟು ಸುದ್ದಿಯಾಗಿತ್ತು.  ಆದ್ರೆ ಇದಕ್ಕಿಂತ ಮುಂಚೆ ಲೈವ್ ಮೂಲಕ ಬಂದು ತಮ್ಮ ಪ್ರೀತಿ ಬಗ್ಗೆ, ಹಾಗೂ ತಮಗೆ ಆದಂತಹ ನೋವನ್ನು ಸಹ ಎಲ್ಲಾ ಅಭಿಮಾನಿಗಳ ಮತ್ತು ಕನ್ನಡ ಜನತೆ ಮುಂದೆ ಬಿಚ್ಚಿಟ್ಟು ಕಣ್ಣೀರು ಸಹ ಹಾಕಿ ಸಾಕಷ್ಟು ನೋವಿನಲ್ಲಿ ನಟಿ ಚೈತ್ರಾ ಕೋಟೂರ್ ಮಾತನಾಡಿದರು. ಅಷ್ಟಕ್ಕೂ ಲೈವ್ ನಲ್ಲಿ ಬಂದು ಚೈತ್ರಾ ಕೋಟೂರ್ ಹೇಳಿದ್ದೇನು ಗೊತ್ತಾ..? 

ಒಂದು ಬಾರಿ ಈ ವಿಡಿಯೋವನ್ನು ನೋಡಿ ನಿಜಕ್ಕೂ ಕಣ್ಣೀರು ತರಿಸುತ್ತದೆ. ಮತ್ತು ಚೈತ್ರಾ ಕೋಟೂರ್, ಆ ರೀತಿ ಮೋಸ ಮಾಡಿ, ನಾಗಾರ್ಜುನ್ ಅವರನ್ನ ಮದುವೆ ಮಾಡಿಕೊಂಡರ ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು...