Coronavirus: ಬೆಂಗಳೂರು ಜನತೆಗೆ ಶಾಕ್ ಕೊಟ್ಟ ಬಿಬಿಎಂಪಿ ಹೊಸ ಕರೋನ ರೂಲ್ಸ್ ಏನದು ನೋಡಿ
Updated:Saturday, April 30, 2022, 23:05[IST]

ಕೋವಿಡ್ ನಾಲ್ಕನೇ ಅಲೆ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಕೊರೊನಾ ಮಿನಿ ರೂಲ್ಸ್ ಬಂದಿದ್ದು, ಥಿಯೇಟರ್, ಮಾಲ್, ಹಾಸ್ಪಿಟಲ್ಗೆ ಹೊಸ ನಿಯಮದ ಮಾರ್ಗಸೂಚಿ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಪತ್ತೆಯಾದ ಶೇ. 97 ರಷ್ಟು ಕೇಸ್ಗಳು ಬೆಂಗಳೂರಿನಲ್ಲೇ ಪತ್ತೆಯಾಗಿದೆ. 4ನೇ ಆತಂಕ ಹೊತ್ತಲ್ಲೇ ಮಿನಿ ರೂಲ್ಸ್ ಜಾರಿ ಮಾಡಲಾಗಿದ್ದು, ಥಿಯೇಟರ್ಗೆ ಸಿನಿಮಾ ನೋಡಲು, ಮಾಲ್ನಲ್ಲಿ ಶಾಪಿಂಗ್ ಮಾಡಲು, ಹೋಟೆಲ್ಗಳಲ್ಲಿ ಊಟ-ತಿಂಡಿ ಮಾಡಲು,ಆಸ್ಪತ್ರೆಗಳಿಗೆ ಟ್ರೀಟ್ಮೆಂಟ್ ಪಡೆಯಲು ಈ ಮಾರ್ಗಸೂಚಿ ಅನ್ವಯವಾಗುತ್ತದೆ.
ಬೆಂಗಳೂರಿನಲ್ಲಿ ಹೊಸ ನಿಯಮ ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಮಾಲ್, ಥಿಯೇಟರ್, ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಕೋವಿಡ್ ನಡಾವಳಿಗಳನ್ನು ಪಾಲಿಸಬೇಕು. ಬೂಸ್ಟರ್ ಡೋಸ್, ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ.
ಹಾಸ್ಪಿಟಲ್ನಲ್ಲಿ ILI, SARI ಪ್ರಕರಣ ಬಂದ್ರೆ ರಿಜಿಸ್ಟರ್ ಮಾಡ್ಬೇಕು, ಥಿಯೇಟರ್, ಹೋಟೆಲ್ಗೆ ಮಾಲ್ಗಳಿಗೆ ಹೋಗಲು ಡಬಲ್ ಡೋಸ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದ್ದು, ಥಿಯೇಟರ್, ಮಾಲ್ಗಳ ಪ್ರವೇಶದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡ್ಬೇಕು, ಮಿನಿ ಮಾರ್ಗಸೂಚಿ ಬಿಬಿಎಂಪಿ ಹೊರಡಿಸಿದೆ. ಕೇಸ್ ಏರಿಕೆ ಆಗ್ತಿದ್ದಂತೆ ಬಿಬಿಎಂಪಿಯಿಂದ ಟೈಟ್ ರೂಲ್ಸ್ ಜಾರಿ ಮಾಡಲಾಗಿದೆ.
ಜನಜಂಗುಳಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಬೇಕು ಹಾಗು ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ.