ಜೂನ್ ತಿಂಗಳ ಮೊದಲ ದಿನವೇ ಗುಡ್​ನ್ಯೂಸ್; ವಾಣಿಜ್ಯ ಸಿಲಿಂಡರ್  ದರ ಇಳಿಕೆ : ಎಷ್ಟು ಎಂದು ನೋಡಿ

By Infoflick Correspondent

Updated:Wednesday, June 1, 2022, 20:41[IST]

ಜೂನ್ ತಿಂಗಳ ಮೊದಲ ದಿನವೇ ಗುಡ್​ನ್ಯೂಸ್; ವಾಣಿಜ್ಯ ಸಿಲಿಂಡರ್  ದರ ಇಳಿಕೆ : ಎಷ್ಟು ಎಂದು ನೋಡಿ

ಜೂನ್ ತಿಂಗಳ ಮೊದಲ ದಿನವೇ ಗುಡ್​ನ್ಯೂಸ್ ಸಿಕ್ಕಿದೆ. ಅದೇನಪ್ಪಾ ಅಂದರೆ ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್  ದರ ಇಳಿಕೆಯಾಗಿದೆ. ಈ ವಿಚಾರ ಹೋಟೆಲ್  ಮಾಲೀಕರು, ಹಾಸ್ಟೆಲ್​ ಮಾಲೀಕರು, ಸೇರಿ ಹಲವು ವ್ಯಾಪಾರೋದ್ಯಮಿಗಳಿಗೆ ಸಂತಸ ಮೂಡಿಸಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಸಿಲಿಂಡರ್​ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದೀಗ ಇಂದಿನಿಂದ ಕಮರ್ಷಿಯಲ್​ ಸಿಲಿಂಡರ್ ನೂತನ ಬೆಲೆ ಜಾರಿಯಾಗಲಿದೆ. ಪೆಟ್ರೋಲ್-ಡೀಸೆಲ್ ದರವನ್ನು ಕಡಿಮೆ ಮಾಡಿದ ನಂತರ, ಎಲ್ ಪಿಜಿ (LPG) ಸಿಲಿಂಡರ್ ಬೆಲೆ ಈಗ ಕಡಿಮೆಯಾಗಿದೆ. ಆದರೆ ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.   

ಜೂನ್ 1 ರ ಇಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, 19 ಕೆಜಿ ವಾಣಿಜ್ಯ ಸಿಲಿಂಡರ್ 135 ರೂ.ಗಳಷ್ಟು ಕಡಿಮೆಯಾಗಿದೆ. ಈ ದರವು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಇದೀಗ ಎಲ್ಲಾ ರಾಜ್ಯಗಳಲ್ಲೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ದರ ಕಡಿಮೆಯಾಗಿದ್ದು, ವ್ಯಾಪರಸ್ಥರಿಗೆ ಸಂತಸ ಮೂಡಿಸಿದೆ. 

ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2354 ರೂ.ಗಳ ಬದಲು 2219 ರೂ. ಅದೇ ರೀತಿ ಕೋಲ್ಕತಾದಲ್ಲಿ 2454 ರೂ.ಗಳ ಬದಲು 2322 ರೂ., ಮುಂಬೈನಲ್ಲಿ 2306 ರೂ.ಗಳ ಬದಲು 2171.50 ರೂ., ಚೆನ್ನೈನಲ್ಲಿ 2507 ರೂ.ಗಳ ಬದಲು 2373 ರೂ.ಗೆ ಇಳಿಕೆಯಾಗಿವೆ.