ನಾನು ಸುಂದರವಾಗಿ ಇರೋದೆ ತಪ್ಪಾ, ನನ್ನ ಅಪ್ಪ ಅಮ್ಮ ನನಗೆ ಫ್ರಿಡಮ್ ಕೊಡೋಲ್ಲ..! ಈಕೆಯ ಪ್ರಶ್ನೆಗಳು ಕೇಳಿ
Updated:Tuesday, October 26, 2021, 09:46[IST]

ಹೌದು ಸ್ನೇಹಿತರೆ ಸುಶ್ಮಿತಾ ಗಾಂಧಿ ಎನ್ನುವ ಒಬ್ಬ ಯುವತಿ ಇದೀಗ ಸಮಾಜದ ಮುಂದೆ ಕೆಲ ಪ್ರಶ್ನೆಗಳನ್ನು ಕೇಳಿದ್ದು ಅವರ ಅನುಭವವನ್ನು ಹಂಚಿಕೊಂಡಿದ್ದಾರೆ. ತಂದೆ-ತಾಯಿಗಳು ಯಾಕೆ ವಯಸ್ಸಿಗೆ ಬರುತ್ತಿದ್ದ ಹಾಗೆ ಹುಡುಗಿಯರನ್ನು ಅವರ ಮಕ್ಕಳನ್ನು ಸೆರೆಹಿಡಿಯುವಲ್ಲಿ ಮುಂದಾಗುತ್ತಾರೆ. ಜೊತೆಗೆ ಯಾವ ಫ್ರೀಡಮ್ ಯಾಕೆ ನೀಡುವುದಿಲ್ಲ ಎಂದು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅಷ್ಟಕ್ಕೂ ಯುವತಿ ಸುಶ್ಮಿತಾ ಕೇಳಿದ ಪ್ರಶ್ನೆಗಳು ಹೀಗಿವೆ.
ನಾನು ತಮಿಳುನಾಡಿನವಳು, ನನಗೆ ಗೊತ್ತಾಗುತ್ತಿಲ್ಲ ಯಾಕೆ ನಮ್ಮ ತಂದೆ ತಾಯಿ ನನ್ನ ಜೊತೆ ಹೀಗೆ ನಡೆದುಕೊಳ್ಳುತ್ತಾರೆ ಎಂದು. ಕಾರಣ ನಾನು ಒಬ್ಬ ಹುಡುಗಿ ಎನ್ನುವ ಸಲುವಾಗಿ. ನನಗೆ ಇದೀಗ 21 ವರ್ಷ, ನನ್ನ ವಿದ್ಯಾಭ್ಯಾಸವನ್ನು ಸಹ ಮುಗಿಸಿದ್ದೇನೆ. ಆದರೂ ಸಹ ನನಗೆ ಯಾವ ಸ್ವಾತಂತ್ರ್ಯ ಇಲ್ಲ. ನಮ್ಮ ತಂದೆ ತಾಯಿ ನಾನು ಹೊರಗಡೆ ಹೋಗುತ್ತೇನೆ ಎಂದರೂ ಸಹ ಅನುಮತಿ ನೀಡುವುದಿಲ್ಲ. ಅದು ಹತ್ತಿರದ ಅಂಗಡಿಗೂ ಕೂಡ ಹೋಗುವುದಕ್ಕೆ ಅವರು ಬಿಡುವುದಿಲ್ಲ. ನಾನು ಯಾಕೆ ಎಂದು ಪ್ರಶ್ನಿಸಿದರೆ ನೀನು ಇದೀಗ ವಯಸ್ಸಿಗೆ ಬಂದಿದ್ದೀಯಾ, ನೋಡಲು ತುಂಬಾ ಸುಂದರವಾಗಿ ಇದಿಯ, ಈ ಜಗತ್ತು ನಿನ್ನಷ್ಟು ತುಂಬಾ ಒಳ್ಳೆಯ ರೀತಿಯಲ್ಲಿ ಯೋಚನೆ ಮಾಡುವುದಿಲ್ಲ ಎನ್ನುತ್ತಾರೆ.
ಹಾಗೂ ನನಗೆ ಯಾವುದೇ ಸಣ್ಣ ಸಣ್ಣ ತುಂಡುಡುಗೆ ಅಥವಾ ಸ್ಲೀವ್ಲೆಸ್ ಬಟ್ಟೆ ಹಾಕಿಕೊಳ್ಳುವುದಕ್ಕೆ ಹಾಗೂ ಟೈಟಾದ ಟಿ-ಶರ್ಟ್ ಹಾಕಿಕೊಳ್ಳುವುದಕ್ಕೆ ಅನುಮತಿ ಕೊಡುವುದಿಲ್ಲ. ನಾನು ಯಾವಾಗಲೂ ನನ್ನ ದೇಹವನ್ನು ಪೂರ್ತಿ ಮುಚ್ಚಿದ ರೀತಿಯಲ್ಲಿಯೇ ಬಟ್ಟೆ ತೊಡಬೇಕು. ನಾನು ಬಟ್ಟೆ ತೊಡುವ ರೀತಿ ಹೇಗಿದೆ ಗೊತ್ತಾ.? ಈ ಲೇಖನ ಕೊನೆಯಲ್ಲಿ ಇರುವ ಫೋಟೋಗಳನ್ನು ನೋಡಿ.
ನನ್ನ ಹುಟ್ಟುಹಬ್ಬದ ದಿನವನ್ನು ಕೂಡ ನಾನು ಆಚರಣೆ ಮಾಡಿಕೊಳ್ಳುವುದಕ್ಕೂ ಅನುಮತಿಯಿಲ್ಲ. ಹಾಗೆ ನನ್ನ ಗೆಳತಿಯರ ಮನೆಗೆ ಹೋಗುತ್ತೇನೆ ಎಂದರೂ ಸಹ ನಮ್ಮ ತಂದೆ-ತಾಯಿ ಬಿಡುವುದಿಲ್ಲ. ನಾನು ನನ್ನ ಗೆಳತಿ ನಾಲ್ಕು ವರ್ಷ ಒಂದೇ ರೂಮಿನಲ್ಲಿ ಕಳೆದಿದ್ದೆವು. ಆಕೆ ನನ್ನ ಆತ್ಮೀಯ ಗೆಳತಿ ಆದರೂ ಆಕೆಯ ಮದುವೆಗೂ ಕೂಡ ತಂದೆ ತಾಯಿ ಹೋಗಲು ಅನುಮತಿ ನೀಡಲಿಲ್ಲ. ಅವರು ಹೇಳಿದರು ಒಬ್ಬಳೇ ನೀನು ಹೋಗಬೇಡ, ನಾನು ನಿನ್ನ ಜೊತೆಯಲ್ಲಿ ಬರುತ್ತೇನೆ. ಆದರೆ ಮದುವೆಯ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಆದ್ದರಿಂದ ಅವರು ನನ್ನನ್ನು ಒಬ್ಬಂಟಿಯಾಗಿ ಹೋಗಲು ಬಿಡಲಿಲ್ಲ.
ಹಾಗೆ ಬೇರೆ ರಾಜ್ಯದಲ್ಲಿ ಇಂಟರ್ವ್ಯೂ ಇದೆ ಎಂದರೆ ಸಹ ನನಗೆ ಅನುಮತಿ ಕೊಡುತ್ತಿಲ್ಲ. ಸೈಕಲ್ ನಿಂದ ಶಾಲೆಗೆ ಹೋಗಿ ಬರುತ್ತೇನೆ ಎಂದರೂ ಅದಕ್ಕೂ ಕೂಡ ಪರ್ಮಿಷನ್ ಕೊಡಲಿಲ್ಲ. ನಮ್ಮ ತಂದೆ ನನ್ನನ್ನು ಬಿಟ್ಟು ಮತ್ತೆ ಅಲ್ಲಿಂದ ಸಾಯಂಕಾಲ ಕರೆದುಕೊಂಡು ಬರುತ್ತಿದ್ದರು. ಇಷ್ಟೆಲ್ಲಾ ನಡೆಯುತ್ತಿರುವುದು ಸುರಕ್ಷತೆ ಮತ್ತು ಅತಿಯಾದ ರಕ್ಷಣೆಯ ಹೆಸರಿನಲ್ಲಿ, ಅವರು ಹೆಣ್ಣು ಮಗುವಿನ ಮಹತ್ವಾಕಾಂಕ್ಷೆಗಳನ್ನು ಮತ್ತು ಕನಸನ್ನು ನಾಶಪಡಿಸುತ್ತಾರೆ.. ಎಂದು ಈ ಸುಶ್ಮಿತಾ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ನಿಮ್ಮ ಉತ್ತರ ತಿಳಿಸಿ, ಮಾಹಿತಿ ಉಪಯೋಗ ಇದೆ ಎಂದಲ್ಲಿ ತಪ್ಪದೆ ಶೇರ್ ಮಾಡಿ, ಧನ್ಯವಾದಗಳು..