ಐಪಿಎಲ್ ಪ್ರಿಯರಿಗೆ ಶಾಕ್ ಕೊಟ್ಟ ಬಿಸಿಸಿಐ..! ಈ ವರ್ಷದ ಐಪಿಎಲ್ ಕತೆ ಮುಗೀತು..!

By Infoflick Correspondent

Updated:Tuesday, May 4, 2021, 13:24[IST]

ಐಪಿಎಲ್ ಪ್ರಿಯರಿಗೆ ಶಾಕ್ ಕೊಟ್ಟ ಬಿಸಿಸಿಐ..! ಈ ವರ್ಷದ ಐಪಿಎಲ್ ಕತೆ ಮುಗೀತು..!

ಹೌದು ಸ್ನೇಹಿತರೆ ಪ್ರಸ್ತುತ ಐಪಿಎಲ್ 2021ರ ಉಳಿದ ಎಲ್ಲಾ ಪಂದ್ಯಗಳನ್ನ ಕ್ಯಾನ್ಸಲ್ ಮಾಡಿ ಟೂರ್ನಮೆಂಟನ್ನು ಸ್ಥಗಿತಗೊಳಿಸಿದೆ ಎಂದು ಬಿಸಿಸಿಐ ಹೇಳಿದ್ದು, ಇದೀಗ ಐಪಿಎಲ್ ಪ್ರಿಯರಿಗೆ ಶಾಕ್ ನೀಡಿದೆ. ಹೌದು ನಿನ್ನೆಯಷ್ಟೇ ಆರ್ಸಿಬಿ ವರ್ಸಸ್ ಕೆಕೆಆರ್ ಪಂದ್ಯ ನಡೆಯಬೇಕಿತ್ತು. ಆದರೆ ಪ್ಯಾಟ್ ಕಮಿನ್ಸ್ ಹಾಗೂ ಚಕ್ರವರ್ತಿಯವರಿಗೆ ಕರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಿನ್ನೆಯ ಪಂದ್ಯವನ್ನು ರದ್ದು ಮಾಡಿ ಮುಂದೂಡಲಾಗಿತ್ತು. ಇಂದು ಹೈದರಾಬಾದ್ ವರ್ಸಸ್ ಮುಂಬೈ ನಡುವೆ ಪಂದ್ಯ ನಡೆಯಬೇಕಿತ್ತು.   

ಆದ್ರೆ ಇದೀಗ ಹೈದರಾಬಾದ್ ತಂಡದ, ಸಹ ಹಾಗೂ ಡೆಲ್ಲಿ ತಂಡದ ಅಮಿತ್ ಮಿಶ್ರ ಅವ್ರಿಗೂ ಕೊರೊನ ಲಕ್ಷಣಗಳು ಕಂಡ ಬೆನ್ನಲ್ಲೇ, ಈ ವರ್ಷದ ಐಪಿಎಲ್ ಹಾಗೂ ಉಳಿದ ಪದ್ಯಗಳನ್ನೆಲ್ಲಾ ಕ್ಯಾನ್ಸಲ್ ಮಾಡಿ ಟೂರ್ನಮೆಂಟನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಹೌದು ದಿನೇದಿನೇ ಕರೋನವೈರಸ್ ಎರಡನೆಯ ಅಲೆ ಹಾವಳಿ ಹೆಚ್ಚಾಗುತ್ತಿದ್ದು ಈ ರೀತಿಯ ತೀರ್ಮಾನವನ್ನು ಬಿಸಿಸಿಐ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ಐಪಿಎಲ್ ಪ್ರಿಯರಿಗೆ ನಿರಾಸೆಯಾಗಿದ್ದಂತೂ ನಿಜ. ಈ ಬಗ್ಗೆ ನೀವೇನಂತೀರಿ, ಕರೋನ ಹೋಗುವವರೆಗೂ ಐಪಿಎಲ್ ಕ್ಯಾನ್ಸಲ್ ಆಗಿದ್ದು ಸರಿ ಇದೆಯಾ..? ಅಥವಾ ತಪ್ಪಿದಿಯಾ..? ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...