ಪ್ರೀತಿ ನೆಪದಲ್ಲಿ ದೇಹ ಸಂಪರ್ಕ..!! ಮದುವೆ ವಿಷ್ಯ ತೆಗೆದ ನರ್ಸಿಗೆ ಈತ ಮಾಡಿದ್ದೇನು ನೋಡಿ

By Infoflick Correspondent

Updated:Wednesday, October 27, 2021, 20:39[IST]

ಪ್ರೀತಿ ನೆಪದಲ್ಲಿ ದೇಹ ಸಂಪರ್ಕ..!! ಮದುವೆ ವಿಷ್ಯ ತೆಗೆದ ನರ್ಸಿಗೆ ಈತ ಮಾಡಿದ್ದೇನು ನೋಡಿ

 ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಆಕೆಯ ಜೊತೆ ಸ್ನೇಹ ಪ್ರೀತಿ ಸಲುಗೆಯಿಂದ ತನ್ನ ದೇಹದ ದಣಿವನ್ನು ಆಸೆಯನ್ನ ತೀರಿಸಿಕೊಂಡು ಮದುವೆ ವಿಷಯ ಪ್ರಸ್ತಾಪ ಆಗುತ್ತಿದ್ದ ಹಾಗೆ ಆಕೆಯನ್ನು ಕೊ*ಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬಳಿಕ ತಾನು ಕೂಡ ಗಾಯಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದ ವೇಳೆ, ಪೊಲೀಸರ ಅನುಮಾನದಿಂದ ತನಿಖೆ ನಡೆಸಿದ್ದಾರೆ ವಿಚಾರಣೆ ವೇಳೆ ಪೊಲೀಸರ ಎದುರು ಎಲ್ಲಾ ಬಾಯಿ ಬಿಟ್ಟಿದ್ದಾನೆ ಹಾಗೆ ವಶವಾಗಿದ್ದಾನೆ.

ನಂತರ ಪೊಲೀಸರ ವಿಚಾರಣೆ ವೇಳೆ ತನ್ನ ಹಾಗೂ ಆ ನರ್ಸ್ ಜೊತೆ ಏನೆಲ್ಲ ನಡೆಯಿತು ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಹೌದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕರವಾಡಿಯ ಯುವತಿ ನಾಗಚೈತನ್ಯ ಅವರು ಒಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಗುಂಟೂರು ಜಿಲ್ಲೆಯ ಕೊಟ್ಟಿರೆಡ್ಡಿ ಎಂಬ ಒಬ್ಬ ಯುವಕ ಆರೋಗ್ಯ ಪ್ರತಿನಿಧಿಯಾಗಿ ಒಂದು ಬಾರಿ ನಾಗಚೈತನ್ಯ ಅವರ ಆಸ್ಪತ್ರೆಗೆ ಭೇಟಿ ನೀಡಿದ್ದನು. ಇಲ್ಲಿ ಇವರಿಬ್ಬರಲ್ಲಿ ಸ್ನೇಹ ಹುಟ್ಟಿಕೊಂಡಿತ್ತು. ಇದಾದ ಬಳಿಕ ಸ್ನೇಹ ಪ್ರೀತಿಗೂ ಕೂಡ ತಿರುಗಿತ್ತು ಎನ್ನಲಾಗಿದೆ. ಆಸ್ಪತ್ರೆ ಹತ್ತಿರದಲ್ಲೇ ಹಾಸ್ಟೆಲ್ನಲ್ಲಿ ವಾಸವಿದ್ದ ನಾಗಚೈತನ್ಯ ಇರುವ ಸ್ಥಳಕ್ಕೆ ಕೊಟ್ಟಿರೆಡ್ಡಿ ಆಗಾಗ ಬಂದು ಹೋಗುತ್ತಿದ್ದನಂತೆ.

ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ನಾಗಚೈತನ್ಯ ಜೊತೆ ಈತ ದೈ*ಹಿಕ ಸಂಪರ್ಕವನ್ನ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಹೌದು ಇವರಿಬ್ಬರ ಪ್ರೀತಿ ಪ್ರೇಮ ವಿಚಾರ ಮುಂದುವರೆದಂತೆ ಇವರ ಮನೆಯವರಿಗೆ ಇವರು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದು ತಿಳಿದಿದೆ. ಆಗ ಹುಡುಗಿಯ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಇದೇ ವಿಷಯವನ್ನು ನಾಗಚೈತನ್ಯ ಅವರು ಕೊಟ್ಟಿರೆಡ್ಡಿ ಬಳಿ ಹಂಚಿಕೊಂಡಿದ್ದಾರೆ. ಆಗ ಕೊಟ್ಟಿರೆಡ್ಡಿ ಮದುವೆ ವಿಷಯ ಪ್ರಸ್ತಾಪ ಆಗುತ್ತಿದ್ದ ಹಾಗೇ ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದಾನೆ, ಯುವತಿಯ ಮೇಲೆ ರೇಗಾಡಿದ್ದಾನೆ..

ಪ್ರೀತಿ ನಾಟಕವಾಡಿ ತನ್ನ ಆಸೆ ತೀರಿಸಿಕೊಂಡ ಕೊಟ್ಟಿರೆಡ್ಡಿ ಮದುವೆಗೆ ಒಪ್ಪಲಿಲ್ಲ ಎನ್ನಲಾಗಿದೆ. ಈ ಮದುವೆ ಕುರಿತು ನಾಗಚೈತನ್ಯ ಅವರನ್ನು ಲಾಡ್ಜ್ ಒಂದಕ್ಕೆ ಕೊಟ್ಟಿರೆಡ್ಡಿ ಕರೆದೊಯ್ದು ಕೊಲೆ ಮಾಡಿ ರೂಮಿನಲ್ಲಿ ಆಕೆ ದೇಹವನ್ನ ಮುಚ್ಚಿಟ್ಟಿಡಿದ್ದಾನೆ. ಬಳಿಕ ತಾನು ಗಾಯಮಾಡಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಆಸ್ಪತ್ರೆಯವರು ಕೇಳಿದಾಗ ನಾನು ನನ್ನ ಹುಡುಗಿ ಮದುವೆ ಆಗುತ್ತಿದ್ದೆವು, ಆದರೆ ಎರಡು ಮನೆಕಡೆ ಒಪ್ಪದ ಕಾರಣಕ್ಕಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆವು, ಎಂದು ಕತೆ ಕಟ್ಟಿದ್ದಾನೆ. ಡಾಕ್ಟರ್ ಗಳಿಗೆ ಅನುಮಾನ ಬಂದು ಅತ್ತ ಪೊಲೀಸರಿಗೆ ಕಾಲ್ ಮಾಡಿದ್ದಾರೆ.

ನಂತರ ಸ್ಥಳಕ್ಕೆ ಬಂದು ವಿಚಾರಣೆ ಮಾಡಿದಾಗ ಈತ ನಡೆದಿದ್ದೆಲ್ಲವನ್ನೂ ಬಾಯಿಬಿಟ್ಟಿದ್ದಾನೆ. ನಂತರ ಲಾಡ್ಜಿಗೆ ಹೋಗಿ ಯುವತಿಯ ಮೃತ ದೇಹ ನೋಡಿ ಪೊಲೀಸರು ಬೆರಗಾಗಿದ್ದಾರೆ. ಇದೀಗ ಈತನನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ...