ನಮ್ಮ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಲು ಇನ್ನುಳಿದ ಮೂರು ಪಂದ್ಯದಲ್ಲಿ ಎಷ್ಟು ಗೆಲ್ಲಬೇಕು ಗೊತ್ತಾ..?

By Infoflick Correspondent

Updated:Friday, October 1, 2021, 11:18[IST]

ನಮ್ಮ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಲು ಇನ್ನುಳಿದ ಮೂರು ಪಂದ್ಯದಲ್ಲಿ ಎಷ್ಟು ಗೆಲ್ಲಬೇಕು ಗೊತ್ತಾ..?

ಹೌದು ಸ್ನೇಹಿತರೆ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಅಂತಿಮ ಘಟ್ಟಕ್ಕೆ ತುಂಬಾನೇ ಹತ್ತಿರಾಗುತ್ತಿದೆ. ಎಲ್ಲಾ ತಂಡಗಳು ಈ ಬಾರಿ ಹದಿನಾಲ್ಕನೇ ಆವ್ರತ್ತಿಯಲ್ಲಿ ತುಂಬಾನೇ ಚೆನ್ನಾಗಿ ಭಾಗವಹಿಸಿವೆ. ಜೊತೆಗೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ, ಪ್ಲೇ ಆಫ್ ಹಂತಕ್ಕೆ ತುಂಬಾನೇ ಹತ್ತಿರವಾಗಿದೆ. ಹೌದು ಈಗಾಗಲೇ ಹೆಚ್ಚು ಕುತೂಹಲ ಮೂಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಆದರೂ ಐಪಿಎಲ್ ಕಪ್ ಎತ್ತಿಹಿಡಿಯುತ್ತ ಎಂದು ಕೋಟಿ ಕೋಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕಾತುರದಿಂದ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿ ತುಂಬಾನೇ ಸಪೋರ್ಟ್ ಮಾಡುತ್ತಿದ್ದಾರೆ.

ಹೌದು ಈಗಾಗಲೇ 11 ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡ ನಾಲ್ಕರಲ್ಲಿ ಸೋತಿದ್ದು, ಏಳರಲ್ಲಿ ಗೆದ್ದು 14 ಪಾಯಿಂಟ್ಸ್ ಗಳನ್ನು ಗಳಿಸಿ ಪಾಯಿಂಟ್ಸ್ ಟೇಬಲ್ ಅಲ್ಲಿ ಆರ್ಸಿಬಿ ಮೂರನೇ ಸ್ಥಾನದಲ್ಲಿದೆ. ಪ್ಲೇ ಆಫ್ ಹಂತ ಪ್ರವೇಶಿಸಲು ಆರ್ಸಿಬಿ ಇನ್ನುಳಿದ ಮೂರು ಪಂದ್ಯಗಳಲ್ಲಿ ಎಷ್ಟು ಪಂದ್ಯ ಗೆಲ್ಲಬೇಕು ಎಂಬುದಾಗಿ ಇದೀಗ ತಿಳಿಯೋಣ. ಆರ್ಸಿಬಿ ಮುಂದಿನ ಒಟ್ಟು ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಸಹ ಪ್ಲೇ ಆಫ್ ಪ್ರವೇಶಿಸಬಹುದು, ಆದರೆ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿರುವ ಕಲ್ಕತ್ತಾ ಮತ್ತು ಮುಂಬೈ ತಂಡಗಳು ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಸೋತಿದ್ದೆ ಆದರೆ ಆರ್ಸಿಬಿ ಒಂದು ಪಂದ್ಯ ಗೆದ್ದರೆ ಪ್ಲೇಆಫ್ ಪ್ರವೇಶಿಸುತ್ತಾರೆ.

ಒಂದು ವೇಳೆ ಮುಂಬೈ ಹಾಗೂ ಕಲ್ಕತ್ತಾ ಮೂರು ಪಂದ್ಯಗಳಲ್ಲಿಯೂ ಗೆದ್ದರೆ ನಮ್ಮ ಆರ್ಸಿಬಿ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕು, ಆಗ ಮಾತ್ರ ಪ್ಲೇಆಫ್ ಪ್ರವೇಶಿಸುತ್ತಾರೆ. ಇಲ್ಲವಾದಲ್ಲಿ ರನ್ ರೇಟ್ mele ಹೋಗುತ್ತದೆ. ಇನ್ನುಳಿದಂತೆ ಪಂಜಾಬ್ ಹಾಗೂ ರಾಜಸ್ಥಾನ ಪ್ಲೇ ಆಫ್ ಪ್ರವೇಶಿಸಬೇಕಾದರೆ ಕಲ್ಕತ್ತಾ ಹಾಗೂ ಮುಂಬೈ ಎರಡು ಪಂದ್ಯದಲ್ಲಿ ಸೋಲನ್ನು ಅನುಭವಿಸಬೇಕು, ಇವರು ಎಲ್ಲಾ ಪಂದ್ಯ ಗೆಲ್ಲಬೇಕು ಹಾಗಾದಲ್ಲಿ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿಮ್ಮ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗಿನ ತಂಡ ಯಾವುದು ಎಂದು ಕಮೆಂಟ್ ಮಾಡಿ ಈ ಮಾಹಿತಿಯ ಬಗ್ಗೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು...