ಗಗನಕ್ಕೇರಲಿದೆ ಬಿಯರ್ ದರ ; ನಶೆ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ! ಬೆಲೆ ಏರಿಕೆಗೆ ಇಲ್ಲಿದೆ ಕಾರಣ

By Infoflick Correspondent

Updated:Wednesday, April 6, 2022, 22:17[IST]

ಗಗನಕ್ಕೇರಲಿದೆ ಬಿಯರ್ ದರ ; ನಶೆ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ! ಬೆಲೆ ಏರಿಕೆಗೆ ಇಲ್ಲಿದೆ ಕಾರಣ

ರಾಜ್ಯದ ಬೆಲೆ ಏರಿಕೆ  ಬಿಸಿ ಬಿಯರ್ ಬಾಟಲಿಗಳಿಗೂ ತಗುಲಿದೆ. ನಶೆಪ್ರಿಯರ ಕಿಶೆಗೆ ಕನ್ನ ಬಿಳಲಿದೆ. ಪ್ರತಿ ಸಿಪ್ ಬಿಯರ್ ಇಳಿಸುವಾಗಲು ಬೆಲೆ ಬಗ್ಗೆ ಚಿಂತೆನೆ ಮಾಡುವ, ಲೆಕ್ಕಾ ಹಾಡಿ ಕೂಡಿಯುವ ಮನೋಭಾವ ಭಾರತದ ಬಿಯರ್ ಪ್ರಿಯರಲ್ಲಿ ಕಾಣಿಸಿಕೊಳ್ಳಲಿದೆ. 

ಬಾರ್ಲಿ ಸೇರಿದಂತೆ ಬಿಯರ್‌ ಉತ್ಪಾದನೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಡೀಸೆಲ್‌ ಮತ್ತು ಪೆಟ್ರೋಲ್‌ ದರ ಹೆಚ್ಚಳದಿಂದ ಸಾಗಣೆ ದರ ಹೆಚ್ಚಳವಾಗಿರುವುದರಿಂದ ಬಿಯರ್‌ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬುದು ಕಂಪನಿಗಳ ಹೇಳಿಕೆ ನೀಡಿದೆ.   

ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದ ಭಾರತಕ್ಕೆ ಪರೋಕ್ಷ ಪರಿಣಾಮಗಳಿವೆ. ಬಾರ್ಲಿ ರಫ್ತು ಮಾಡು ವಿಶ್ವದ ಎರಡನೇ ಅತೀ ದೊಡ್ಡ ದೇಶ ರಷ್ಯಾ. ಇತ್ತ ಗೋಧಿಯನ್ನು ರಫ್ತು ಮಾಡುವ ವಿಶ್ವದ ನಾಲ್ಕನೇ ಅತೀ ದೊಡ್ಡ ದೇಶ ಉಕ್ರೇನ್. ಬಿಯರ್ ತಯಾರಿಕೆಯಲ್ಲಿ ಎರಡು ಅಷ್ಟೇ ಮುಖ್ಯ. ಬಿಯರ್‌ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ಬಾರ್ಲಿ ರಷ್ಯಾ ಮತ್ತು ಉಕ್ರೇನ್‌ನಿಂದ ಆಮದಾಗುತ್ತಿತ್ತು. ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಪೂರೈಕೆಯಾದರೂ ದುಬಾರಿ ಬೆಲೆ ತೆರಬೇಕಾಗಿದೆ. ಹಾಗಾಗಿ ಕಿಂಗ್‌ ಫಿಷರ್‌, ಬಡ್‌ ವೈಸರ್‌, ಟುಬೊರ್ಗ್‌ ಸೇರಿದಂತೆ ಎಲ್ಲಾ ಬಗೆಯ ಬಿಯರ್‌ ದರ ಹೆಚ್ಚಳವಾಗಲಿದೆ. ಇನ್ಮುಂದೆ ಮದ್ಯಪ್ರಿಯರು ಬಿಯರ್ ಕುಡಿಯಲೂ ಹೆಚ್ಚು ಹಣ ಕೊಡಲೇಬೇಕಿದೆ. 

ಈಗಾಗಲೇ ಬಹುತೇಕ ಎಲ್ಲ ಬಿಯರ್‌ ಕಂಪನಿಗಳು ಪ್ರತಿ ಬಾಟಲ್‌ಗೆ 5 ರಿಂದ 10 ರೂ. ಏರಿಸುವ ಪ್ರಸ್ತಾಪವನ್ನು ನಿಯಮದಂತೆ ಅಬಕಾರಿ ಇಲಾಖೆಗೆ ಸಲ್ಲಿಸಿ, ಅನುಮತಿ ಪಡೆದುಕೊಂಡಿವೆ. ಬಹುತೇಕ ಏ. 15ರಿಂದ ಎಲ್ಲ ಬ್ರಾಂಡ್‌ ಬಿಯರ್‌ ಮೇಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ,'' ಎಂದು ಮೂಲಗಳು ಖಚಿತಪಡಿಸಿವೆ.  

ಅಮೆರಿಕ, ಕೆನಾಡದಲ್ಲಿ ರಷ್ಯಾದ ವೋಡ್ಕಾ, ಮದ್ಯಗಳನ್ನು ಬಹಿಷ್ಕರಿಸಿದ್ದಾರೆ. ಇತ್ತ ರಷ್ಯಾ ಹಾಗೂ ಉಕ್ರೇನ್‌ನಿಂದ ಮದ್ಯ ಪೂರೈಕೆ, ಕಚ್ಚಾ ವಸ್ತುಗಳ ಪೂಕೈಗೂ ಅಡ್ಡಿಯಾಗಿದೆ. ಹೀಗಾಗಿ ಅಮೆರಿಕ, ಕೆನಡಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಮದ್ಯದ ಬೆಲೆ ಹೆಚ್ಚಳವಾಗಿದೆ. ಈಗ ಭಾರತದಲ್ಲೂ ಮದ್ಯದ ಬೆಲೆ ಹೆಚ್ಚಾಗಿ ನಶೆಪ್ರಿಯರಿಗೆ ತಲೆನೋವು ಪ್ರಾರಂಭವಾಗಿದೆ.