ಬೆಂಗಳೂರಿನಲ್ಲಿ ಇನ್ನು ಎಷ್ಟು ದಿನ ಬಾರಿ ಮಳೆ ಸುರಿಯಲಿದೆ ಗೊತ್ತಾ ?

By Infoflick Correspondent

Updated:Monday, August 1, 2022, 15:02[IST]

ಬೆಂಗಳೂರಿನಲ್ಲಿ ಇನ್ನು ಎಷ್ಟು ದಿನ ಬಾರಿ ಮಳೆ ಸುರಿಯಲಿದೆ  ಗೊತ್ತಾ ?

ಸಿಲಿಕಾನ್ ಸಿಟಿಯಲ್ಲಿ ಕಳೆದೆರಡು ದಿನಗಳಿಂದ ರಾತ್ರಿಯೆಲ್ಲಾ ಮಳೆ ಸುರಿದು, ಬೆಳಗ್ಗೆ ಬಿಸಿಲಿನ ತಾಪ ಇರಲಿದೆ. ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸುಮಾರು 100 ಕ್ಕೂ ಅಧಿಕ ‌ಮನೆಗಳಿಗೆ ನೀರು ‌ನುಗ್ಗಿದೆ. ಇನ್ನು ಈ ಮಳೆ ಇನ್ನೂ ೫ ದಿನ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಆಗಸ್ಟ್ 2ರಿಂದ 4ರವರೆಗೆ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  

ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆ ಕರಾವಳಿ ಪ್ರದೇಶಗಳಲ್ಲಿ ಆರೇಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೇಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ, ಕೇರಳ, ತಮಿಳು ನಾಡು ಸೇರಿದಂತೆ ಹಲವೆಡೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಿದೆ. ಗುಡುಗು, ಸಿಡಿಲು ಸಮೇತ ಮಳೆಯಾಗಲಿದ್ದು, ನಾಗರೀಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. 

ದಾವಣಗೆರೆ ಜಿಲ್ಲೆಯಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳಳಲಾಗಿದೆ. ಅಗತ್ಯ ನೆರವು ನೀಡಲು ಸರ್ಕಾರ ಸಜ್ಜಾಗಿದ್ದು, ರಕ್ಷಣೆ ಪರಿಹಾರ ಕಾರ್ಯಚರಣೆಗೆ ಎಸ್ಡಿಆರ್ಎಫ್ ತಂಡಗಳು ಸಿದ್ಧವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈಗಾಗಲೇ ವರುಣನ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಂತೂ ರಾತ್ರಿಯಿಂದ ಬೆಳಗಿನ ಜಾವದವರೆಗೂ ಬೆನ್ನುಬಿಡದೆ ಮಳೆ ಸುರಿಯುತ್ತಲೇ ಇರುತ್ತದೆ.