ಬಾರಿನಲಿ ಕರ್ತವ್ಯನಿರತ ಪೊಲೀಸರಿಂದ ಭರ್ಜರಿ ಎಣ್ಣೆ ಪಾರ್ಟಿ..! ವಿಡಿಯೋ ಬಾರಿ ವೈರಲ್

Updated: Thursday, October 21, 2021, 11:16 [IST]

ಬಾರಿನಲಿ ಕರ್ತವ್ಯನಿರತ ಪೊಲೀಸರಿಂದ ಭರ್ಜರಿ ಎಣ್ಣೆ ಪಾರ್ಟಿ..! ವಿಡಿಯೋ ಬಾರಿ ವೈರಲ್

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ರಾಜ್ಯದಲ್ಲಿ ಅಥವಾ ದೇಶದಲ್ಲಿ ಕಾಕಿಯನ್ನು ತೊಟ್ಟಿರುವ ಪೊಲೀಸರು ಜನಸಾಮಾನ್ಯರು ಸಣ್ಣ ತಪ್ಪು ಮಾಡಿದರೆ ಬಿಡುವುದೇ ಇಲ್ಲ. ಸಣ್ಣ ತಪ್ಪು ಮಾಡಿದ್ದರೂ ಅವರ ಮೇಲೆ ಆಕ್ಷನ್ ತೆಗೆದುಕೊಳ್ಳುತ್ತಾರೆ. ಹೌದು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರ ಜನಸಾಮಾನ್ಯರನ್ನು ತುಂಬಾನೇ ಪಿಡಿಸುತ್ತಾರೆ. ಜೊತೆಗೆ ತೊಂದರೆ ನೀಡುತ್ತಾ ಯಾರನ್ನು ಬಿಡುವುದಿಲ್ಲ, ನಿಯಮ ಎಂದು ಹೇಳಿಕೊಂಡು ರೂಲ್ಸ್ ಫಾಲೋ ಮಾಡಿ ಎಂದು ಹೇಳುತ್ತಾ ಹೆಚ್ಚು ಅವರಿಂದ ಹಣ ಪಡೆಯುತ್ತಾ ಕೆಲ ಟ್ರಾಫಿಕ್ ಪೊಲೀಸರು ರಿಸಿಪ್ಟ್ ಕೊಡದೆ ಸೀದಾ ಆ ದುಡ್ಡನ್ನು ಜೇಬಿಗೆ ಇಳಿಸುತ್ತಾರೆ.

ಅಂಥಹ ಅದೆಷ್ಟೋ ದೃಶ್ಯಗಳನ್ನು ನೀವೂ ನೋಡಿದ್ದೀರ. ಆದ್ರೆ ಇದೀಗ ಹಾಸನ ಜಿಲ್ಲೆಯ ಲಕ್ಷ್ಮಿಪುರ ಬಡಾವಣೆಯ ಬಾರಿನಲ್ಲಿ ಇಬ್ಬರು ಪೊಲೀಸರು ಮತಮಟ ಮಧ್ಯಾಹ್ನ ಭರ್ಜರಿಯಾಗಿ ಎಣ್ಣೆ ಹಾಕುತ್ತಿದ್ದಾರೆ. ಹೌದು ಇದನ್ನು ನೋಡಿ ಅಲ್ಲಿಯ ಒಬ್ಬ ಯುವಕ ವಿಡಿಯೋ ಮೂಲಕ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ. ನಂತರ ಇವರಿಬ್ಬರಿಗೆ ಪ್ರಶ್ನೆ ಮಾಡಿದ್ದಾನೆ. ಹೆಸರು ಏನೆಂದು ತಿಳಿದುಕೊಳ್ಳಲು ಸಹ ಯುವಕ ಪ್ರಯತ್ನ ಪಟ್ಟಿದ್ದಾನೆ. ಜನಸಾಮಾನ್ಯರಿಗೆ ಎಷ್ಟು ತೊಂದರೆ ನೀಡುತ್ತಿರ, ಈ ರೀತಿ ಎಣ್ಣೆ ಹಾಕುವುದು ನಿಮಗೆ ತಪ್ಪು ಅನಿಸುತ್ತಿಲ್ಲವೆ ಎಂದು ಪ್ರಶ್ನೆ ಮಾಡುತ್ತಾನೆ.

ಹೌದು ಈ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿ ಸಾಕಷ್ಟು ಜನರು ಪೊಲೀಸರು ಮಾಡಿರುವ ಕೆಲಸಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡಿ ಕೆಲವರು ಜನಸಾಮಾನ್ಯರಿಗೆ ಒಂದು ನ್ಯಾಯ, ನಿಮಗೆ ಒಂದು ನ್ಯಾಯಾನಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಪೊಲೀಸರು ಯಾವ ರೀತಿ ಸಿಕ್ಕಿಹಾಕಿಕೊಂಡಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ. ಪೊಲೀಸರು ಮಾಡಿರುವ ಕೆಲಸಕ್ಕೆ ನಿಮ್ಮ ಅಭಿಪ್ರಾಯ ಏನೆಂದು ನಮಗೆ ಕಮೆಂಟ್ ಮಾಡಿ, ಮತ್ತು ವಿಡಿಯೋ ಶೇರ್ ಮಾಡುತ್ತಾ ಕಾರ್ಯನಿರತ ಪೊಲೀಸರು ತಪ್ಪು ದಾರಿ ಹಿಡಿಯದ ಹಾಗೆ ಎಲ್ಲರಿಗೂ ಜಾಗೃತಿ ಮೂಡಿಸಿ, ಧನ್ಯವಾದಗಳು..