BBK Season 9 Kannada : ಈ ಬಾರಿ ಹೀಗಿರಲಿದೆ ಬಿಗ್ ಬಾಸ್ ಒಟಿಟಿ ಮನೆ ! ಮನೆಯ ಲುಕ್ ಔಟ್
Updated:Friday, August 5, 2022, 14:31[IST]

ಕನ್ನಡ 'ಬಿಗ್ ಬಾಸ್ ಒಟಿಟಿ 1' ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಾರಿ ಎರಡು ಬಿಗ್ ಬಾಸ್ ನಡೆಯಲಿದ್ದು ಒಟಿಟಿಯಲ್ಲಿ ಇದೇ ಮೊದಲ ಬಾರಿ ಹಾಗಾಗಿ ಈ ಬಾರಿಯ ಓಟಿಟಿ ಬಿಗ್ ಬಾಸ್ ಮನೆ ಹೇಗಿದೆ' ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಆರು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದ ಮನೆ ಕುರಿತು ಕುತೂಹಲ ಮೂಡಿದೆ. ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಝಲಕ್ ತೋರಿಸಿದ್ದಾರೆ. ಆಗಸ್ಟ್ 6 ರಿಂದ ಚೊಚ್ಚಲ ಆವೃತ್ತಿಯ ಒಟಿಟಿ ಬಿಗ್ ಬಾಸ್, ಸಂಜೆ 8 ಗಂಟೆಯಿಂದ, 24/7 ವೂಟ್ನಲ್ಲಿ ನೇರಪ್ರಸಾರವಾಗಲಿದೆ.
ಪರಮೇಶ್ವರ್ ಗುಂಟ್ಕಲ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡಿದ್ದು, Over the top! ಎಂದು ಬರೆದುಕೊಂಡಿದ್ದಾರೆ. ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಲ್ಲಿ ಬಿಗ್ ಬಾಸ್ ಹೌಸ್ ಕುರಿತು ಕುತೂಹಲ ಹೆಚ್ಚಿದ್ದು .
ದೊಡ್ಮನೆಗೆ ಹೊಸ ವಿನ್ಯಾಸ ನೀಡಲಾಗಿದ್ದು ಈ ಫೋಟೋ ನೋಡಿ ವೀಕ್ಷಕರು ಸಾಕಷ್ಟು ಕುತೂಹಲಕ್ಕೆ ಒಳಗಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮನೆಯಲ್ಲಿ ಯಾವ ರೀತಿಯ ವಿಶೇಷತೆಗಳು ಇರಲಿವೆ ಎಂಬ ಕುತೂಹಲಕ್ಕೆ ಆಗಸ್ಟ್ 6ರಂದು ತೆರೆ ಬೀಳಲಿದೆ.