ದಿನೇಶ್ ಕಾರ್ತಿಕ್ ಮೊದಲ ಹೆಂಡತಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ವಿಜಯ್..! ಮುಂದಾಗಿದ್ದು ದುರಂತ
Updated:Friday, April 22, 2022, 20:30[IST]

ಅವನ ಹೆಸರು ದಿನೇಶ್ ಕಾರ್ತಿಕ್. ಏರುಗತಿಯಲ್ಲಿತ್ತು ಅವನ ಜೀವನ. ಮಹೇಂದ್ರ ಸಿಂಗ್ ಧೋನಿಯ ನಂತರ ಭಾರತೀಯ ತಂಡದ ಎರಡನೆಯ ವಿಕೆಟ್ ಕೀಪರ್ ಆಗಿದ್ದ ಆತ. ಜೊತೆಗೆ ತಮಿಳುನಾಡು ತಂಡದ ಕಪ್ತಾನ ಬೇರೆ. ಅವನ ಸಹ ಆಟಗಾರ ಮುರಳಿ ವಿಜಯ್ ಮರೆಯಲಾಗದ ಪೆಟ್ಟು ಕೊಟ್ಟಿದ್ದ. ಕಾರ್ತಿಕ್ ಮಡದಿಯೊಂದಿಗೆ ಸಂಬಂಧ ಬೆಳೆಸಿದ್ದ. ವಿಜಯ್ ಅದನ್ನು ತಮಿಳುನಾಡು ತಂಡದ ಅಷ್ಟೂ ಸದಸ್ಯರ ಬಳಿ ಕೊಚ್ಚಿಕೊಂಡಿದ್ದ ಮುಗ್ದ ಮನಸ್ಸಿನ ಕಾರ್ತಿಕ್ ಅವ್ರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಒಂದು ದಿನ ಅವನ ಪತ್ನಿ ತಾನು ಮುರುಳಿ ವಿಜಯ್ ಮಗುವಿಗೆ ತಾಯಿಯಾಗುತ್ತಿರುವ ವಿಚಾರ ತಿಳಿಸುತ್ತಾ ವಿಚ್ಛೇದನೆ ಇಂಗಿತ ವ್ಯಕ್ತಪಡಿಸುತ್ತಾಳೆ. ದಿನೇಶ್ ಕಾರ್ತಿಕ್ ಅವರು ದಿಕ್ಕೆಟ್ಟು ಹೋಗುತ್ತಾರೆ .ಹಾಗೆ ಬರಸಿಡಿಲು ಎರಗಿದಂತಾಗುತ್ತದೆ. ಮಾನಸಿಕವಾಗಿ ದಿನೇಶ್ ಖಿನ್ನನಾಗುತ್ತಾನೆ.
ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಾನೆ.ಇತ್ತ ಕಡೆ ಅವನ ಪತ್ನಿಯನ್ನು ವಿವಾಹವಾದ ಮುರಳಿ ವಿಜಯ್ ವೃತ್ತಿಜೀವನ ಏರುಗತಿಯನ್ನು ಏರುತ್ತದೆ. ಆಟದಲ್ಲಿ ಆಸಕ್ತಿ ಕಳೆದುಕೊಂಡ ದಿನೇಶ್ ಕಾರ್ತಿಕ್ ತಮಿಳುನಾಡು ತಂಡದ ನಾಯಕತ್ವವೂ ವಿಜಯ್ ಪಾಲಾಗುತ್ತದೆ. ಹಾಗೇನೇ ಈ ಐಪಿಎಲ್ ನಲ್ಲೂ ಸೋಲತೊಡಗಿದ ದಿನೇಶ್ ಕಾರ್ತಿಕ್ ರಣಜಿಯಲ್ಲೂ ತಂಡಕ್ಕೆ ಬೇಡದವನಾಗಿ ಬಿಡುತ್ತಾನೆ. ಹೌದು ಈ ನಿಜ ಜೀವನದಲ್ಲಿ ಒಂಟಿತನದ ಛಾಯೆ ದಟ್ಟವಾಗಿ ಕಾಡುತ್ತದೆ. ದೈನಂದಿನ ವ್ಯಾಯಾಮವನ್ನೂ ಬಿಟ್ಟುಬಿಡುವ ಕಾರ್ತಿಕ್ ಆ*ತ್ಮಹತ್ಯೆಯ ಯೋಚನೆಯನ್ನೂ ಮಾಡುತ್ತಾನೆ. ಹೌದು ಆತನ ಪರ್ಸನಲ್ ಟ್ರೈನರ್ ಮನೆಗೆ ಭೇಟಿ ಕೊಟ್ಟಾಗ ದಿನೇಶ್ ಕಾರ್ತಿಕ್ ಸಂಪೂರ್ಣ ಅಸ್ತವ್ಯಸ್ಥ ಸ್ಥಿತಿಯಲ್ಲಿರುತ್ತಾನೆ.
ಅವನನ್ನು ಮತ್ತೆ ಹುರಿದುಂಬಿಸಿ ಜಿಮ್ ಗೆ ಮರಳಿತರುವ ಟ್ರೈನರ್ ಬಳಿ ತರಬೇತಿ ಪಡೆಯುತ್ತಿದ್ದ ಇನ್ನೊಬ್ಬ ಕ್ರೀಡಾ ಪಟು ದೀಪಿಕಾ ಪಳ್ಳಿಕ್ಕಲ್. ಹೌದು ಇವರು ವಿಶ್ವಮಟ್ಟದ ಸ್ಕ್ವ್ಯಾಷ್ ಆಟಗಾರ್ತಿಯಾಗಿ ಆಗಲೇ ಹೆಸರು ಮಾಡಿದ್ದರು. ಹಾಗೆ ದೀಪಿಕಾ ಭೇಟಿ ದಿನೇಶ್ ಕಾರ್ತಿಕ್ ಅವರ ಬದುಕನ್ನೇ ಬದಲಾಯಿಸಿಬಿಡುತ್ತದೆ. ಕಾರ್ತಿಕ್ ಸ್ಥಿತಿ ನೋಡಿ ಶಾಕ್ ಆದ ದೀಪಿಕಾ ಮತ್ತು ಟ್ರೈನರ್ ನಿಧಾನವಾಗಿ ಕಾರ್ತಿಕ್ ಅವರನ್ನು ಸಹಜ ಸ್ಥಿತಿಗೆ ತರುತ್ತಾರೆ. ಇವರಿಬ್ಬರಲ್ಲಿ ಕ್ರಮೇಣವಾಗಿ ಪ್ರೇಮಾಂಕುರವಾಗುತ್ತದೆ. ಜೊತೆಯಾಗಿ ತರಬೇತಿಯನ್ನು ಕೆಚ್ಚಿನಿಂದ ಆರಂಭಿಸುತ್ತಾರೆ. ಹೌದು ಇತ್ತ ಕಡೆ ಕಾರ್ತಿಕ್ ಮಡದಿಯನ್ನು ಮದುವೆಯಾದ ಮುರಳಿ ವಿಜಯ್ ಗ್ರಾಫ್ ಇಳಿಯತೊಡಗುತ್ತದೆ.
ಮೊದಲಿಗೆ ಭಾರತೀಯ ತಂಡದಿಂದ ಹೊರಗಿಡಲ್ಪಟ್ಟ ವಿಜಯ್ ಕಡೆಗೆ ಐಪಿಎಲ್ ಚೆನ್ನೈ ತಂಡದಿಂದಲೂ ತಿರಸ್ಕೃತನಾಗುತ್ತಾನೆ. ಪೂರ್ತಿ ಹೊಸ ಪರಿವರ್ತನೆಯನ್ನು ಕಂಡುಕೊಂಡ ಕಾರ್ತಿಕ್ ರಣಜಿಯಲ್ಲಿ ದಾಖಲೆಯ ಮೇಲೆ ದಾಖಲೆಯ ಪ್ರದರ್ಶನವನ್ನು ನೀಡಿ ಭಾರತ ತಂಡಕ್ಕೆ ಮರಳುತ್ತಾನೆ. ಜೊತೆಗೆ ಕೋಲ್ಕತ್ತಾ ತಂಡದ ನಾಯಕನೂ ಆಗಿಬಿಡುತ್ತಾನೆ. ಈ ಮಧ್ಯೆಯೇ ದೀಪಿಕಾಳನ್ನು ಮದುವೆ ಆಗುವ ದಿನೇಶ್ ಕಾರ್ತಿಕ್ ಭಾರತದ ಹೊಸ ಡ್ಯಾಶಿಂಗ್ ಆಟಗಾರನಾಗಿ ಗುರುತಿಸಿಕೊಳ್ಳುತ್ತಾನೆ. ಹೌದು ವರುಷಗಳು ಉರುಳುತ್ತಾ ದೀಪಿಕಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಕ್ರೀಡಾಜಗತ್ತಿಗೂ ವಿದಾಯ ಹೇಳಿರುತ್ತಾರೆ. ದಿನೇಶ್ ಕಾರ್ತಿಕ್ ಗೆ ವೈಭವೋಪೇರಿತ ಬಂಗಲೆಯಲ್ಲಿ ವಾಸಸಿಬೇಕೆಂಬ ಬಾಲ್ಯದ ಕನಸೊಂದಿರುತ್ತದೆ. ಆದರೆ ಅದನ್ನು ಪಡೆಯುವ ಸಾಮರ್ಥ್ಯ ತನಗಿದೆಯೇ ಎಂಬ ಸಂದೇಹವೂ ಇರುತ್ತದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ಈ ವಿಚಾರ ತಿಳಿದ ದೀಪಿಕಾ ಆತನಿಗೆ ಮತ್ತೆ ಧೈರ್ಯ ತುಂಬುತ್ತಾಳೆ. ಇಬ್ಬರೂ ಜೊತೆಯಾಗಿ ದುಡಿಯೋಣ ಎನ್ನುತ್ತಾಳೆ. ಕಾರ್ತಿಕ್ ಪೋಯೆಸ್ ಗಾರ್ಡನ್ ಪ್ರದೇಶದಲ್ಲಿ ಅದ್ದೂರಿ ಬಂಗಲೆಯನ್ನು ಖರೀದಿಸುತ್ತಾನೆ. ಇತ್ತ ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಆರೇ ತಿಂಗಳಲ್ಲಿ ದೀಪಿಕಾ ಮತ್ತೆ ಆಖಾಡಕ್ಕಿಳಿಯುತ್ತಾಳೆ. ವಿಶ್ವ ಸ್ಕ್ವ್ಯಾಷ್ ಚಾಂಪಿಯನ್ಷಿಪ್ ನಲ್ಲಿ ಮಿಕ್ಸೆಡ್ ಡಬಲ್ಸ್ ಹಾಗು ಡಬಲ್ಸ್ ಎರಡರಲ್ಲೂ ಸಹ ಚಾಂಪಿಯನ್ ಆಗಿ ಹೊರಹೊಮ್ಮುತ್ತಾಳೆ. ಈ ಕಡೆ ಕಾರ್ತಿಕ್ ಐಪಿಎಲ್ ನಲ್ಲಿ ಅತ್ಯಂತ ಬೇಡಿಕೆಯ ಆಟಗಾರನಾಗಿ ಹೊರಹೊಮ್ಮುತ್ತಾನೆ.2022 ರ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಆತನನ್ನು ಚೆನ್ನೈ ತಂಡಕ್ಕೆ ಖರೀದಿಸಲು ಬಹಳಷ್ಟು ಪ್ರಯತ್ನ ಪಟ್ಟರೂ ಸಹ ಕಡೆಗೆ ದೊಡ್ಡ ಮೊತ್ತಕ್ಕೆ ಬೆಂಗಳೂರು ತಂಡದ ಪಾಲಾಗುತ್ತಾನೆ.
ಹೌದು ಈಗಲೂ ವಿಜೃಂಭಿಸುತ್ತಲೇ ಇರುವ ಈ 34 ರ ಹರೆಯದ ದಿನೇಶ್ ಕಾರ್ತಿಕ್ ಫಾರ್ಮ್ ಮೊನಚಾಗುವ ಬದಲು ದಿನೇ ದಿನೇ ಉತ್ತಮವಾಗುತ್ತಲೇ ಸಾಗುತ್ತಿದೆ. ಅತ್ತ ಕಾರ್ತಿಕ್ ಜೀವನಕ್ಕೇನೆ ಕೊಳ್ಳಿ ಇಟ್ಟಿದ್ದ ಮುರಳಿ ವಿಜಯ್ ನ ವೃತ್ತಿಜೀವನ ಬಹುತೇಕ ಅಂತ್ಯವೇ ಆಗಿ ಹೋಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..