ಪ್ರಗ್ನೆನ್ಸಿ ಫೋಟೋಶೂಟ್ ಮಾಡಿಸಿದ ತುಂಬು ಗರ್ಭಿಣಿ ನಟಿ ಮಯೂರಿ..! ವಿಡಿಯೋ ಇಲ್ಲಿದೆ..!

Updated: Monday, March 8, 2021, 11:48 [IST]

ಕನ್ನಡ ಕಿರುತೆರೆಯ ಮೂಲಕ ಕಾಲಿಟ್ಟ ನಟಿ ಮಯೂರಿ  ಅಶ್ವಿನಿ ನಕ್ಷತ್ರ ಮೂಲಕ ಎಲ್ಲರಿಗೂ ಚಿರಪರಿಚಿತರಾದರು. ತದನಂತರ ನಟಿ ಮಯೂರಿ ಅಜಯರಾವ್ ಅವರ ಜೊತೆ ಕೃಷ್ಣ ಲೀಲಾ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ದೊಡ್ಡ ಸಿನಿಮಾದಲ್ಲಿ ನಟಿಸಿ, ಎಲ್ಲರಿಂದ ಸೈ ಎನಿಸಿಕೊಂಡರು. ಹೀಗೆ ತಮ್ಮದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ನಟಿ ಮಯೂರಿ ಹೊಂದಿದರು. ಹೌದು ಕಳೆದ ಕೊರೋನಾ ಸಮಯದಲ್ಲಿ ಜೂನ್ 12ಕ್ಕೆ ಮಯೂರಿ, ಅವರ ಗೆಳೆಯ ಅರುಣ್ ಎನ್ನುವರನ್ನು ಮದುವೆ ಮಾಡಿಕೊಂಡು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

ಬಳಿಕ ಅತಿಬೇಗನೆ ಮಯೂರಿ, ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದು, ಈ ಮುಂಚೆಯೇ ಪ್ರಗ್ನೆನ್ಸಿ ಸಿಹಿ ವಿಚಾರ ತಿಳಿಸಿ ಮಯೂರಿ ಗರ್ಭಿಣಿಯಾಗಿರುವ ವಿಚಾರವನ್ನು ಹೇಳಿಕೊಂಡಿದ್ದರು. ಮತ್ತು ಫೋಟೋ ಶೂಟ್ ಕೂಡ ಮಾಡಿಸಿದ್ದರು. ಆದರೆ ಈಗ ಮತ್ತೊಮ್ಮೆ ಸಕ್ಕತಾಗಿರುವ ಪ್ರಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದು, ಈ ಅವತಾರದಲಿ ನಟಿ ಮಯೂರಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಹಾಗೆ ತನ್ನ ಪತಿ ಅರುಣ್ ಜೊತೆಯೂ ಸಕ್ಕತ್ತಾಗಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  {--ADPLACEMENT

ಈ ಪ್ರಗ್ನೆನ್ಸಿ ಫೋಟೋಶೂಟ್ ವಿಡಿಯೋವನ್ನ ಕೂಡ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಹೇಗಿದೆ ಗೊತ್ತಾ? ನೀವೇ ಒಂದು ಬಾರಿ ಇದೇ ಈ ಲೇಖನದ ಕೊನೇಲಿ ಇದೆ ನೋಡಿ. ಮತ್ತು ನಟಿ ಮಯೂರಿ ಪ್ರಗ್ನೆನ್ಸಿ ಫೋಟೋಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು....