Puneeth Rajkumar : ಡ್ಯಾನ್ಸಿಂಗ್ ಚಾಂಪಿಯನ್ಸ್ ಫಿನಾಲೆ ವೇದಿಕೆಯಲ್ಲಿ ಅಶ್ವಿನಿ ಪುನೀತ್..! ಯಾರ ಮನೆಗೆ ಹೋಗುತ್ತಾರೆ ಗೊತ್ತಾ ಅಪ್ಪು..?

By Infoflick Correspondent

Updated:Thursday, May 26, 2022, 08:22[IST]

Puneeth Rajkumar :  ಡ್ಯಾನ್ಸಿಂಗ್ ಚಾಂಪಿಯನ್ಸ್     ಫಿನಾಲೆ  ವೇದಿಕೆಯಲ್ಲಿ ಅಶ್ವಿನಿ ಪುನೀತ್..! ಯಾರ ಮನೆಗೆ ಹೋಗುತ್ತಾರೆ ಗೊತ್ತಾ ಅಪ್ಪು..?

ಕನ್ನಡದ ಖ್ಯಾತ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಎಲ್ಲಾ ಡಾನ್ಸರ್ ತುಂಬಾ ಅತ್ಯದ್ಭುತ ಪ್ರದರ್ಶನ ನೀಡಿದ್ದು, ಉಳಿದಿರುವ ಕೆಲ ಜೋಡಿಗಳು ಫಿನಾಲೆವರೆಗೂ ಬಂದಿವೆ. ಇದೇ ವಾರ ಫಿನಾಲೆ ಕಾರ್ಯಕ್ರಮ ನಡೆಯುತ್ತಿದ್ದು ಜೋರಾಗಿಯೇ ಎಲ್ಲ ಸಿದ್ಧತೆ ನಡೆದಿದೆ ಎನ್ನಬಹುದು. ಈ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದ ಜಡ್ಜ್ ಆಗಿ ಆರಂಭದಲ್ಲಿ ನಟಿ ಮೇಘನ ರಾಜ್ ಕಾಣಿಸಿಕೊಂಡಿದ್ದರು. ನಂತರ ಮಯೂರಿ ಹಾಗೂ ವಿಜಯ್ ರಾಘವೇಂದ್ರ ಅವರು ಕೂಡ ಪ್ರಸ್ತುತ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಅಕುಲ್ ಬಾಲಾಜಿ ನಿರೂಪಣೆ ಇದ್ದು, ಯಶಸ್ವಿಯಾಗಿ ಇಲ್ಲಿಯವರೆಗೆ ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ನಡೆದಿದೆ.   

ಹೌದು ಇದೇ ವಾರ ಫಿನಾಲೆ ಶೋ ಕೂಡ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸಿದ್ದರು. ಹೌದು ವಿಡಿಯೋ ಪ್ರೋಮೊ ಬಿಡುಗಡೆ ಮಾಡಿರುವ ಕಲರ್ಸ್ ಕನ್ನಡ ಚಾನೆಲ್ ಕಾರ್ಯಕ್ರಮದ ಫಿನಾಲೆಯ ಕೆಲ ಜಲಕ್ ನೀಡಿದೆ ಎಂದು ಹೇಳಬಹುದು. ವಿಜಯ ರಾಘವೇಂದ್ರ ಅವರು ಅಶ್ವಿನಿ ಪುನೀತ್ ಅವರಿಗೆ ಇಲ್ಲಿ ಇಡೀ ಸಂಭ್ರಮವನ್ನು ಅವರಿಗೆ ಡೆಡಿಕೇಟ್ ಮಾಡ್ತಾ ಇದೀವಿ. ಅದರ ಭಾಗಿಯಾಗಿ ನೀವು ಬಂದಿದ್ದೀರ, ನಾವು ಬಹಳ ಬಹಳ ಕೃತಜ್ಞತೆ ಆಗಿದಿವಿ ನೀವು ಬಂದಿದ್ದಕೆ ಎಂದು ಹೇಳಿದರು. ನಂತರ ಫೈನಲಿಸ್ಟ್ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್ ಎಂದ ಅಶ್ವಿನಿ ಪುನೀತ್ ಅವರು ಶೋನಲ್ಲಿ ಮಾತನಾಡಿದ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. 

ಅದೆಷ್ಟು ಸರಳತೆ ಇವರು, ಸೇಮ್ ಅಪ್ಪು ಅವರ ಹಾಗೇನೇ ಎಲ್ಲಾ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದ ಫೀನಾಲೆಯಲಿ ಗೆಲ್ಲುವ ಆ ಒಂದು ಜೋಡಿಗೆ ನಟ ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ಪ್ರತಿಮೆ ಟ್ರೋಫಿ ಸಿಗಲಿದೆ. ಹಾಗೆ ಈ ಟ್ರೋಫಿ ಗೆದ್ದ ವಿನ್ನರ್ ಕರ್ಣಾಟಕ ರತ್ನ ಪವರ್ ಸ್ಟಾರ್ ಪುನೀತ್ ಅವರನ್ನ ಮನೆಗೆ ಕರೆದುಕೊಂಡು ಹೋಗಲಿದೆಯಂತೆ. ಹೌದು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ, ಇಷ್ಟ ಆದ್ರೆ ಶೇರ್ ಮಾಡಿ ಹಾಗೆ ನಿನ್ನ ನೆಚ್ಚಿನ ಜೋಡಿ ಯಾರೆಂದು ಕಾಮೆಂಟ್ ಮಾಡಿ ಧನ್ಯವಾದಗಳು....