ಶನಿ ದೇವರ ಕೃಪೆಗಾಗಿ ಈ ಮಾರ್ಗಗಳನ್ನು ಅನುಸರಿಸಿದರೆ, ಒಳ್ಳೆಯದಾಗುವುದು ನಿಶ್ಚಿತ..

By Infoflick Correspondent

Updated:Friday, July 8, 2022, 15:37[IST]

ಶನಿ ದೇವರ ಕೃಪೆಗಾಗಿ ಈ ಮಾರ್ಗಗಳನ್ನು ಅನುಸರಿಸಿದರೆ, ಒಳ್ಳೆಯದಾಗುವುದು ನಿಶ್ಚಿತ..

ಶನಿ ದೇವರೆಂದರೆ ಹಲವರು ಹೆದರಿಕೊಳ್ಳುವುದುಂಟು. ಇದಕ್ಕೆ ಕಾರಣವೂ ಇದೆ. ಶನಿ ದೇವ ಮಹಾಶಿವನನ್ನೂ ಬಿಡದೇ ಕಾಡಿದ್ದನಂತೆ. ಒಮ್ಮೆ ಶನಿ ದೇವ ಹೆಗಲೇರಿದರೆ, ತಲೆ ಕೆಳಗೆ ಮಾಡಿದರೂ, ಗ್ರಹಚಾರಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶನಿಕಾಟವನ್ನು ಯಾರಿಂದಲೂ ಸಹಿಸಲಾಗದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗಾಗಿ ಶನಿ ದೇವರ ಅನುಗ್ರಹಕ್ಕೆ ಪಾತ್ರರಾದರೆ, ಯಾವ ಸಮಸ್ಯೆಯೂ ನಮ್ಮನ್ನು ಕಾಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಹಾಗಾದರೆ ಶನಿ ದೇವರ ಕೃಪೆಗೆ ಭಾಜನರಾಗುವುದು ಹೇಗೆ ಎಂದು ನೋಡೋಣ ಬನ್ನಿ..

 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564


ಹಲವರು ಶನಿವಾರದಂದು ಶನಿಮಹಾತ್ಮನ ಸನ್ನಿಧಾನಕ್ಕೆ ತೆರಳಿ ನಮಸ್ಕರಿಸಿ ಬರುತ್ತಾರೆ. ಇನ್ನೂ ಕೆಲವರು ಎಳ್ಳು ಬತ್ತಿ ಹಚ್ಚುತ್ತಾರೆ. ಶನಿ ದೇವರ ಪೂಜೆಗೆ ಶನಿವಾರವನ್ನು ವಿಶೇಷ ದಿನವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಶನಿ ಗ್ರಹ ದುರ್ಬಲವಾಗಿದ್ದರೆ ಆತ ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ಎದುರಿಸುವುದು ಖಚಿತವಾಗಿರುತ್ತದೆ. ಅದಕ್ಕೆ ಹಿರಿಯರು, ಸುಳ್ಳು ಹೇಳಬಾರದು, ಮೋಸ ಮಾಡಬಾರದು, ಅಹಂಕಾರವನ್ನು ತೋರುವುದು, ಅನುಮಾನ ಪಡುವುದು, ಅವಮಾನಿಸುವುದು, ಕೆಟ್ಟದ್ದನ್ನು ಬಯಸುವುದನ್ನು ಮಾಡಬಾರದು. ಇದರಿಂದ ಶನಿ ದೇವರಿಗೆ ಕೆಟ್ಟ ಕೋಪ ಬರುತ್ತದೆ. ಆಗ ಆತ ನಮ್ಮನ್ನು ಕಾಡಲು ಶುರು ಮಾಡುತ್ತಾನೆ. ಒಮ್ಮೆ ಶನಿ ದೇವರು ಹೆಗಲೇರಿದರೆ, ಅಪ್ಪಯ್ಯ=ಜಪ್ಪಯ್ಯ ಎಂದರೂ ತಪ್ಪಿಸಿಕೊಳ್ಳಲಾಗದು ಎನ್ನುತ್ತರೆ.


ಜಾತಕದಲ್ಲಿ ಶನಿಯು ಲಾಭ ಸ್ಥಾನದಲ್ಲಿದ್ದರೆ, ವ್ಯಕ್ತಿಗೆ ಐಶ್ವರ್ಯ, ಸಂಪತ್ತು ಎಲ್ಲವೂ ಸಿಗುತ್ತದೆಯಂತೆ. ವಿಜಯವನ್ನು ಕರುಣಿಸುತ್ತಾನಂತೆ. ಹಾಗಾಗಿ ನಾವೆಂದೂ ಅಹಂಕಾರವನ್ನು ತೋರದೇ ಬದುಕಬೇಕು. ನಮ್ಮಲ್ಲಿರುವುದರಲ್ಲೇ ಸಣ್ಣ-ಪುಟ್ಟ ದಾನಗಳನ್ನು ಅವಶ್ಯಕತೆ ಇದ್ದವರಿಗೆ ಮಾಡಬೇಕಂತೆ. ಸುಳ್ಳು-ಕಪಟ ತನವನ್ನು ಎಂದಿಗೂ ಮೆರೆಯಬಾರದು ಎಂದು ಹೇಳುತ್ತಾರೆ. ಆಗ ಶನಿ ನಮಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಗುರು-ಹಿರಿಯರು ಹೇಳಿದ್ದಾರೆ.

ಇನ್ನು ಶನಿ ಕಾಟವನ್ನು ಅನುಭವಿಸುತ್ತಿರುವವರು, ಶನಿವಾರದಂದು, ಶಮಿ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಎಳ್ಳಿನ ಎಣ್ಣೆಯಲ್ಲಿ ದೀಪ ಹಚ್ಚುವುದು, ಮತ್ತು ಕಪ್ಪು ಎಳ್ಳನ್ನು ಸಮರ್ಪಿಸುವುದು ಒಳ್ಳೆಯದಂತೆ. ಶನಿ ದೇವಾಲಯಕ್ಕೆ ಎಳ್ಳೆಣ್ಣೆ ಕೊಡುವುದು, ಎಳ್ಳು ಬತ್ತಿ ಹಚ್ಚುವುದು, ಅರಳಿ ಕಟ್ಟೆಯನ್ನು ಸುತ್ತುವುದು, ದಾಮ ಮಾಡುವುದು, ಹನುಮಾನಚಾಲೀಸಾ ಓದುವುದು ಮಾಡಿದರೆ ಒಳ್ಳೆಯದಾಗುತ್ತದೆ. ಅಲ್ಲದೇ, ಕಪ್ಪು ಬಟ್ಟೆ ಧರಿಸುವುದು, ಕಪ್ಪು ವಸ್ತ್ರವನ್ನು ದಾನ ಮಾಡುವುದರಿಂದಲೂ ಒಳಿತಾಗುತ್ತದೆ ಎನ್ನಬಹುದು.