ಸೀರೆಯಲ್ಲಿ ಕುದುರೆ ನಡೆಸಿದ ಭಾರತೀಯ ನಾರಿ..! ಸಕತ್ ಕ್ಯೂಟ್ ವೈರಲ್ ವಿಡಿಯೋ ನೋಡಿ..!!!

Updated: Thursday, June 10, 2021, 21:07 [IST]

ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಹೆಚ್ಚಾಗಿ ಸೀರೆಯನ್ನು ಉಟ್ಟುಕೊಂಡರೆ, ಆ ಗೃಹಿಣಿ ತುಂಬಾನೇ ಅಬಲೆ ಎಂದು ಕೆಲವರು ನಂಬಿದ್ದಾರೆ. ಅಂತಹ ಕೆಲವರ ನಂಬಿಕೆಯನ್ನೇ ಬುಡಮೇಲು ಮಾಡಿರುವ ಇಲ್ಲೊಬ್ಬ ಮಹಿಳೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್ ಆಗಿದ್ದಾರೆ. ಹೌದು ಒಡಿಶಾ ಜಹಾಲ್ ಎಂಬ ಗ್ರಾಮದ ಗೃಹಿಣಿಯಾದ ಈ ಮೊನಾಲಿಸ ಅವರು ನೋಡಲು ತುಂಬಾ ಮುಗ್ಧರಾಗಿದ್ದು, ಅಷ್ಟೇ ಚಂದುಳ್ಳಿ ಚೆಲುವೆ ಸಹ ಆಗಿದ್ದಾರೆ.

ಈ ಮೊನಾಲಿಸಾ ಬುಲೆಟ್ ಬೈಕ್ ಓಡಿಸುತ್ತಾರೆ, ಜೊತೆಗೆ ಟ್ರಕ್ ಸಹ ಓಡಿಸುತ್ತಾರೆ, ವಿಶೇಷ ಏನಪ್ಪಾ ಅಂತ ಅಂದ್ರೆ ಮೊನಾಲಿಸ ಅವರು ಯಾವುದೇ ವಾಹನವಾಗಲಿ ಒಮ್ಮೆ ಚಲಾಯಿಸಲು ಮುಂದಾದರೆ, ವಿಶಿಷ್ಟವಾದ ರೀತಿಯಲ್ಲಿ ಸೀರೆಯನ್ನು ಉಟ್ಟುಕೊಂಡು ಚಲಾಯಿಸಿ ಎಲ್ಲರಿಗೂ ಅಚ್ಚರಿ ನೀಡುತ್ತಾರೆ. ಹೌದು ಈಗ ಮೋನಲಿಸ ಅವರು ಟ್ರಕ್ ಬೈಕ್ ಓಡಿಸಿದ್ದಕ್ಕಾಗಿ ಸುದ್ದಿಯಾಗಿಲ್ಲ, ಬದಲಿಗೆ ಮೋನಲಿಸ ಅವರು ಕುದುರೆಯನ್ನ ಏರಿ, ಕುದುರೆಯ ಸವಾರಿ ಮಾಡಿರುವ ಮೂರು ನಿಮಿಷದ ವಿಡಿಯೋಕ್ಕಾಗಿ  ಫೇಮಸ್ ಆಗಿದ್ದಾರೆ. 

ಹೌದು ಈಕೆಯ ಪತಿ ಬದ್ರಿ ಎನ್ನುವವರು ಈ ಮೊನಾಲಿಸ ಅವರಿಗೆ ತುಂಬಾನೇ ಪ್ರೋತ್ಸಾಹ ಕೊಡುತ್ತಾರಂತೆ. ಹಾಗೆ ಹೆಂಡತಿಗೆ ಇಷ್ಟ ಇರುವ ಕೆಲ ಕಾರ್ಯಗಳನ್ನು ಮಾಡಲು ಹೇಳುತ್ತಾರಂತೆ, ಈ 3 ನಿಮಿಷದ ಕುದುರೆ ಮೇಲೇರಿ ಸಕ್ಕತ್ ಸವಾರಿ ಮಾಡಿರುವ ಈ ಯುವತಿಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಸ್ನೇಹಿತರೆ. ಈ ಲೇಖನದ ಕೊನೆಯಲ್ಲಿ ಮೊನಾಲಿಸ ಸೀರೆಯುಟ್ಟು ಈ ಕುದುರೆ ಓಡಿಸಿರುವ ವಿಡಿಯೋ ನೋಡಿ, ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು...